ರೊಟ್ಟಿ ರೊಟ್ಟಿಯಲ್ಲಿಲ್ಲ
ಹಸಿವಿನಲ್ಲಿ
ಸುಮ್ಮನೆ ಪಾಪ ಪ್ರಜ್ಞೆ
ಪಾಪದ ರೊಟ್ಟಿಗೆ.
ತಪ್ಪು ರೊಟ್ಟಿಯದೂ ಅಲ್ಲ
ಹಸಿವಿನದೂ ಅಲ್ಲ
ಚಾಣಾಕ್ಷ ರುಚಿಯದು.