Home / ಅಂಗಳಕ್ಕೊಂದು ಚಿತ್ತಾರ

Browsing Tag: ಅಂಗಳಕ್ಕೊಂದು ಚಿತ್ತಾರ

ಬದುಕಿನ ಸಂತೆಯಲಿ ಚಿಂತೆಯ ಹೊರೆ ಹೊತ್ತು ವ್ಯರ್ಥ ಬಳಲಿಕೆಯಲಿ ತೊಳಲುವೆ ಏಕೆ? ಬದುಕಿದು ಮೂರು ದಿನ ಸುಖ ದುಃಖ ಸಮಗಾನ ನಶ್ವರವು ಜೀವನದ ತಾನ ಸಂತೋಷವೇ ಸುಖದ ಸೋಪಾನ ಬರುವ ನಾಳೆಯ ಕುರಿತು ಸುಮ್ಮನೇತಕೆ ಅಳುವೆ ಇಂದಿನ ಸವಿ ಅರಿತು ಸುಖಿಸು ಮನವೇ. ಕಣ್...

ಬದುಕಿನ ರಣಾಂಗಣದೆ ಮೋಹಪಾಶಗಳ ಬ್ರಹ್ಮಾಸ್ತ್ರ ಬಂಧನದೆ ಬಳಲುವ ಮನುಜನಿಗುಂಟೇ ಜೀವನ ಹಣ ಅಧಿಕಾರ ಅಂತಸ್ತು ಮಾಯಾಮೃಗದ ಬೆನ್ನೇರಿ ನಿರಾಸೆಯ ಕೂಪಕ್ಕೆ ಬೀಳುವ ಮನುಜನಿಗುಂಟೇ ಸುಖಜೀವನ ನೂರೆಂಟು ಸಮಸ್ಯೆಗಳ ಸುಳಿಯಲಿ ಸಿಕ್ಕು ಚಿಂತೆಯ ಚಿತೆಯ ಮೇಲೆ ಬೇಯು...

ಬರೆಯಬೇಕು ಚಿತ್ತಾರ ಅಂಗಳಕ್ಕೊಂದು ಶೃಂಗಾರ ಕಸಕಡ್ಡಿ ಕಲ್ಲು ಮಣ್ಣು ಗುಡಿಸಿ ತೊಳೆದು ಬಳಿದು ನೆಲವಾಗಬೇಕು ಬಂಗಾರ ಬರೆಯಬೇಕು ಚಿತ್ತಾರ ಚಿತ್ತಾರವಾಗಬೇಕು ಸುಂದರ ಉದ್ದ ಗೆರೆಗಳಾದರೆ ಲೇಸು ಅಡ್ಡ ಗೆರೆಗಳಾದರೆ ಸಲೀಸು ಸಣ್ಣ ಚುಕ್ಕಿ ದೊಡ್ಡ ಚುಕ್ಕಿ ಕ...

ಮುಗಿಲೆತ್ತರ ಏರುವ ಹಾರುವ ತೇಲಾಡುವ ಬಯಕೆ ಬಲಿತು ಹೆಮ್ಮರ ಕಡಿದಾದ ದಾರಿ ಬಲುದೂರ. ಕಾಣದ ತೀರ ಗುರಿ ಸೇರುವ ಕಾತುರ ಹುಚ್ಚು ಮನಸ್ಸಿಗಿಲ್ಲ ಕಡಿವಾಣ ಪುಂಖಾನುಪುಂಖ ನಿರಾಸೆಯ ಬಾಣ ಆಸೆಗಳು ಆಗಸದಷ್ಟು ಕನಸುಗಳು ಕಡಲಿನಷ್ಟು ನನಸಾಗದೆ ಉಳಿಯುವುದೇ ಹೆಚ್...

ಹಗಲು ಇರುಳೆನ್ನದೆ ಸಾಗುತಿದೆ ಬದುಕು ಎಷ್ಟು ದುಡಿದರೂ ದುಡಿಮೆ ಸಾಲದು ಅದಕೂ ಇದಕೂ ದುಡಿಯುವವ ಒಬ್ಬ ತಿನ್ನುವ ಕೈಗಳು ಹತ್ತು ಶ್ರಮಕ್ಕೆ ತಕ್ಕ ಫಲ ಪ್ರತಿಭೆಗೆ ತಕ್ಕ ಪುರಸ್ಕಾರ ಮರಳುಗಾಡಿನ ಮರೀಚಿಕೆ ಶೋಷಿತ ಸಮಾಜದ ಅಡಿಗಲು ಪೆಟ್ಟು ತಿನ್ನದ ಬದುಕುಳ...

