ನೀನೆನ್ನ ಭಾವನ ನೀನೆನ್ನ ಕಲ್ಪನಾ ನೀನೆನ್ನ ಜೀವನ ನಿನ್ನೊಂದಿಗೆ ಸಹಗಮನ ಎಂದಿದ್ದ ಗೆಳತಿಯ ಗಂಡ ಗೆಳತಿ ಸತ್ತವಾರದೊಳಗೆ ಮತ್ತೊಬ್ಬಳ ಗಂಡ *****...
ಗರ್ವವೆಂಬುದು ಹೂವಿನ ಬಳಿ ಸುಳಿಯದು ಎಷ್ಟೊಂದು ಚೆಲುವು ಘನವಾದ ಒಲವು ನಿರಂತರ ಧ್ಯಾನದ ಫಲವು ಮೈತ್ರಿ-ಕರುಣೆ ಎಂದು ಬುದ್ಧ ಬೋಧಿಸಿದ್ದ ಪೂರ್ವಜನ್ಮದ ಸ್ಮರಣೆ ಅವನು ಹೂವಾಗಿದ್ದ. *****...
ಅಧ್ಯಾಯ ೧೬ ವೃದ್ದಾಪ್ಯ ಶಾಪವೇ? ಭಾನುವಾರ ರಜಾ ಆದ್ದರಿಂದ ನಿಧಾನವಾಗಿ ಎದ್ದು ಪತ್ರಿಕೆಯತ್ತ ಕಣ್ಣಾಡಿಸುತ್ತ ಇದ್ದವಳಿಗೆ ‘ಅಸಹಾಯಕರಿಗೊಂದು ಆಸರೆ ವೃದ್ಧಾಶ್ರಮಗಳು’ ಎಂಬ ಲೇಖನ ಗಮನ ಸೆಳೆಯಿತು. ವೃದ್ದಾಪ್ಯ ಶಾಪವೇ ಎಂಬ ಅನುಮಾನ ಇತ್ತೀಚಿನ ದಿನಗಳಲ್...
ಹರವು ಹೆಚ್ಚಲು ಮುಗಿಲ ನೆಲದಲಿ ಬೆಳಕು ಚಿಮ್ಮಿತು ಕೊಸರು ಕರಗಲು ಹಸೆಯು ಹರಡಲು ಎದೆಯ ಬನದಲಿ ತನ್ನಿಂತಾನೇ ಚೆಲುವು ಮೂಡಿತು. ಯುಗವು ಕಳೆಯಲು ಯುಗವು ಮರಳಲು ಜಗದ ನಿಯಮ ಸಹಜವಾಗಲು ವಿಳಂಬಿ ವಿಳಂಬವೆನ್ನದೇ ದಾಪುಗಾಲು ಹಾಕಿ ಬರುತಿರೆ ಹೇಮಲಂಬಿ ಹಳೆಯ ...
ಅವಳ ಕೆನ್ನೆಗೆ ನಗು ಬಳಿದು ಹೋದ ಅವನ ಮುಗ್ಧತೆ ಇದೀಗ ಬದುಕಿನ ಸಂತೆಯಲ್ಲಿ ಬೆಲೆ ಕಳೆದುಕೊಂಡಿದೆ. *****...
ನಮ್ಮ ನಾಗರಿಕತೆಯತ್ತ ನೋಡಿದರೆ ನಾವು ಮನುಷ್ಯ ಸಮೂಹವಾಗಿ ಸಂಪಾದಿಸಿಕೊಂಡಿರುವ ಜ್ಞಾನಸಂಪತ್ತು ಅಗಾಧವೂ ಅಪರಿಮಿತವೂ ಆದುದು ಎಂದು ನಮಗನಿಸಬಹುದು. ಆದರೂ ನಾವು ಅರಿಯುವುದಕ್ಕೆ ಇನ್ನಷ್ಟು ಇದೆ-ಅದೆಷ್ಟು ಎನ್ನುವ ಬಗ್ಗೆ ನಮಗೆ ಸರಿಯಾದ ಅರಿವಿಲ್ಲದಷ್ಟು...
