ಪಾತ್ರಧಾರಿ
ರಾತ್ರಿ ಹೆಂಡತಿಯ ಹೊಡೆತ ಮಕ್ಕಳ ಬೈಗಳು ಹಣದಕಿತ್ತಾಟ ಕೂಳಿಲ್ಲದೆ ಬಿದ್ದೆದ್ದು ಮತ್ತೆ ತಯಾರಾಗುತ್ತಾನೆ ಹಗಲಿಗೆ – ವೇಷ ಬದಲಿಸಿ ಮಹಾರಾಜನಾಗಿ ದರ್ಬಾರು ಏರಿ ಕೈ ಕಾಲು ಹಿಸುಕಿಸಿಕೊಳ್ಳಲು. […]
ರಾತ್ರಿ ಹೆಂಡತಿಯ ಹೊಡೆತ ಮಕ್ಕಳ ಬೈಗಳು ಹಣದಕಿತ್ತಾಟ ಕೂಳಿಲ್ಲದೆ ಬಿದ್ದೆದ್ದು ಮತ್ತೆ ತಯಾರಾಗುತ್ತಾನೆ ಹಗಲಿಗೆ – ವೇಷ ಬದಲಿಸಿ ಮಹಾರಾಜನಾಗಿ ದರ್ಬಾರು ಏರಿ ಕೈ ಕಾಲು ಹಿಸುಕಿಸಿಕೊಳ್ಳಲು. […]
ಗುಡಿಯೊಳಗಿನ ಕಲ್ಲಿಗೆ ರೇಶ್ಮೆ ಸೀರೆ ಉಡಿಸಿ ಹೂವು ಮುಡಿಸಿ ಆಭರಣ ತೊಡಿಸಿ ಮಾತೆ ಎನ್ನುವ ನೀವು ಹೊರಗೆ ಜೀವಂತಿಕೆಯ ಮುಡಿ ಎಳೆದು ಕೆಡವಿ ಸೀರೆ ಸೆಳೆದು ಅಬಲೆಯಾಗಿಸುವಿರಲ್ಲ!! […]
ಅಸಲಿ ಕಣ್ಣೀರುಗಳು ಕತ್ತಲೆಯಲ್ಲಿಯೇ ಕರಗಿ ಹೋಗುವಾಗ…. ಮೃದು ಭಾವನೆಗಳು ಮುರುಟುವಾಗ…. ನಕಲಿ ಕಣ್ಣೀರುಗಳದೇನು? ಬಳ ಬಳನೇ ಸುರಿಯುತ್ತಿವೆ ನೂರಾರು ಬಲ್ಬು ಬೆಳಕಿನ ಸಿನೇಮಗಳಲ್ಲಿ. *****
ಚಂದ್ರಿ, ನನಗ ಗೊತ್ತಿಲೇನು ನಿನ್ನ ಅದ್ಹೆಂಗೆ ವರ್ಣಿಸ್ತಾರ ಅಂತ ದಾಳಿಂಬ ಹಲ್ಲು, ಸಂಪಿಗೆ ಮೂಗು ಮೀನಿನ ಕಣ್ಣು, ಬಿಲ್ಲು ಹುಬ್ಬ ಹಾವಿನ ಹೆಡೆ, ಸೂಚಿಪರ್ಣಿ ಎದೆ, ಇನ್ನೂ […]
ಊಟ ತಿಂಡಿ ಬಟ್ಟೆ ಬರೆ ಮನೆಕೆಲಸಗಳ ಮಹತ್ವ ತಿಳಿಸಲು ಆಗಾಗ ಹೆಂಡತಿ ಏನೇನೋ ನೆಪಮಾಡಿ ತೌರಿಗೆ ಹೋಗಬೇಕು. *****
ಮತ್ತೇರಿಸುವ ಮುತ್ತು ನಮಗೆ ಗಮ್ಮತ್ತು ಮತ್ತೇರಿಸುವ ಮದಿರೆಯ ಮೊತ್ತು (ಬಿಲ್) ಎದುರಿಗೆ ಬಂದಾಗ ತೆತ್ತಲು ಎದುರಿಸಬೇಕಾದುದು ನಿಮ್ಮ ನಿಮ್ಮ ಕಿಮ್ಮತ್ತು. *****
ಬಿಸಿಲ್ಗುದುರೆಯನೇರಿದಾಗ ಒಂದೇ ನೆಗೆತಕ್ಕೆ ಸೂರ್ಯದೇವನ ರಥದ ಗಾಲಿಗೆ ಸಿಲುಕಿ ಒದ್ದಾಡಿ ಅಸ್ತಿತ್ವವನ್ನೆಲ್ಲಾ ಕಳೆದುಕೊಂಡು ಹುಚ್ಚನಂತಾಗಿ ಹೊರಳಾಡಿದರೂ ಅದರ ಮತ್ತೊಂದು ರೂಪ ಜೋರಾಗಿ ನಕ್ಕು ಆಹ್ವಾನಿಸುತಿದೆ. *****
ತನ್ನಷ್ಟಕ್ಕೆ ತಾನು ನಡೆದು ಹೋಗುತ್ತಿದ್ದರೂ ಮೈಯೆಲ್ಲಾ ಸಾವಿರ ಕಣ್ಣು ಮಾಡಿಕೊಂಡು ಯಾರೋ ನೋಡಿದಾಗ ಭಯಗೊಂಡು ಬೆವೆತು ಚಕ್ಕನೆ ಆ ಕಡೆ ಸರಿದರೆ ಯಾರು ಇಲ್ಲ ಆದರೂ – […]