ಏಕಾಂಗಿಯಾಗಿ ಮಲಗಿದ್ದ
ಇರುಳಿನ ಜೊತೆಗೆ
ಬೆಳಕು ಬಂದು
ಮಲಗಿತು ಮೆಲ್ಲಗೆ
ಬಣ್ಣ ಬಂತು ಬಾನಿಗೆ
ಹಾಡು ಬಂತು ಹಕ್ಕಿಗೆ
ಸಂಪೂರ್‍ಣ ಶರಣಾಯಿತು
ಅಬಲೆಯಾಗಿ ಇರುಳು
ಬಲಾಢ್ಯ ಬೆಳಕಿಗೆ
ಅದರ ಝಳಪಿಗೆ
ಬಾಹು ಬಂಧನದ
ಬಿಗಿಯಿಂದ ಬಿಡಿಸಿಕೊಂಡು
ಏಳುವುದರೊಳಗೆ
ಅಗಣಿತ ತಾರೆಗಳ
ಹೆರಿಗೆ
*****