ವಿಷಾದ

ಮಲಿನ ಹೃದಯದ ಮಂದಿ
ಅರಿಯದೇರಿದರು
ಗದ್ದುಗೆಯ
ಬರಿದಾಯ್ತು
ಮಾರಿದರು ಹಿರಿಮೆಯ.

ಗೆದ್ದ, ಬದ್ಧ, ಸಿದ್ಧರಿಂದ ತುಂಬಿರದ
ಮಂದಿರಗಳು
ಉದ್ಧಾರದ ಹಸಿರು ಹಂದರಗಳಾಗದೆ
ನಂದಿಸಿವೆ ಸಿಂಧೂರ ಸೌಭಾಗ್ಯವ.

ಗುರುವಿಗೂ ದೇವರಿಗೂ ಬೇಧವಿರಲಿಲ್ಲ
ಅಂದು;
ಉದರ ನಿಮಿತ್ತದ ಚದುರರು
ಹದಗೆಡೆಸಿದರದ
ನಿಂದು.

ಉದ್ದುದ್ದ ಮಾತೇಕೆ
ಶುದ್ಧವಾದದ್ದೊಂದೂ ಹೊಂದಿರದ
ಮದ, ಮದ್ಯದೀ ಕಾಲದಲೊದಂದು ಅಪವಾದವಾದರೆ
ವಿಷಾದವೇಕೆ ?

ಭಯವಾಗುತ್ತಿದೆ
ದಿನಗಳೆದಂತೆ.. ಕಳೆಯುವವೇನೋ.. ಒಳ್ಳೆಯ ದಿನಗಳು
ಹಿಂಚಲಿಸುತಿದೆಯೆನೋ ವಿಕಾಸವೆಂದು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮಿಂಚಿನ ದೀಪ
Next post ಲೋಕಾಚಾರವನು ಲೆಕ್ಕಚಾರಗೊಳಿಸಲುಂಟೇ ?

ಸಣ್ಣ ಕತೆ