ತೀರ್ಮಾನ
ಸಾವು ಬಾಳಿನ ಕೊನೆಯ ತೀರ್ಮಾನ ಶಾಂತಿ ಬಹುಮಾನ ಸ್ವರ್ಗ ಸೋಪಾನ ****
ಸತ್ಯ, ಸೂರ್ಯನಂತೆ ನೋಡುವುದು ಕಷ್ಟ ಸತ್ಯ, ಅಗ್ನಿಯಂತೆ ನುಂಗುವುದು ಕಷ್ಟ ಸತ್ಯ, ಬೆಟ್ಟದಂತೆ ದಾರಿ ಸವೆಸುವುದು ಕಷ್ಟ ಸತ್ಯ ಸಾಗರದಂತಾಗಲಿ ಮುಳುಗಿ ಮುಳುಗಿ ತೇಲುವುದು ಒಳಿತು ****
ಮಲ್ಲಿಗೆ ಸಂಪಿಗೆ ಹೂವಾಗಿ ಬಾಳಿವೆ ಕಣಕಣದಿ ಮಾವು ಬಾಳೆ ಫಲವಾಗಿ ಮಾಗಿವೆ ಕ್ಷಣ ಕ್ಷಣದಿ ನಾ ಕಳೆದೆ ಬಾಳೇಕೆ ಭಣ ಭಣದಿ? ****
ಜೈ ಭಾರತ ಜನನಿಯ ತನುಜಾತೆ ಜಯಹೇ ಸೈಬರ್ನಾಟಕ ಮಾತೆ ಸೈಬರ್ ಶಕೆಯು ಭವ್ಯತೆ ನೋಡು ಮೌನದಿ ಉರುಳುವ ಮೌಸಿನ ಬೀಡು ಜೈ ಭಾರತ ಜನನಿಯ ತನುಜಾತೆ ಜಯಹೇ […]