
ನಾನು, ನನ್ನವಳ ಬಾಳು ಏನು ಬೇರೆ ಅಂತ ಹೇಳಿ ಕೊಳ್ಳೋಣ. ಸಂಸಾರ ವ್ರತದಲಿ ನನ್ನನ್ನವಳು ನಾನವಳನ್ನು ಹಂಗಿಸಿ, ಜಂಖಿಸಿ ನಡೆವುದು ಉದ್ದಕ್ಕೂ ಇದ್ದದ್ದೆ ! ಇಬ್ಬರು ಬೇರೆ ಬೇರೆ ವ್ಯಕ್ತಿಗಳು ಕೂಡಿ ಬಾಳುವಾಗ ಇದು ಸರ್ವೇ ಸಾಮಾನ್ಯತಾನೆ ? ಎಲ್ಲದರಲಿ ನನಗ...
ನಾನು, ಅನ್ನಿಸಿಕೊಂಡ ನನ್ನನ್ನು ಅದೋ.. ಇದೋ.. ಅವನೋ.. ಇವನೋ.. ನನಗೆ ಗೊತ್ತಿಲ್ಲ! ಯಾವುದೋ ಒಂದು ಶಕ್ತಿ ರೂಪ ಕೊಟ್ಟು, ಪ್ರಾಣ ಕೊಟ್ಟು ಅಪ್ಪ, ಅಮ್ಮನ ಹೊಟ್ಟೆಯಲ್ಲಿ ತಂದು ಬಿಟ್ಟಿತು. ಅಪ್ಪ, ಅಮ್ಮ ಭೂಮಿಗಿಳಿಸಿ ಪ್ರೀತಿಯಿಂದ ತೊಳೆದು, ಬಳಿದು, ಬ...
ಬೇಡ ನಿಮ್ಮ ತನು ಧನ ನೀಡಿ ತುಸುವೆ ಮನ ಆಡಿ ಕನ್ನಡ, ಓದಿ ಕನ್ನಡ, ಬಳಸಿ ಕನ್ನಡ ಅರಿವ ದೀವಿಗೆಯಾಗುವಿರಿ. ದರ್ಶಿಸಿ ಕನ್ನಡ ಸುಂದರ ನೆಲ, ಜನ ಬದುಕು ಉಪಯುಕ್ತವಾಯಿತು ಎನಿಸದಿರೆ ಕೇಳಿ ! ತಿಳಿಯಿರಿ ಕನ್ನಡ ಇತಿಹಾಸ, ಪರಂಪರೆ ಮೌಲ್ಯಗಳ ಖಜಾನೆ ಕೀಲಿ ಕ...
ವಿಶ್ವವು ಒಂದಾಗಲಿ… ಬಾಳಲಿ ಏಳಿಗೆ ಕಹಳೆಯು ಮೊಳಗಲಿ ದಿಗ್ದೆಸೆಗಳಲಿ ತಪ್ಪಾಗದೆ ಇರಲಿ ಎನ್ನುವ ಪ್ರೇಮದ ಕೂಗು, ವ್ಯಾಪಕವಾಗಿ ತಬ್ಬುತಲಿರುವಾಗ ಒಡೆಯುವ ಮಾತನು ಆಡದಿರಿ; ಸಣ್ಣವರಾಗದಿರಿ ಕನ್ನಡಕ್ಕೆ ದ್ರೋಹವ ಬಗೆಯದಿರಿ ಆದಿಕವಿ ಪಂಪನಿಗೆ ಇರಿಯ...
ನಾನು ಕೊಳ ನೀನು ಮನುಜ ನನ್ನದು ನಿನ್ನದು ತೀರದ ಅನುಬಂಧ. ಬಾ ! ನನ್ನ ಬಳಿ ಕೊಳೆ ತೊಳೆದುಕೋ.. ದಾಹ ತೀರಿಸಿಕೋ.. ಸಾರ್ಥಕ್ಯ ತಾ ! ಬಂದು ನಿಲ್ಲು, ಬಗ್ಗಿ ಒಳ ನೋಡು ರಾಚುವೆ ದರ್ಪಣವಾಗಿ ನಿನಗೇ.. ನಿನ್ನ ರೂಪವ. ದರ್ಶಿಸು ನಾನು ನೀನು ಒಂದು ಒಳಗೊಂದು...
ಇಲ್ಲ ! ಬರಲಿಲ್ಲ ಆ ದಿನ ಬರಲಿಲ್ಲ. ಸಾಲು ಸಾಲು ಮೇಘ, ಮಾರುತಗಳ ಬರಳೊರಳಿಸಿ ಗುಡುಗು, ಮಿಂಚುಗಳ ಬಾಣ, ಬಿರುಸಿನ ಮಾಲೆ ಹೊತ್ತಿಸಿ ಗಿಡ, ಮರಗಳ ಬುಡ ನಡುಗಿಸಿ ತಲೆ ಕೊಡವಿಸಿ ಏಕಕಾಲಕೆ ಗಲಿಬಿಲಿ, ಸಂತಸ ಹುಟ್ಟಿಸಿ ಜನ, ದನ, ಕ್ರಿಮಿ, ಕೀಟ ಪಕ್ಷಿಗಳ ತ...
ನೆನೆಯಿರಿ ಹಿರಿಯರ ಹಣ್ಣು, ಮರಗಿಡಗಳ ಬೆಳೆಯುವವರ. ಕೃಷಿ ಪ್ರೇಮ ಇಹಕೂ ಆಯಿತು ಪರಕೂ ಆಯಿತು ಸಾರ್ಥಕ ಬದುಕಿನ ಸಂಕೇತವಾಯಿತು. ನೆಟ್ಟ ಮರ ಗಿಡಗಳಲಿ ಒಂದು ಒಣಗಿದರೂ ಹುಳುಕು ಫಲಗಳ ಹೊತ್ತು ನಿಂತರೂ ಹೌಹಾರುತ್ತಿದ್ದರು ಎದೆ ಅಪಮೌಲ್ಯಗೊಂಡಿದೆಯೆಂದು. ಕ...
ಬಿತ್ತೋ.. ಬಿತ್ತೋ.. ನನ್ನೆದೆ ಹುತ್ತವ ಕರಗಿಸಿ ಅರಿವಿನ ಬೀಜವ ಬಿತ್ತೋ.. ಬಿತ್ತೋ.. ಮನಸಲಿ ಕಟ್ಟಿಹ ಕಲ್ಮಷ ಕಟ್ಟೆಯ ಒಡೆದು ಶುದ್ಧ ಭಾವದ ಸಲಿಲವ ಚಿಮ್ಮಿಸೋ… ಚಿಮ್ಮಿಸೋ.. ವಿಷಮ ಆಸೆಯ ಕೋಶ, ಕೋಶವ ಕ್ಷಯಿಸಿ ಬುದ್ಧ ಬೆಳಕನು ಕಣ್ಣಲಿ ತುಂಬಿಸ...













