ಹನಿಗವನ ಸಾವು August 14, 2022December 29, 2021 ಉಸಿರು ನಿಂತು ಹೋದರೆ ಥಟಕ್ಕನೆ ಸಾವಾಗುವುದು ಅರಿವು ಸತ್ತರೆ ಅನುಕ್ಷಣವೂ ಸಾವಾಗುವುದು. *****
ಹನಿಗವನ ಏರಿಕೆ July 31, 2022December 29, 2021 ಏರುತಿದೆ ಬೆಲೆ ಗಗನಕ್ಕೆ ಕುಸಿಯುತ್ತಿದೆ ಬಡ, ಮಧ್ಯಮ ವರ್ಗದವರ ತ್ರಾಣ ದಿನ, ದಿನಕ್ಕೆ *****
ಹನಿಗವನ ಆಶಯ July 24, 2022December 29, 2021 ಇರಲಿ ನಿನ್ನಯ ಸ್ಮರಣೆ ಎನ್ನ ನಾಲಿಗೆಯ ಮೇಲೆ ಈ ಜಗದಲಿ ಕೊನೆಯ ಬಾರಿಗೆ ಉಸಿರು ತೆಗೆದುಕೊಳ್ಳುವ ಮೊದಲೇ *****
ಹನಿಗವನ ಉಪಾಯ July 17, 2022December 29, 2021 ಬಡವರಿಗೆ ವಿರಮಿಸಲಿಲ್ಲ ಸಮಯ ಬಲ್ಲಿದರಿಗೆ ಕಾಲ ಕಳೆಯಲಿಲ್ಲ ಉಪಾಯ *****
ಹನಿಗವನ ಪ್ರಾಣ July 10, 2022December 29, 2021 ಬಡವರು ಹಣಕ್ಕಾಗಿ ಬಿಡುವರು ಪ್ರಾಣ ಬಲ್ಲಿದರು ಹಣದಿಂದ ಹಿಂಡುವರು ಪ್ರಾಣ *****
ಹನಿಗವನ ಬುದ್ಧಿವಂತ June 26, 2022December 29, 2021 ನಾನು ಊಸರವಳ್ಳಿ ಜನ, ಜಾಗ, ಇರುವು ನೋಡಿ ನುಡಿಯುವೆ; ನಡೆಯುವೆ. *****
ಹನಿಗವನ ಚೆನ್ನ June 19, 2022December 29, 2021 ನನ್ನನ್ನು ನಾನು ಚೆನ್ನ ಎಂದುಕೊಂಡರಲ್ಲ ಬಲ್ಲವರು ಹೇಳಬೇಕು ಆ ಮಾತನ್ನ. *****
ಹನಿಗವನ ಇರಲಿ June 12, 2022December 29, 2021 ಇರಲಿ ನಿನ್ನ ಪ್ರೇಮ ಎದೆ, ಮನಗಳಲಿ ಜೀವ ನದಿಯಾಗಿ ಏರಿರಲಿ, ಇಳಿವಿರಲಿ ಉಳಿಯಲಿ ಒಂದೇ ಉಚ್ಛ ಸ್ತರದಲಿ *****