Home / Kannada Poems

Browsing Tag: Kannada Poems

ಜಗಮಗಿಸುವ ಬೆಳಕಲ್ಲಿ ಜರಿಸೀರೆಯ ಭಾರಹೊತ್ತು ನಿಂತಿದ್ದಳು ಮದುಮಗಳು ಭವಿಷ್ಯದ ಕನಸುಗಳ ಹೊತ್ತು! ಸಾಕ್ಷಿಯಾಗಿದ್ದವು ಸಾವಿರಾರು ಕಣ್ಣುಗಳು ಹರಸಿದ್ದವು ನೂರಾರು ಹೃದಯಗಳು. ಪತಿಯಾಗುವವನ ಕೈ ಹಿಡಿದು ಸಪ್ತಪದಿಯ ತುಳಿವಾಗ ಅರಳಿತ್ತು ಪ್ರೀತಿ. ರಂಗಾಗಿ...

ಜಡವಾಗದಿರು ಶಿಲೆಯಾಗದಿರು ಇದ್ದು ಸತ್ತಂತೆ ಜೀವನದ ಪಯಣವಿದು ಹೋರಾಟದಂತೆ ಏಳು ಎದ್ದೇಳು ಬಡಿದೆಬ್ಬಿಸು ಚೇತನವ ಹೂಡಿದೋಡಿಸು ಜಡತೆಯ ಅರೆಗಳಿಗೆಯ ವಿಶ್ರಾಂತಿ ಅಳಿವಿನ ದಾರಿಗೆ ರಿಯಾಯಿತಿ ನೀ ಹೇಗಿದ್ದರೇನು? ಎಲ್ಲಿದ್ದರೇನು? ಕನಸು ನನಸಾಗಿಸುವ ಗುರಿ ...

ಯುದ್ಧ ಯುದ್ಧ ಯುದ್ಧ ಎಲ್ಲೆಲ್ಲೂ ಯುದ್ಧ! ದೇಶ ದೇಶಗಳ ಗಡಿಗಳಲ್ಲಿ, ದ್ವೇಷದ ಉರಿಹತ್ತಿದಲ್ಲಿ, ಮತಾಂಧತೆಯ ಮರುಳು ಮುತ್ತಿದಲ್ಲಿ ಅಹಂಕಾರ ಭುಗಿಲೆದ್ದಲ್ಲಿ, ಪ್ರೀತಿ ಮರೆಯಾದಲ್ಲಿ ಎಲ್ಲೆಲ್ಲೂ ಯುದ್ಧ; ಮೃತ್ಯು ಕುಣಿತ. ಉರುಳುವುದು ಹೆಣಗಳ ಸಾಲು ಸಾಲ...

ಬದುಕಿನ ಸಂತೆಯಲಿ ಚಿಂತೆಯ ಹೊರೆ ಹೊತ್ತು ವ್ಯರ್ಥ ಬಳಲಿಕೆಯಲಿ ತೊಳಲುವೆ ಏಕೆ? ಬದುಕಿದು ಮೂರು ದಿನ ಸುಖ ದುಃಖ ಸಮಗಾನ ನಶ್ವರವು ಜೀವನದ ತಾನ ಸಂತೋಷವೇ ಸುಖದ ಸೋಪಾನ ಬರುವ ನಾಳೆಯ ಕುರಿತು ಸುಮ್ಮನೇತಕೆ ಅಳುವೆ ಇಂದಿನ ಸವಿ ಅರಿತು ಸುಖಿಸು ಮನವೇ. ಕಣ್...

ಹುಟ್ಟು ಎಲ್ಲೊ ಹರಿವುದೆಲ್ಲೂ ಸೇರುವುದೊಂದೆ ಕಡಲಿಗೆ ನೀರು ಯಾವ ನದಿಯದಾದರೇನು ಕಡಲ ಒಡಲಿಗಿಲ್ಲ ಭೇದಭಾವ ಹರಿದು ಬಂದುದೆಲ್ಲ ಸ್ವಾಹಾ! ಹುಟ್ಟುವಾಗ ಎಲ್ಲರೊಂದೆ ಬೆಳೆಯುವಾಗ ಹಲವು ಜಾತಿ ಹಲವು ಮತ ಸತ್ತ ಮೇಲೆ ಒಂದೇ ಕಾಟ ನಡುವೆ ಏಕೆ ಅಂತಃಕಲಹ? ದೇವರ...