ಕನಸು ಕಾಣುತ್ತಿದ್ದೇವೆ ಮುಂಬರುವ ದಿನಗಳಿಗಾಗಿ ಆಸೆ ಭರವಸೆಯ ಹೊರೆ ಹೊತ್ತು ತುಡಿಯುತಿದೆ ಜೀವ ಮಿಡಿಯುತಿದೆ ಜೀವ ಕಾತರಿಸುತಲಿವೆ ಕಂಗಳು ಬರುವ ನಾಳೆಗಳಿಗಾಗಿ ಎಂದು ಬರುವುದೋ ರಾಮರಾಜ್ಯ ಅಳಿಸಿ ರಾವಣರ ಸಾಮ್ರಾಜ್ಯ ಹಿಂದೆ ಇತ್ತಂತೆ ಸುಂದರ ಸುಭಿಕ್ಷಕ...

ನಕ್ಕು ಬಿಡು ಗೆಳತಿ ಅಂಜದಿರು ಅಳುಕದಿರು ನಿರಾಶೆಯಲಿ ಧೃತಿಗೆಡದಿರು ಕಂಗೆಡದಿರು, ಕಷ್ಟಗಳೆದುರು. ಜೀವನವಲ್ಲ ಹೂವಿನ ಹಾಸಿಗೆ ನೋವು ನಲಿವುಗಳ ಒಸಗೆ ತಾಳಿದವನು ಬಾಳಿಯಾನು ಮನನವಾಗಲಿ ಮುತ್ತಿನಂತಹ ಮಾತು. ತಾಳು ತಾಳು ಧೈರ್‍ಯ ತಾಳು ಧೈರ್‍ಯವೇ ಸಂಜೀವ...

ಎಲ್ಲಿದ್ದರೇನು ಹೇಗಿದ್ದರೂ ಏಕಾಂಗಿ ನಾನು ಮುಚ್ಚಿಡಲಾರೆನು, ಬಿಚ್ಚಿಡಲಾರೆನು ಭಾವನೆಗಳ ಮಹಾಪೂರ ಕುಳಿತಿರಲಿ ಮಲಗಿರಲಿ ಬಂದು ಮುತ್ತುವಿರಿ ಒಗಟಾಗಿ ನಿಂದು ಬರುವಿರೇಕೆ ಮನದ ಗೂಡಿನೊಳಗೆ ಕುಣಿಯುವಿರೇಕೆ ಪರದೆಯೊಳಗೆ ಕಾಡುವಿರೇಕೆ ಕನಸುಗಳ ಕತ್ತರಿಸುವ...

ಯಾರೋ ಬರೆದ ಕವನ ಕಾಡಿತ್ತು ಎಡೆಬಿಡೆದೆನ್ನ ಮನ ನಿಂತಲ್ಲಿ ಕುಳಿತಲ್ಲಿ ಮಲಗಿದಲ್ಲಿ ಬೆನ್ನು ಹತ್ತಿದ ನಕ್ಷತ್ರಿಕನಂತೆ ಕಣ್ಣಾಡಿಸಿದೆ ಅರ್ಥವಾಗಲಿಲ್ಲ ನವ್ಯವೋ ನವೋದಯವೋ ಏನೋ ತೋಚಿದ್ದು ಗೀಚಿದ್ದು ಭಟ್ಟಿ ಇಳಿಸಿದ್ದಾರೆ. ಓದಿದೆ ಒಂದಲ್ಲ ಹತ್ತಾರು ಸಲ...

ಕವನ ಬರೆಯುವುದಷ್ಟು ಸುಲಭದ ಕೆಲಸವಲ್ಲ ತರಕಾರಿ ಅಕ್ಕಿ ಮಸಾಲೆ ಉಪ್ಪು ನೀರು ಪಾತ್ರೆ ಪಡಗ ಎಲ್ಲಾ ಸಾಧನ ಇದ್ದರೂ ಗೊತ್ತಿರಬೇಕಲ್ಲ ಅಡುಗೆ ಮಾಡುವ ವಿಧಾನ ಕವನ ಬರೆಯುವುದಷ್ಟು ಸುಲಭವಲ್ಲ ಪದಗಳೆಲ್ಲವ ಒಟ್ಟುಗೂಡಿಸಿ ತೂಗಿಸಿ ಅಳತೆ ಮಾಡಿ ಜೋಡಿಸಿ ಕಳೆದು...

1...3456

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...