
ಹಸಿವು ನಿದ್ರಿಸುವುದಿಲ್ಲ ರೊಟ್ಟಿಗೆ ಎಚ್ಚರವಿಲ್ಲ. ಗಾಢ ನಿದ್ದೆಯಮಲಿನಲಿ ರೊಟ್ಟಿ ಕಾಲಕ್ಕೆ ಮೊದಲೇ ಪ್ರೌಢ. ಕೂದಲು ಸೀಳುವ ಎಚ್ಚರದಲಿ ಹಸಿವೆಗೆ ಸದಾ ನವ ಯೌವನ. *****...
ಬಾಯ್ತೆರೆದು ಎಲ್ಲ ನುಂಗಲು ಕಾದಿರುವ ದೈತ್ಯ ಹಸಿವು ಚೂರೇ ಚೂರು ಒಡಲಿಗೆ ಬಿದ್ದೊಡನೆ ಅಕ್ಷಯಗೊಳುವ ರೊಟ್ಟಿಯದ್ಭುತಕ್ಕೆ ಬೆಕ್ಕಸ ಬೆರಗು. ಗಳಿಗೆ ಬಟ್ಟಲು ಖಾಲಿಯಲ್ಲ ರೊಟ್ಟಿ ಮುಗಿಯುವುದಿಲ್ಲ. *****...
ಮಾತನಾಡಿದರೆ ಬಾಯ್ಮುಚ್ಚಿಸುವ ಆಡದಿದ್ದರೆ ಬಾಯ್ಬಿಚ್ಚಿಸುವ ಮಾಟಗಾರ ಹಸಿವು. ಒತ್ತಾಯಕ್ಕೆ ಆಡಿದ್ದು ತಾನಲ್ಲ ಒತ್ತರಿಸಿಟ್ಟಿದ್ದಕ್ಕೆ ಆಡದೇ ಉಳಿದದ್ದು ತಾನಲ್ಲ. ತನ್ನ ಆತ್ಮ ಸಾಕ್ಷಾತ್ಕಾರವೇ ಅಯೋಮಯ ರೊಟ್ಟಿಗೆ. *****...
ಹಸಿವೆಂದರೆ…… ರೊಟ್ಟಿ ತಿನ್ನಬೇಕು. ರೊಟ್ಟಿಬೇಕೆಂದರೆ ಅದು ಇದ್ದಂತೆ ತಿನ್ನಬೇಕು. ತಿಂದದ್ದು ದಕ್ಕಿಸಿಕೊಳ್ಳಬೇಕು. ರೊಟ್ಟಿ ತನ್ನಿಷ್ಟದಂತೆ ಹಸಿವಿನಿಷ್ಟದಂತಲ್ಲ. *****...
ಹಸಿವೆಂಬೋ ಕಡಲು ಆರ್ಭಟಿಸುತ್ತಲೇ ಇರುತ್ತದೆ. ಕತ್ತಲಾದರೇನು? ರೊಟ್ಟಿ ನದಿ ಶಾಂತ ಹರಿಯುತ್ತದೆ. ಕಾಣದಿದ್ದರೇನು? *****...
ರೊಟ್ಟಿ ಫಲವತಿಯಾದ ಸಂಭ್ರಮ, ಸಂಕಟ ತಳಮಳದಾತಂಕ ಅವ್ಯಕ್ತ. ಹಸಿವಿಗದರದೇ ಪ್ರಪಂಚ ವ್ಯಕ್ತಕ್ಕೇ ಕಿವುಡು. ಇನ್ನು ಅವ್ಯಕ್ತಕ್ಕೆ ದಿವ್ಯ ನಿರ್ಲಿಪ್ತ. *****...
ಗವ್‌ಗುಡುವ ಕತ್ತಲ ಉದ್ದಾನು ಉದ್ದ ಸುರಂಗಮಾರ್ಗದಲಿ ರೊಟ್ಟಿ ಕಳೆದುಹೋಗುತ್ತದೆ. ತುದಿಯಲ್ಲೆಲ್ಲೋ ಕಾಣುವ ಬೆಳಕಿನ ಕಿರಣಗಳಿಗಾಗಿ ಕಾಯುತ್ತಾ ಕಾಯುತ್ತಾ ನಿಶಿತ ಕತ್ತಲಿನಲ್ಲಿ ತನ್ನ ತಾನೇ ಕಂಡುಕೊಳ್ಳುತ್ತದೆ. ತಾನೇ ಬೆಳಕಾಗುತ್ತದೆ. *****...
ರೊಟ್ಟಿಯನಿವಾರ್ಯತೆ ಹೆಚ್ಚು ತೂಕವೋ ಹಸಿವಿನನಿವಾರ್ಯತೆಯೋ? ತಕ್ಕಡಿ ಯಾವತ್ತೂ ತೂಗಿಲ್ಲ. ಹಸಿವಿನ ಪಕ್ಷಪಾತಿ ತಕ್ಕಡಿಗೆ ಗೊತ್ತು ತನ್ನ ವಂಚನೆ. *****...
ನಿತ್ಯ ಅದೇ ಬದಲಾಗದ ಹಸಿವು ಮತ್ತೆಮತ್ತೆ ಸೃಷ್ಟಿಗೊಳುವ ಹೊಸ ರೊಟ್ಟಿ. ಹೊಸತಾಗುವ ಛಲ ಆಗಲೇಬೇಕಾದ ಎಚ್ಚರ. *****...
ಹಸಿವಿನೂರಿನ ಬಾಗಿಲುಗಳೆಲ್ಲಾ ತೆರೆದುಕೊಳ್ಳುವುದು ರೊಟ್ಟಿಯೆಂಬೋ ಜಾದೂಗಾರನೆದುರು. ಅಗೋಚರ ಸಮ್ಮೋಹನದ ಸಾವಿರದ ಹಾಡು. *****...














