Home / Kannada Poem

Browsing Tag: Kannada Poem

ಹೆಣ್ಣಿರದ ಬಾಳು ಬಾಳೇ ಬಣಗುಡುತ್ತಿದೆ ಬದುಕು ಬೆಳಕು, ಬಿನ್ನಾಣ, ಶೃಂಗಾರವಿಲ್ಲದಲೆ| ಒಂಟಿತನದಲಿ ಅದೇನು ಸುಖವಿದೆಯೋ ಕಾಣೆ! ಗಂಡಿನ ಈ ಒಣ ಹರಟೆಗೆಲ್ಲಿದೆ ಮಾನ್ಯತೆಯು|| ಹೆಣ್ಣಿರದ ಮನೆಯು ದೀಪವಿಲ್ಲದ ಗುಡಿಯಂತೆ, ಗೃಹಿಣಿ ಇಲ್ಲದ ಮನೆಯು ಕಳಸವಿಲ್ಲ...

ವಿಶ್ವವು ಒಂದಾಗಲಿ… ಬಾಳಲಿ ಏಳಿಗೆ ಕಹಳೆಯು ಮೊಳಗಲಿ ದಿಗ್ದೆಸೆಗಳಲಿ ತಪ್ಪಾಗದೆ ಇರಲಿ ಎನ್ನುವ ಪ್ರೇಮದ ಕೂಗು, ವ್ಯಾಪಕವಾಗಿ ತಬ್ಬುತಲಿರುವಾಗ ಒಡೆಯುವ ಮಾತನು ಆಡದಿರಿ; ಸಣ್ಣವರಾಗದಿರಿ ಕನ್ನಡಕ್ಕೆ ದ್ರೋಹವ ಬಗೆಯದಿರಿ ಆದಿಕವಿ ಪಂಪನಿಗೆ ಇರಿಯ...

ಕವಿದ ಮೋಡ ಕಪ್ಪಾದರೇನು ಭಾವನೆಗಳು ಬರಡಾಗವು ಮೋಡಗಳ ಮರೆಯಲ್ಲಿ ಜೀವನವಿಹುದು ಅಪಾರ || ತಿಳಿಯಾದ ಗಾಳಿ ಬೀಸಲು ಬಿಳುಪಾಗದೆ ಮೋಡ ಕಾರಿಮೋಡ ಸರಿದು ಬಾರದಿರನೇ ಚಂದಿರ || ಕಷ್ಟಗಳು ಕಳೆದು ಸುಖಶಾಂತಿ ಬಾರದೇನು ಯಾರಿಗೂ ಯಾರಿಲ್ಲಾ ನಿನ್ನ ಬಾಳಿದು ನಿನ್...

‘ಬಿಡಿ ಬಿಡಿ, ಎಲ್ಲ ಬರಿ ಉಡಾಫೆ’ ಎಂದೆ, ನಕ್ಕರು. ‘ನೋಡು ಮರಿ, ಹತ್ತಾರು ಬಾರಿ ಹೋಗಿ ಬಂದಿರುವ ದಾರಿ, ಹೆಜ್ಜೆ ಗುರುತಿರುವ ಕಾಡು ಬೇಕಾದರೆ ಬಂಡವಾಳ ಹೂಡು. ಆದರೆ ಒಂದು ವಿಷಯ ಊರಿರುವದೇ ಆಚೆ ಹೋಗಿ ಸೇರಲೇ ಬೇಕು, ದಾರಿ ಸಾಗಲೇ ಬೇಕು, ತಕ್ಕ ಆಸಕ್ತ...

ನಿನ್ನ ರಾಣಿಗೆ ನೀನೆ ಮೇಣೆಯು ಅವಳೆ ನಿನ್ನಾ ಮೇನಕೆ ಅವಳ ಅಪ್ಪುಗೆ ನಿನ್ನ ಮುಪ್ಪನು ರೂಪ ಗೊಳಿಪಾ ರಾಧಿಕೆ ||೧|| ಅವಳ ಉಡಿಯಲಿ ತೂಗು ತೊಟ್ಟಿಲು ನೂರು ಚುಂಬನ ಚಿಮುಕಿಸು ನೀನೆ ಮಗುವೈ ಅವಳೆ ತಾಯೈ ತಾಯ ಗಿಮಿಗಿಮಿ ತಿರುಗಿಸು ||೨|| ಅವಳ ಹೆಳಲಿನ ತೋ...