ಕೇಳಿಸಿಕೊಳ್ಳುವವನಂತೆ ದೂರ ದೂರ ಬಹು ದೂರದ ಮೌನ… ಉಸಿರು ಬಿಗಿ ಹಿಡಿದು ಕಿವಿಗೊಟ್ಟರೂ ನಮಗೆ ಕೇಳದ ನಿಶ್ಯಬ್ಧ. ಅವನೊಂದು ನಕ್ಷತ್ರ. ಅಸಂಖ್ಯ ಬೃಹತ್ ತಾರೆಗಳು, ನಮ್ಮ ಕಣ್ಣಿಗೆ ಕಾಣದೆ, ಅವನ ಸುತ್ತುವರೆದಿದೆ. ಅವನೇ ಎಲ್ಲಾ. ಇಲ್ಲೆ ಸುಳಿದಾಡ...
ಮೋಹನ ಮುರಳಿ ಕೃಷ್ಣಾ ಬೆಳದಿಂಗಳಿನಾ ಸಂಜೆಯಲಿ ಕೊಳಲನಾದದ ಅಲೆಗಳು ರಾಧೆಯ ಮನವನು ಕಾಡುವುವು ಎಲ್ಲಿರುವೆ ಹೇಳು ಮುಕುಂದಾ || ಎಲ್ಲಿ ಹುಡುಕಿದರು ಕಾಣದಾಗಿರುವೆ ಕಾಣುವಾತುರದಿ ರಾಧೆಯ ಕಂಗಳು ಮುದ್ದಾಡುವಾತುರದಿ ಮನವು ವಿರಹದ ವೇದನೆಯಲಿ ರಾಧೆಯೂ || ಚ...
ಯಾವ ಘೋಷ ಇದು ಇದಕ್ಕಿದ್ದಂತೆ ಈ ಕನಕಾಂಬರಿ ಸಂಜೆಯಲಿ ? ತೇಲಿ ಹಾಯುತಿದೆ ಪರಿಮಳದಂತೆ ತುಂಬಿ ಹರಿವ ಈ ಗಾಳಿಯಲಿ ತಾಳಮೃದಂಗದ ಬಡಿತ ಹಬ್ಬುತಿದೆ ಹೃದಯಕೆ ಲಗ್ಗೆಯ ಹೂಡುತಿದೆ ಮೋಹಕ ಗಾನದ ಕಂಠದೇರಿಳಿತ ಜೀವಕೆ ಮರುಳನು ಕವಿಸುತಿದೆ ಯಾವ ಅಲೌಕಿಕ ಶ್ರುತಿ...
ಕೊಟ್ಟ ಹೆಣ್ಣು ಕುಲಕ್ಕೆ ಹೊರಗು; ಸತ್ಯಾಂಶ ವೆಂದರೆ ಅವಳು ಕುಲಕ್ಕೆ ಕೊರಗು! *****...
“ಏನೇ ಗೌರಿ ಯಾವಾಗ ಬಂದೆ ಗಂಡನ ಮನ್ಯಾಗೆಲ್ಲಾ ಘನಾಗಿದ್ದಾರೇನೆ?” ಎಂದು ಕಂಕುಳಲ್ಲೊಂದು, ಕೈಯಲ್ಲೊಂದು ಮಕ್ಕಳನ್ನು ಹಿಡ್ಕೊಂಡು ವಾರಗಿತ್ತಿಯರು ಕೇಳುವವರೇ. “ವೂ ಕಣೇ, ವೂ ಕಣಕ್ಕ, ನೀವೆಲ್ಲಾ ಘನಾಗಿದೀರೇ” ಎಂದು ಹೇಳಿ ಉತ್ತರಕ್ಕೂ ಕಾಯದೆ ಮನೆ ಸೇರಿದಳು. ಗ...
ನಮ್ಮ ಹಳ್ಳಿ ಬಹಳ ಚಿಕ್ಕದು. ಇರುವುದೆಲ್ಲಾ ನೂರು ಮನೆಗಳು. ಸುಮಾರು ಆರುನೂರು ಪ್ರಜಾಸಂಖ್ಯೆ. ಒಟ್ಟಿನಲ್ಲಿ ನೆಮ್ಮದಿ ಗ್ರಾಮವೆಂದೇ ಹೇಳಬೇಕು. ನಮ್ಮ ಪಟೇಲ ಒಳ್ಳೆಯವನೆಂದೇ ಹೆಸರು ಪಡೆದಿದ್ದಾನೆ. ಅವನು ತನ್ನ ಕೈಲಾದಷ್ಟು ಗ್ರಾಮಸ್ಥರಿಗೆ ಉಪಕಾರ ಮಾಡಿದ್ದಾನೆ. ಒಂದು ದೇವಸ್ಥಾನ, ಒಂದು ಅ...
ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...
ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...
ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...
ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...







