ಜಡವಾಗದಿರು ಶಿಲೆಯಾಗದಿರು
ಇದ್ದು ಸತ್ತಂತೆ
ಜೀವನದ ಪಯಣವಿದು
ಹೋರಾಟದಂತೆ
ಏಳು ಎದ್ದೇಳು
ಬಡಿದೆಬ್ಬಿಸು ಚೇತನವ
ಹೂಡಿದೋಡಿಸು ಜಡತೆಯ
ಅರೆಗಳಿಗೆಯ ವಿಶ್ರಾಂತಿ
ಅಳಿವಿನ ದಾರಿಗೆ ರಿಯಾಯಿತಿ
ನೀ ಹೇಗಿದ್ದರೇನು? ಎಲ್ಲಿದ್ದರೇನು?
ಕನಸು ನನಸಾಗಿಸುವ
ಗುರಿ ಮುಂದಿರಲಿ
ಸಾಧಿಸುವ ಛಲವಿರಲಿ
ಇರಲಿ ನೂರಾರು ಕಷ್ಟ
ಬರಲಿ ಸಾವಿರಾರು ನಷ್ಟ
ಹೆದರದಿರು ಎದೆ ಗುಂದದಿರು
ಮುಂದಿರುವ ಎಡರು ತೊಡರು
ದೂರ ಸರಿಸು ಭಯ ಆತಂಕವ
ಪಡೆದುಕೊ ಆತ್ಮವಿಶ್ವಾಸವ
ಅಡಿ ಮುಂದಿಡು ನೀನು
ತಲುಪುವೆ ತೀರವನು
ಧರಿಸುವೆ ಜಯದ ಮಾಲೆಯನು
*****