Home / Anandakanda

Browsing Tag: Anandakanda

(ಒಂದು ಸಾಂಪ್ರದಾಯಿಕ ಭಾವನೆಯ ಉತ್ಪ್ರೇಕ್ಷೆ) ೧ ರಾತ್ರಿ ಸತೀಪತಿ ಚಂದಿರನು-ಕತ್ತಲೆಯೆಂಬಾ ಕುಲಟೆಯಲಿ ಇರುಳೆಲ್ಲವು ರತನಾಗಿರುತ-ಪರಿಪರಿಯ ಸರಸವಾಡುತಲಿ ಜಗಕಿಂದು ಮೊಗವ ತೋರಿಸಲು-ಬಗೆಯೊಳು ನಾಚಿಕೆಯೊಂದುತಲಿ, ‘ಮಲಗಿದ ಜನರೇಳುವ ಮೊದಲು ಮರೆಯಾಗುವೆ’ ...

ಎಂತು ನೀನಿಹೆಯೋ-ಪರಾತ್‌ಪರ ಎಲ್ಲಿರುತಿಹೆಯೋ ? ಎಂತು ನೀನಿಹೆಯೋ ನಿನೆಲ್ಲಿರುತಿಹೆ ನಿನ್ನ ಅಂತವ ತಿಳುಹಿ ನಿಶ್ಚಿಂತನ ಮಾಡೆನ್ನ! ೧ ಅಣುರೇಣು-ತೃಣ- ತೃಟಿಯೊಳು ವ್ಯಾಪಿಸಿದ ನಿನ್ನ ಘನತರ ರೂಪವನರಿತುಕೊಳ್ಳದೆಯೆ…. ಮನಕೆ ಬಂದಂತೆ ಚಿತ್ರಿಸಿ ಪೂ...

ಏನು ಮುನ್ನಿನ ಜನ್ಮದಲಿ ಪುಣ್ಯಗೈದಿರುವೆ ಇಂಚರದ ಕೊಳಲೆ ನೀನು ? ಗಾನಲೋಲನ ಕೈಯ ಸೇರಿ ಕುಣಿದಾಡಿಸಿದೆ ಕಮಲೋದ್ಧವಾಂಡವನ್ನು! ಆರೋಹಣ ಸ್ವರದಿ ಸುಪ್ತಿಯಲ್ಲಿಹ ಜಗವ ಜಾಗೃತಿಯನೊಂದಿಸಿದೆಯೊ ! ಅವರೋಹಣ ಸ್ವರದಿ ಎಚ್ಚತ್ತ ಜಗದ ಬಗೆ- ಯನ್ನು ನಿನ್ನೆಡೆಗೆಳ...

ಮಳೆಗಾಲದ ನೀರಹೊಳೆಯನ್ನು ದಾಟಿಸಲು ಅಂಬಿಗರಣ್ಣ ಅರಿತವನಾದರೆ, ಅಳಿಗಾಲದ ಬಾಳಹೊಳೆಯನ್ನು ದಾಂಟಿಸಲು ಬಲ್ಲಿದರಾರು? ನಡುಹೊಳೆಯ ನಡುವಿನೊಳು ತೊಡಕಿ ಮಿಡುಕುತಲಿಹೆನು, ತಡೆಯದಲೆ ತೋರು ನೀ ತಡಿಯ ತಲುಪುವ ಹದನು ! ೧ ‘ನನ್ನ ನುಡಿ ಮನ್ನಿಸದೆ ಬೀಳದಿರು ! ...

೧ ಬರು ನನ್ನ ಬಳಿಗೆ ಜೀಯಾ, ಮೊರೆಯ ಕೇಳಿ ಸುರಿಸು ನಲ್ಮೆಯ ಸುಧೆಯ ! ಸುರತರುವಿನಂದದಲಿ ಸುಜನರ ಹಿರಿಯ ಕೊರತಗಳೆಲ್ಲ ಕಳೆಯುತ ಪೊರೆವವರು ನೀನಲ್ಲದಲೆ ಯಾ- ರಿರರು ಎಂದರಿತಿರುವೆ ರೇಯಾ ! ಬರು ನನ್ನ ಬಳಿಗೆ ಜೀಯಾ! ೨ ತಾಯಾವು ತೊಲಗಿರಲು- ಕರುವು ಬಲು ಬ...