ಬದುಕಿನ ರಣಾಂಗಣದೆ ಮೋಹಪಾಶಗಳ ಬ್ರಹ್ಮಾಸ್ತ್ರ ಬಂಧನದೆ ಬಳಲುವ ಮನುಜನಿಗುಂಟೇ ಜೀವನ ಹಣ ಅಧಿಕಾರ ಅಂತಸ್ತು ಮಾಯಾಮೃಗದ ಬೆನ್ನೇರಿ ನಿರಾಸೆಯ ಕೂಪಕ್ಕೆ ಬೀಳುವ ಮನುಜನಿಗುಂಟೇ ಸುಖಜೀವನ ನೂರೆಂಟು ಸಮಸ್ಯೆಗಳ ಸುಳಿಯಲಿ ಸಿಕ್ಕು ಚಿಂತೆಯ ಚಿತೆಯ ಮೇಲೆ ಬೇಯು...

ಅಮ್ಮನೇಕೆ ಮೌನವಾಗಿದ್ದಾಳೆ? ನಕ್ಕು ನಲಿದು ನಮ್ಮೊಡನಾಡಿದ ಬೈದು ಹೊಡೆದು ನಮ್ಮ ತಿದ್ದಿದ ಅಮ್ಮನೇಕೆ ಮೌನವಾಗಿದ್ದಾಳೆ? ನೋವು ನಲಿವು ಎಲ್ಲ ತಿಂದು ಏರು ಪೇರುಗಳಲಿ ಈಜಿ ನಮ್ಮ ಜೀವಚೇತನವಾಗಿದ್ದ ಅಮ್ಮನೇಕೆ ಮೌನವಾಗಿದ್ದಾಳೆ? ಪ್ರೀತಿಯ ಹಲವು ಹರವುಗಳ ...

ಬರೆಯಬೇಕು ಚಿತ್ತಾರ ಅಂಗಳಕ್ಕೊಂದು ಶೃಂಗಾರ ಕಸಕಡ್ಡಿ ಕಲ್ಲು ಮಣ್ಣು ಗುಡಿಸಿ ತೊಳೆದು ಬಳಿದು ನೆಲವಾಗಬೇಕು ಬಂಗಾರ ಬರೆಯಬೇಕು ಚಿತ್ತಾರ ಚಿತ್ತಾರವಾಗಬೇಕು ಸುಂದರ ಉದ್ದ ಗೆರೆಗಳಾದರೆ ಲೇಸು ಅಡ್ಡ ಗೆರೆಗಳಾದರೆ ಸಲೀಸು ಸಣ್ಣ ಚುಕ್ಕಿ ದೊಡ್ಡ ಚುಕ್ಕಿ ಕ...

ಮನೆಯ ತುಂಬ ಹಾರಿಕೊಂಡು ಅಡುಗೆ ಮನೆಗೆ ನುಗ್ಗಿಕೊಂಡು ಅಂಗಳದಲ್ಲಿ ನಲಿದುಕೊಂಡು ನಮ್ಮ ನೋಡಿ ಹೆದರಿಕೊಂಡು ಬುರ್ರೆಂದು ಹಾರಿ ಹೋಗಿ ಮತ್ತೆ ಮತ್ತೆ ಇಣುಕುತ್ತಿದ್ದ ಚಿಲಿಪಿಲಿ ಹಾಡಿಕೊಂಡು ಮಕ್ಕಳಿಗೆ ಕುಶಿ ಕೊಡುತ್ತಿದ್ದ ಗುಬ್ಬಚ್ಚಿಗಳೆಲ್ಲಿ ಕಾಣೆಯಾದ...

ಮುಗಿಲೆತ್ತರ ಏರುವ ಹಾರುವ ತೇಲಾಡುವ ಬಯಕೆ ಬಲಿತು ಹೆಮ್ಮರ ಕಡಿದಾದ ದಾರಿ ಬಲುದೂರ. ಕಾಣದ ತೀರ ಗುರಿ ಸೇರುವ ಕಾತುರ ಹುಚ್ಚು ಮನಸ್ಸಿಗಿಲ್ಲ ಕಡಿವಾಣ ಪುಂಖಾನುಪುಂಖ ನಿರಾಸೆಯ ಬಾಣ ಆಸೆಗಳು ಆಗಸದಷ್ಟು ಕನಸುಗಳು ಕಡಲಿನಷ್ಟು ನನಸಾಗದೆ ಉಳಿಯುವುದೇ ಹೆಚ್...

1...7891011...14

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...