ಕನಸು ಕಾಣುತ್ತಿದ್ದೇವೆ
ಮುಂಬರುವ ದಿನಗಳಿಗಾಗಿ
ಆಸೆ ಭರವಸೆಯ ಹೊರೆ ಹೊತ್ತು
ತುಡಿಯುತಿದೆ ಜೀವ
ಮಿಡಿಯುತಿದೆ ಜೀವ
ಕಾತರಿಸುತಲಿವೆ ಕಂಗಳು
ಬರುವ ನಾಳೆಗಳಿಗಾಗಿ
ಎಂದು ಬರುವುದೋ ರಾಮರಾಜ್ಯ
ಅಳಿಸಿ ರಾವಣರ ಸಾಮ್ರಾಜ್ಯ
ಹಿಂದೆ ಇತ್ತಂತೆ ಸುಂದರ ಸುಭಿಕ್ಷಕಾಲ
ಈಗೆಲ್ಲಾ ಕರಾಳ ಮೋಸ ವಂಚನೆಯ ಕಾಲ
ಮುತ್ತುರತ್ನವ ಬಳ್ಳದಲಿ ಮಾರುತ್ತಿದ್ದರಂತೆ
ಇದೇನು ನಿಜವೋ ಅಡುಗೂಲಜ್ಜಿ ಕಥೆಯೋ
ನಂಬುವುದಾದರೂ ಹೇಗೆ
ಮಾನವನ್ನ ಮಾನವನೇ
ಕಿತ್ತು ತಿನ್ನುತ್ತಿರುವಾಗ
ಪಾರಿವಾಳಕೆ ದೇಹವ ಒಪ್ಪಿಸಿದ
ಶಿಬಿ ಚಕ್ರವರ್‍ತಿಯ ತ್ಯಾಗ
*****