ಲಕ್ಷಣರೇಖೆ

ರಾಮಾಯಣದಲ್ಲಿ ವ್ಯರ್ಥವಾದ ಲಕ್ಷ್ಮಣ ರೇಖೆ ಈ ಕಲಿಯುಗದಲ್ಲಿ ಜನ ಸಾಮಾನ್ಯರಿಗೆ ಜಿರಲೆಗಳ, ಜನ ನಾಯಕ ದೇವೇಗೌಡರಿಗೆ ರಾಜಕೀಯ ತರಲೆಗಳ ನಿಯಂತ್ರಣಕ್ಕೆ ಯಶಸ್ವಿಯಾಗಿ ಬಳಕೆಯಾಗುತ್ತಿದೆ. *****

ಎರಡು ಅಂಕದ ನಾಟಕ

ಸೂರ್ಯ! ನೀನು ಎರಡು ಅಂಕದ ನಾಟಕ ಉದಯ, ಅಸ್ತಮ ರಂಗ ಸಜ್ಜಿಕೆ ಬೆಳಕು, ಕತ್ತಲು ನಾಯಕಿ, ನಾಯಕ ಸಪ್ತಪದಿ ಜಾಮಜಾಮಕ್ಕೆ ಮತ್ತೆ ಮಂಗಳದ ಕೆಂಪು ಆರತಿ ನಾಟಕದ ಅಂತ್ಯಕ್ಕೆ! *****