
ಇಳಿದೆ ಇಳಿದು ಜನಸ್ತೋಮದಲ್ಲಿ ಸೇರಿ ಸೇರಿ ನುಗ್ಗಿದೆ ನುಗ್ಗಿ ಸ್ಟೇಶನಿನ ಹೊರಬಂದೆ ಬಂದು ಈ ಅಗಾಧ ಜನಸ್ತೋಮದಲ್ಲಿ ನುಗ್ಗಿದೆ ನುಗ್ಗಿ ಲಗ್ಗೇಜು ಹೆಗಲಿಗೇರಿಸಿಕೊಂಡು ಬಗ್ಗಿ ಸಾಗಿದೆ ಪ್ರವಾಹದಲ್ಲಿ ಸಾಗಿ ನಗರಕ್ಕೆ ಬಂದು ಎದ್ದೆ ಎದ್ದು ಇಳಿದುಕೊಳ್ಳು...
ಮತ್ತೆ ಅಳಿದುಳಿದ ಮಂದಿ ಹೊರಟಾಗ ಕತ್ತಲೆಗೆ ದೂಳು ಹೊಗೆ ಮತ್ತು ಶಬ್ದ ನಿಂತಾಗ ಕತ್ತಲೆಗೆ ಬದುಕಿ ಉಳಿದ ಭೂಮಿಯತ್ತ ನೋಡಿದಾಗ ಕತ್ತಲೆಗೆ ಕಂಡದ್ದು ಕಾಣಿಸಲಿಲ್ಲ ಕೇಳಿದ್ದು ಕೇಳಿಸಲಿಲ್ಲ ಸಮುದ್ರ ಕೊರೆದು ಹೊಡೆವ ಧ್ವನಿ ಮಾತ್ರ ಕೇಳಿಸಿತು-ಮನುಷ್ಯ ಧ್ವ...
ಕೇರಳದ ಹುಡುಗಿಯರು ಸದಾ ಶೋಡಶಿಯರು ಎಂದರೆ ಅತಿಶಯೋಕ್ತಿ ಹೌದು ಅಲ್ಲ ಕಾರಣ ಇದ್ದೀತು ಹೀಗೆ- ಕೇರಳದ ಮಣ್ಣು ಉತ್ತರೂ ಬಿತ್ತರೂ ಬೆಳೆದರೂ ಕೊಯ್ದರೂ ಸದಾ ಛಲೋ ಹೊಸ ಹೆಣ್ಣು-ಎಂದರೆ ಈ ಸಮುದ್ರದ ಉದ್ದ ಗಾಳಿಗೆ ಮಳೆಗೆ ಬಿಸಿಲಿಗೆ ಜೀವಂತ ಒಡ್ಡಿದ ಬೆತ್ತಲೆ...
೧ ಕಟ್ಟಿ ಜರತಾರಿ ಕಚ್ಚೆ ಸೊಂಟದ ಪಟ್ಟಿ ಗೆಜ್ಜೆ ಅಭ್ರಕದ ಮಿಂಚು ಬಣ್ಣ ಬಳಿದಾಟ ಕಿರೀಟ ವೇಷ ಈ ಮಜಬೂತು ಶೃಂಗಾರ ತೇಗಿ ಢರ್ರನೆ ಸೋಮರಸ ಅಹಹ ತನ್ನಿರೋ ಖಡ್ಗ ಬಡಿಯಿರೋ ಚಂಡೆ ಜಾಗಟೆ ಭೇರಿ ಚೌಕಿಯಿಂದೆದ್ದು ಹೊರಟು ಸವಾರಿ ರಂಗಸ್ಥಳಕ್ಕೆ ಒತ್ತರಿಸಿ ಸೆರ...
ಓ ಸಜ್ಜನ ಹೋಗು ಒಳಗೆ ಇಕ್ಕು ಕದ ಬಿಚ್ಚು ಪರೆ ಮುಚ್ಚು ಮರೆ ಕಳಚು ಮುಖವಾಡ ಕಾಚ ಮಾಡು ಮಜ್ಜನ ಹಾಡು ಗೀತೆ. ಭಗವದ್ಗೀತೆ? ಛೇ! ಮಹಾ ಬಾತ್ ರೂಮ್ ಗೀತೆ. ಹಾಕಿಕೋ ಮಂಡೆ ಮೇಲೆ ಹಂಡೆ ಹಂಡೆ ನೀರು ತೊಳೆದು ಹೋಗಲಿ ಮೈ ಕೆಸರು ಗೋಡೆಯಲೆ ಇದೆ ಕನ್ನಡಿ ಹಬೆ ಇ...













