ಚಿಟ್ಟಿ ನೀ ಸತ್ತು ಬಿದ್ದಿ ಏಕೆ
ನಿನ್ನ ಮಾನ ಪ್ರಾಣ ಈಗ
ಹಾರಿ ಹೋಯ್ತು ಎಲ್ಲಿಗೆ ||

ಫಳಫಳನೆ ಹೊಳೆವ ನಿನ್ನ
ಮೈಯ ಮುಟ್ಟಿ ನೋಡಿದೆ
ನನ್ನ ಮನವು ಕರಗಿತಮ್ಮ ||

ನಲಿಯುತ್ತ ಹಾರುತ್ತಾ ಬಂದೆ
ಹೂವ ತಣಿಸಿ ನಿಂದೆ ಮುಂದೆ
ಹೊರಟೆ ನೀ ಎಲ್ಲಿಗೆ ||

ಯಾವ ಘಳಿಗೆ ಹಾರಿಹೋಯ್ತೊ
ಯಾವ ಜನುಮ ಬರಸೆಳೆಯಿತು
ನಿನ್ನ ನೋಡಿದ ಘಳಿಗೆ ವಿಧಿಯಾಟವ ನೆನೆದು ||

ಬಂಧು ಬಳಗವಿಲ್ಲ ಜೊತೆ
ಬಂದ ಕ್ಷಣಕೆ ಇದ್ದರೂ ಆಗ
ಯಾರು ಇಲ್ಲವು ನಿನ್ನತನಕೀಗ ||

ಬಣ್ಣ ಬಣ್ಣ ನೂರೆಂಟು ಭಾವ
ಕಲ್ಪನಾ ಚಿತ್ತಾರ ಚಂಚಲ
ವೈಯ್ಯಾರ ಕಟ್ಟಿ ಮಾಸದೆ ಬುತ್ತಿ ||

ನಿನ್ನ ಹಿಡಿವ ಆಟದಲ್ಲಿ
ನನಗೆ ನೂರು ಸಂಭ್ರಮ
ಕೈಗೆ ಸಿಗದೆ ಹಾರಿ ಬಿಡುವ
ನಿನ್ನ ಜಾಣ್ಮೆ ಅನುಪಮ ||

ನಿನ್ನ ಹಿಡಿಯದಾದರೂ ಚಿಣ್ಣರು
ನಾ ಹಿಡಿದೇ ಹಿಡಿದರು ನೀನು
ಸ್ಫೂರ್ತಿಯಾಗಿ ಹಾರಿ ಹೊರಟೆ ಎಲ್ಲಿಗೆ ||
*****