ಗವ್‌ಗುಡುವ ಕತ್ತಲ
ಉದ್ದಾನು ಉದ್ದ
ಸುರಂಗಮಾರ್ಗದಲಿ
ರೊಟ್ಟಿ ಕಳೆದುಹೋಗುತ್ತದೆ.
ತುದಿಯಲ್ಲೆಲ್ಲೋ ಕಾಣುವ
ಬೆಳಕಿನ ಕಿರಣಗಳಿಗಾಗಿ
ಕಾಯುತ್ತಾ ಕಾಯುತ್ತಾ
ನಿಶಿತ ಕತ್ತಲಿನಲ್ಲಿ
ತನ್ನ ತಾನೇ
ಕಂಡುಕೊಳ್ಳುತ್ತದೆ.
ತಾನೇ ಬೆಳಕಾಗುತ್ತದೆ.
*****