
ಕುತುಕಿಗೆತ್ತಣ ಬಿಡುವು, ರಸಪದದ ಕನಸಿಗಗೆ ಬಲುಕವಲೊಡೆದ ಬಾಳ್‌ಬಳಿಯ ದಾರಿಗನಿಗೆ ಪಯಣದಾಯಾಸವನು ಮಣಿಗೆಯೊಳು ತೀರಿಸುತ ಮರಳಿ ಕಂತೆಯ ಹೆಗಲಿಗೇರಿಸಿ ನಿಲುವಗೆ? ಗುರಿಗೊಯ್ವ ನಿಟ್ಟಾವುದೆಲ್ಲಿ ಚಿಂತೆಗೆ ನಿಲುವೆ ತನುಜೀವಮನದೊಡ್ಡಿಗಿದಕಾವ ಸಲ್ಮೆ ಬಂಧನವ...
ಪ್ರವಹಿಸಲಿ ಮುಗಿದ ಕೈ ಮೈನಳಿಗೆಯಿಂದೆಲ್ಲ ನಮನಂಗಳೆನ್ನ ನಾ ಸಿರಿಪದದ ತಡಿಗೆ, ಮಣಿಗೆಯೊಳು ಮದವಳಿದು ಋಣಗಳೆಲ್ಲವ ನೆನೆದು ತಿಳಿಮೆಯೊಳು ಹರಿವೆನ್ನ ಚೇತನದ ಜತೆಗೆ, ಕುಲ ವಿದ್ಯೆ ಸಂಸ್ಕಾರ ಹಿರಿತನಗಳೆಣಿಕೆಗಳ ತಡಿಕೆಯೊಳು ಹೊಳೆದ ಕಳೆಗಳು ಭೂತಿನಿಧಿಗೆ...
ಗುಡಿಯಿದಿರ ಮಣಿಗೆಯೇ, ಭೂಮಾವಿನಮ್ರತೆಯೆ, ದುರ್ಭರಾಹಂಕಾರದಮನವಿಧಿಯೇ, ಆನಂದವರಣದೊಳು ಸುಖಯಜ್ಞ ಕಲ್ಪವೇ, ತರ್ಕಧೀಧರಗರಳಶಮನಸುಧೆಯೇ, ಕೆರೆಯ ನೀರನು ಕೆರೆಗೆ ಚೆಲ್ಲಿ ವರಪಡೆವಂದ ಭರವಳಿದು ಹಗುರಪ್ಪ ಸಂ-ನ್ಯಾಸವೇ, ತನಗು ಹಿರಿದುಂಟೆಂಬ ತಿಳಿವ ಹೊಳಪಿನ...
ಹಣ್ಣಿನಿಂ ತರು ನಮ್ರ ಮೋಡ ಹನಿಯಿಂ ನಮ್ರ ನೆರೆದ ಸಿರಿಯೊಳು ಪುಣ್ಯ ಪುರುಷ ನಮ್ರ ಜ್ಞಾನಿಯರಿವಿಂ ನಮ್ರ ಆರ್ತನಳಲಿಂ ನಮ್ರ ನೆಲೆಯರ್ತಿಗಿಂಬಾಗಿ ಭಕ್ತ ನಮ್ರ ಭಾವಂಗಳಿಡಿದಿರಲು ಸತ್ ಕವಿಯು ವಾಙ್ನಮ್ರ ವಿಪುಲದರ್ಶನ ಶಕ್ತ ಧರ್ಮನಮ್ರ ಎಲ್ಲರಹಮನು ಕಳೆದು...
