ಬದುಕಿನ ಸಂತೆಯಲಿ
ಚಿಂತೆಯ ಹೊರೆ ಹೊತ್ತು
ವ್ಯರ್ಥ ಬಳಲಿಕೆಯಲಿ
ತೊಳಲುವೆ ಏಕೆ?
ಬದುಕಿದು ಮೂರು ದಿನ
ಸುಖ ದುಃಖ ಸಮಗಾನ
ನಶ್ವರವು ಜೀವನದ ತಾನ
ಸಂತೋಷವೇ ಸುಖದ ಸೋಪಾನ
ಬರುವ ನಾಳೆಯ ಕುರಿತು
ಸುಮ್ಮನೇತಕೆ ಅಳುವೆ
ಇಂದಿನ ಸವಿ ಅರಿತು
ಸುಖಿಸು ಮನವೇ.
ಕಣ್ಣಾ ಮುಂದಿರೆ ನಗುವಿನ ಕ್ಷಣ
ಬಳಿಯುವಿರೇಕೆ ಅಳುವಿನ ಬಣ್ಣ
ದುಮ್ಮಾನವೇ | ನೋವಿನ ಬಾಣ
ಸಮ್ಮಾನವೇ । ನೆಮ್ಮದಿಯ ತಾಣ
*****