ಗಳಿಗೆಬಟ್ಟಲ ತಿರುವುಗಳಲ್ಲಿ – ೧೨೭

ಹಸಿವು ರೊಟ್ಟಿಗಳು ಒಂದಕ್ಕೊಂದು ಪೂರಕ ಹೀಗೆಂದೇ ಒಂದನ್ನೊಂದು ನಿಯಂತ್ರಿಸುತ್ತವೆ. ರೊಟ್ಟಿ ಅಪೂರ್ಣವಾದರೆ ಹಸಿವೂ ಅಪೂರ್ಣ ಹಸಿವು ಪೂರ್ಣವಾದರೆ ರೊಟ್ಟಿ ಪರಿಪೂರ್ಣ. *****

ಗಳಿಗೆಬಟ್ಟಲ ತಿರುವುಗಳಲ್ಲಿ – ೧೨೪

ರೊಟ್ಟಿ ಹಸಿವಿನ ನಡುವೆ ಒಂದು ನಿಗೂಢ ಕಾಲುವೆ. ಗುಪ್ತಗಾಮಿನಿಯೊಡಲಲ್ಲಿ ಹಾಗೇ ಸುಪ್ತವಾಗಿದೆ ಖಾಸಗಿ ಕ್ಷಣಗಳು. ಅವರು ಸಾಕ್ಷಿ ಕೇಳುತ್ತಾರೆ ರೊಟ್ಟಿ ಹಸಿವು ಒಳಗೇ ನಗುತ್ತವೆ. *****

ಗಳಿಗೆಬಟ್ಟಲ ತಿರುವುಗಳಲ್ಲಿ – ೧೨೨

ಹಸಿವು ಸೋಲುವುದಿಲ್ಲ ರೊಟ್ಟಿ ಗೆಲ್ಲುವುದಿಲ್ಲ ಪಂದ್ಯವೆಂಬ ಭ್ರಮೆ ಹಸಿವು ರೊಟ್ಟಿಗೆ. ಆದರಿಲ್ಲಿ ಸೋಲು ಗೆಲುವುಗಳಿಲ್ಲ ದಾಖಲಾಗುವುದಿಲ್ಲ ಚಕ್ರ ತಿರುಗುತ್ತದೆ ರೊಟ್ಟಿ ಹಸಿವು ಕೈ ಹಿಡಿದು ಸುತ್ತಬೇಕಿದೆ ಜೊತೆ ಜೊತೆಗೇ. *****

ಗಳಿಗೆಬಟ್ಟಲ ತಿರುವುಗಳಲ್ಲಿ – ೧೨೧

ಬೀಗಬಾರದ ರೊಟ್ಟಿ ಬಾಗಲಾರದ ಹಸಿವು ರೊಟ್ಟಿ ಪ್ರಶ್ನಿಸುವಂತಿಲ್ಲ ಹಸಿವು ಉತ್ತರಿಸಬೇಕಿಲ್ಲ ಯಥಾಸ್ಥಿತಿಯ ಗತಿಯಲಿ ರೊಟ್ಟಿಗೆ ಮುಖವಾಡದ ಮೇಲೆ ಮುಖವಾಡ ಹಸಿವಿಗೆ ಗೆಲುವಿನ ಠೇಂಕಾರ. *****

ಗಳಿಗೆಬಟ್ಟಲ ತಿರುವುಗಳಲ್ಲಿ – ೧೧೯

ಹಸಿವಿನ ಆಯ್ಕೆ ರೊಟ್ಟಿ. ಆದರೆ ರೊಟ್ಟಿ ಸೃಷ್ಟಿಯಾಗುವುದು ಆಯ್ಕೆಯಿಂದಲ್ಲ ಅನಿವಾರ್ಯತೆಯಿಂದ. ಅದಕ್ಕೆ ಆಯ್ಕೆ ಇದ್ದರೆ ರೊಟ್ಟಿಯಾಗುತ್ತಿರಲಿಲ್ಲ. ಹಸಿವಂತೂ ಆಗುತ್ತಿರಲೇ ಇಲ್ಲ. *****
cheap jordans|wholesale air max|wholesale jordans|wholesale jewelry|wholesale jerseys