ಬೇವು ಬೆಲ್ಲದ
ಮಾವು ಚಿಗುರಿನ
ಹೊಸ ವರುಷ ಹೊನಲು ||

ಹೊಸ ಹೊಸ ತನುವು
ದಿಕ್ಕು ದಿಕ್ಕಿನ ನೆಲೆಯಲಿ
ಋತು ಮಿಲನದ ಹಾಡು ||

ಚೈತ್ರದ ಚಿಗುರಿನ
ಜೊನ್ನ ಜೇನಿನ
ದುಂಬಿ ಉಲಿದ ಹಾಡು ||

ದಣಿದಿಹ ಮನಕೆ
ಚೈತನ್ಯ ತುಂಬಿದ
ಅಗಣಿತ ಮಧುರ ಹಾಡು ||

ಯುಗ ಯುಗಾದಿಯ
ಹೊಸ ಸಿರಿಯ ಕೆಳೆಯಲಿ
ಹಿಗ್ಗಿ ನಲಿದ ಹಾಡು ||

ಸಿರಿತನ ಬಡತನ
ತಾರತಮ್ಯವಿಲ್ಲದ
ಹಸಿರು ಬಿತ್ತು ಬೆಳೆಸುವ
ಹೊಸ ಬದುಕಿನ ಹಾಡು ||
*****