ಸೂರ್ಯ!
ನೀನು ಎರಡು
ಅಂಕದ ನಾಟಕ
ಉದಯ, ಅಸ್ತಮ
ರಂಗ ಸಜ್ಜಿಕೆ
ಬೆಳಕು, ಕತ್ತಲು
ನಾಯಕಿ, ನಾಯಕ
ಸಪ್ತಪದಿ ಜಾಮಜಾಮಕ್ಕೆ
ಮತ್ತೆ ಮಂಗಳದ ಕೆಂಪು ಆರತಿ
ನಾಟಕದ ಅಂತ್ಯಕ್ಕೆ!
*****