ನಿನ್ನನರಿಯುವ ಅರಿವ ಚೆನ್ನ ನನಗೀಯುವುದು, ನನ್ನ ಈ ಬಯಕೆಯನು ಹಣ್ಣಿಸೈ ನೀನೊಲಿದು ! ೧ ಹೆರರು ತನ್ನವರೆಂಬ ಅರಿಕೆ ನಸುವಿಲ್ಲದೆಯೆ ನೆರೆದಿರುವ ಗರತಿಯರ ನೆರವಿಯನು ಕಡೆಗಣಿಸಿ, ತೊರೆದ ಮೊಲೆವಾಲುಣಿಸಿ ಹೊರೆಯುವಾ ತಾಯನ್ನು ಮರೆಯದೇ ಗುರುತಿಸುವ ಕಿರಿಯ...

ಏನು ಇದು ಸಾರಥಿಯೆ, ನೀನಿಂತು ಮಾಡಿದರೆ ನಾನು ಹಗೆಯರಸರನು ಕೂನಿಸುವನೆಂತು ? ೧ ದಾರಿ ಯಾವುದು ಈಗ ತೇರ ನಡೆಯಿಸುತಿಹುದು ? ವೈರಿಗಳು ಪಾಳೆಯವ ಊರಿರುವುದೆಲ್ಲಿಯೊ ! ದಾರಿಯನು ಅರಿತವರು ಸಾರಿರುವ ಕುರುಹುಗಳು ತೋರಲೊಲ್ಲವು ಕಣ್ಗೆ, ಗಾರಗೊಂಡಿದೆ ಮನವು...

ಕೊಳಲ ನುಡಿಸು ಕಿವಿಯೊಳನಗೆ ಚೆಲುವ ಮೋಹನಾ! ಕೊಳಲ ನುಡಿಸಿ ಪ್ರೇಮಸುಧೆಯ ಮಳೆಯ ಸುರಿಸಿ ಹೃದಯ ತಾಪ ಕಳೆದು ತಿಳಿವಿನೆಳಬಳ್ಳಿಯ ಬೆಳೆಯಿಸಿ ಬೆಳಗೆನ್ನ ಮನವ…. ಚೆಲುವ ಮೋಹನಾ! ೧ ಎಳೆಯತನದಿ ಹಸುಗಳ ಜಂ- ಗುಳಿಯ ಕಾಯಲೆಂದು ಬನಕೆ ಗೆಳೆಯರೊಡನೆ ಹೋಗ...

ಬಾಡದಿರುವಲರಂತ ಬಗೆಯನ್ನು ಮಾಡಿದರೆ ಬೈಯುವೆನೆ ನಿನ್ನ ತಾಯೇ ? ಹಾಡುತಿಹ ಕೊಳಲಂತ ಕೊರಳನ್ನು ಮಾಡಿದರೆ ಕುಂದಿಡುವನೇನು ತಾಯೇ ? ಮೂಡುವಾ ನೇಸರಿನ ತರ ಮೆಯ್ಯ ಮಾಡಿದರೆ ಮುಚ್ಚರಿಪರಾರು ತಾಯೇ, ಕೋಡುಗಲ್ಲಂತೆನ್ನ ಮನವ ನೆಲೆನಿಲಿಸಿದರೆ ಮುನಿವೆನೇ ಲೋಕಮ...

ಎಲ್ಲೆಲ್ಲಿಯೂ ಮನದ ಮಾತುಗಳೆ ಮುಂಬರಿದು ಎದೆಯ ಕೊಳಲುಲಿಯನೇ ಕೇಳಗೊಡವು ! ಹಗಲೆಲ್ಲವೂ ಜಿನುಗುತಿಹುದೆ ಮನಸಿನ ವಾಯ, ತೆಗೆವುದೊಂದೊಂದು ಸಲ ಎದೆಯು ಬಾಯ ; ಎಣಿಕೆಯಿಲ್ಲದೆ ಬಣಗುನುಡಿಯ ಹೆಣೆವುದು ಮನಸು, ಎದೆಯದೊಂದೇ ಒಂದು ಪದವೆ ಸವಿಗನಸು ! ಕಾಗೆ- ಗೂ...

1...345678

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...