ಪಕ್ಕದೊಳು ಕುಳಿತಪ್ಪ ಆತಂಕದೊಳಾಗಾಗ ಚಾ
ಲಕ ಮಗನ ವೇಗವತಿಯಾಯ್ತೆಂದು
ಬ್ರೇಕೊತ್ತುವಂತೆನ್ನ ಕವನ ಸಾಲುಗಳಿಲ್ಲಿ
ಲೋಕ ತಿದ್ದುವೆನೆಂದಲ್ಲ ಕೋಪವಾರಲು ಇಲ್ಲ
ಯಾಕದೇನೋ ಅಂತೆ ಕೂಡ್ರಲರಿಯದೊದರಿದಲಾ – ವಿಜ್ಞಾನೇಶ್ವರಾ
*****