ಮುಗಿಲೆತ್ತರ ಏರುವ
ಹಾರುವ ತೇಲಾಡುವ
ಬಯಕೆ ಬಲಿತು ಹೆಮ್ಮರ
ಕಡಿದಾದ ದಾರಿ ಬಲುದೂರ.
ಕಾಣದ ತೀರ
ಗುರಿ ಸೇರುವ ಕಾತುರ
ಹುಚ್ಚು ಮನಸ್ಸಿಗಿಲ್ಲ ಕಡಿವಾಣ
ಪುಂಖಾನುಪುಂಖ ನಿರಾಸೆಯ ಬಾಣ
ಆಸೆಗಳು ಆಗಸದಷ್ಟು
ಕನಸುಗಳು ಕಡಲಿನಷ್ಟು
ನನಸಾಗದೆ ಉಳಿಯುವುದೇ ಹೆಚ್ಚು
ಭೋರ್‍ಗರೆಯುವ ಪ್ರವಾಹದೆದುರು
ಸೆಣಸಿ ಮುನ್ನುಗ್ಗುವ ಹುಚ್ಚು
ಮುಂದೆ ಸಾಗುವವರ ಹಿಂದೆ ತಳ್ಳಿ
ಮುನ್ನಡೆಯುವ ಕೆಚ್ಚು.
ಏರಬಹುದು ಮೇಲೇರಬಹುದು
ಏರಿದ ಮೇಲೇ
ಭಯ ಆತಂಕದ ನೋಟ
ಅಸ್ತಿತ್ವಕ್ಕಾಗಿ ಹೋರಾಟ
ಮೇಲೇರಿದರೆ ಹದ್ದುಗಳ ಕಾಟ
ಕೆಳಗಿಳಿದರೆ ಹಾವುಗಳ ಚೀರಾಟ
ಅತ್ತಲೂ ಇಲ್ಲದೆ ಇತ್ತಲೂ ಸಲ್ಲದೆ
ನಡುವೆ ತ್ರಿಶಂಕುವಿನ ಸ್ಥಿತಿ
*****