ಹಿಂದೂ ದೇಶ ದೊಡ್ಡದು ಹಿಂದೂ ಧರ್ಮವೆಂದೂ ಹಿರಿದು|| ಎಲ್ಲ ಧರ್ಮಿಯರೊಡನೆ ಬೆರೆತು ಬಾಳುವ ಹಿರಿಮೆ ನಮ್ಮದು|| ನೂರು ಕುಲ, ನೂರು ಜಾತಿ ನೂರು ಭಾಷೆ, ಹತ್ತಾರು ಧರ್ಮ | ಆದರಿಲ್ಲಿ ಎಲ್ಲರೊಂದೇ ಎಂಬ ಭಾವ ಜಾತಿ ವಿಷಬೀಜವ ಬಿತ್ತಲಿಲ್ಲಿ ಬೆಳೆಯದೆಂದೆದಿಗ...

ಮಲಿನ ಹೃದಯದ ಮಂದಿ ಅರಿಯದೇರಿದರು ಗದ್ದುಗೆಯ ಬರಿದಾಯ್ತು ಮಾರಿದರು ಹಿರಿಮೆಯ. ಗೆದ್ದ, ಬದ್ಧ, ಸಿದ್ಧರಿಂದ ತುಂಬಿರದ ಮಂದಿರಗಳು ಉದ್ಧಾರದ ಹಸಿರು ಹಂದರಗಳಾಗದೆ ನಂದಿಸಿವೆ ಸಿಂಧೂರ ಸೌಭಾಗ್ಯವ. ಗುರುವಿಗೂ ದೇವರಿಗೂ ಬೇಧವಿರಲಿಲ್ಲ ಅಂದು; ಉದರ ನಿಮಿತ್...

ನಾನು ನಿನ್ನ ಪ್ರೀತಿ ಕನಸನು ಹೆಣೆಯುವ ಹಕ್ಕಿ ಮನಸಿನ ಭಾಷೆಯ ಚಿತ್ತಾರ ಬಿಡಿಸುವ ಚುಕ್ಕಿ || ಪ್ರೇಮದ ಬಲೆಯನು ಬೀಸಿ ವಿರಹದ ಎಳೆಯನು ಕಟ್ಟಿ ಸ್ವಚ್ಚಂದ ಭಾವದ ಪ್ರೀತಿಯ ಸೆಳೆಯುವ ಹಕ್ಕಿ || ನಿನ್ನನ್ನು ಕೂಡಿ ಗಗನಕೆ ಹಾರಿ ಹಾರುತ ಹಾರುತ ಮೌನ ಮಾತಾಗ...

ರಸ್ತೆ ನಡುವೆ ರಾಗಿ ಚೆಲ್ಲಿಕೊಂಡು ಬಾಚಿ ಎತ್ತಲೂ ಆಗದೆ ನಿಂತಿದ್ದಾನೆ ಹುಡುಗ. ಬಾಯೊಡೆದ ಚೀಲ ಬಿದ್ದಿದೆ ಬೀದಿನಡುವೆ; ಹಾಯುತಿದೆ ಅದರದೆಯ ಮೇಲೆಯೇ ಒಂದೆ ಸಮ ಕಾರು ಸ್ಕೂಟರ್ ಲಾರಿ, ಈಟಿದನಿಯಲಿ ಮೈಲಿ ಎಚ್ಚರಿಕೆ ಚೀರಿ. ಬಿದ್ದ ಕಾಳಿನ ಮೇಲೆ ಒದ್ದೆ ...

ಭೂತಾ ಬಂದಾವು ನೋಡಿರೇ ಮನಶಾರ ಕೂತಾ ತಿಂದಾವು ನೋಡಿರೇ ||ಪಲ್ಲ|| ಏಳು ಕೊಳ್ಳದ ಭೂತ ಗಾಳ ಕಣ್ಣಿಯ ಭೂತ ರಾಳ ಕಣ್ಣಿನ ಭೂತ ಬಂದಾವೇ ಕರಿಯ ಕಾರಿನ ಭೂತ ಬಿಳಿಯ ಕಾರಿನ ಭೂತ ಕಂಠ ಪಟ್ಟಿಯ ಭೂತ ಬಂದಾವೇ ||೧|| ಹುಬ್ಬಳ್ಳಿ ಹೆಬ್ಬಳ್ಳಿ ಕಬ್ಬಳ್ಳಿ ಮುಳಗಳ್...

1...5657585960...81

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....