ಬದುಕಿನ ರಣಾಂಗಣದೆ
ಮೋಹಪಾಶಗಳ ಬ್ರಹ್ಮಾಸ್ತ್ರ
ಬಂಧನದೆ ಬಳಲುವ
ಮನುಜನಿಗುಂಟೇ ಜೀವನ
ಹಣ ಅಧಿಕಾರ ಅಂತಸ್ತು
ಮಾಯಾಮೃಗದ ಬೆನ್ನೇರಿ
ನಿರಾಸೆಯ ಕೂಪಕ್ಕೆ ಬೀಳುವ
ಮನುಜನಿಗುಂಟೇ ಸುಖಜೀವನ
ನೂರೆಂಟು ಸಮಸ್ಯೆಗಳ
ಸುಳಿಯಲಿ ಸಿಕ್ಕು ಚಿಂತೆಯ
ಚಿತೆಯ ಮೇಲೆ ಬೇಯುವ
ಮನುಜನಿಗುಂಟೇ ಸುಖಜೀವನ
ಇಂದೇನು? ಮುಂದೇನು?
ನಾಳೆ ಹೇಗೋ ಏನೋ
ಭಯ ಆತಂಕದಿ ನೋಯುವ
ಮನುಜನಿಗುಂಟೇ ಸುಖಜೀವನ
ಯಾರಿಗಿದೆ ಸುಖಜೀವನ?
ಎಲ್ಲಿದೆ ಸುಖಜೀವನ?
ಹುಟ್ಟಿನಿಂದ ಸಾವಿನವರೆಗೂ
ಇದ್ದೇ ಇದೆ ಭವ ಬಂಧನ.
*****