ಹಸಿರೆಲೆಗಳಂಜಲಿಯೊಳಾತು ರವಿ ತೇಜವಂ ಜೀವಕರ್ಘ್ಯವನೆರೆವ ಬನದ ನಲವು, ಕೆರೆಕೆರೆಯ ಹರಹಿನೊಳು ಜಲಹಾಸವನು ಮೆರಸಿ ತಿರೆ ಬಣ್ಣಗೊಳಿಸುವೀ ಬಿಸಿಲ ನಲವು, ಅಲೆ ಕೆದರೆ ತರು ಬೆದರೆ ನೀಲದಿಂ ಧುಮ್ಮಿಕ್ಕಿ ಕೋಡಿಗೇರುತ ಗಾಳಿ ಮೊರೆವ ನಲವು, ಬೆಳಕೆಲರು ಹಸಿರುಗ...
ಬೆರೆದರೂ ಬೇರೆಂದೆ ಸಮದೂರದೊಳು ಸರಿವ ವಿಷಯಾತ್ಮಸಂಗಮಿಸುವಾನಂತ್ಯವೇ, ಸೋ೦ಕಲರಿವೇ ಕರಗಿ ನೆನವೆಂಬ ನೆರಳುಳಿಯೆ ಪ್ರತ್ಯಕ್ಷವೆನಲಾಗದಾನಂದವೇ, ಪಡಲಿಲ್ಲವೆನಲಾಗದಪರೋಕ್ಷದನುಭವವೆ, ಅರಿತಿಲ್ಲವೆನಲಾಗದಂದದರುಳೇ, ಒಲಿವಂದಮೆನ್ನೆಸಗಿ ಒಲವ ಕೊಳೆ ಕೈತೆರೆಯು...
ಸಂದೆಗದ ಹರಿವಿನೊಳು ತತ್ವಗಳೆ ಹಿಮಫಲಕ ಹಾಯುವಾಯಾಸದೊಳು ಮನ ಗಳಿಗೆ ನಿಲ್ಲೆ ಆ ಸೋಂಕಿನೊಳೆ ಕರಗಿ ಮರಳಿ ಹೊಳೆಸೇರುವುವು ಚಿತ್ತವಾಳ್ವುದು ಮರಳಿ ಆ ಹರಿವಿನಲ್ಲೆ ಕರಣವಿರೆ ವಿಷಯಗಳು ಚಿತ್ತವಿರೆ ಚಿಂತೆಗಳು ಜೀವವಿರೆ ಜಗವೆಂಬ ದ್ವೈಧವೇ ಮೆರೆಯೆ ಆ ನಿಲವ...
ಕತ್ತಲದು ಕಗ್ಗತ್ತಲರಿವಾಳನರಿಯದೆಯೆ ಮತಮತಗಳಟ್ಟಣೆಯ ಕಟ್ಟಿ ನಿಲುವಿರುಳು ಸನಿಯನಷ್ಟನೆ ಬೆಳಗಿ ಕೊನೆಗೆ ಶರಣೆಂದೆಯೇ ಎಲ್ಲ ಮತಿ ಮೈಗರೆವ ನಿಲುಗಡೆಯ ಹುರುಳು ಉಳಿವುದೆಣಿಸುತ ಚಿತ್ತ ವಿಜ್ಞಾನದೊಳು ತೊಳಲಿ ಅಳಿವುದೆಣಿಸುತ ಪರದ ಚಿಂತೆಯೊಳು ಬಳಲಿ ವಿರಮಿ...
ಹೊಗುವಾಸೆಯಿಲ್ಲ ಕಾಲ್ತೆಗೆವಾಸೆಯಿಲ್ಲ, ಸು- ಮ್ಮನೆ ಮೇಲನಿಟ್ಟಿಸಿ ನಿಲ್ಲುವಾಸೆಯೆನಗೆ ಬೊಂಬೆಗೂಡಿದ ತೆನೆಯ ಗೋಪುರದ ಬಾಗಿಲಿನ ಕತ್ತಲೆಯೊಳಿಣಿಕಿಣಿಕಿ ಏರಲೆನ್ನ ಬಗೆ ಆ ಕತ್ತಲೊಳಹೊಕ್ಕು ಮರಳಿ ಹೊರಹಾರುವೀ ಗಿಳಿಪಾರಿವಾಳಗಳ ಭ್ರಮಣೆಯನು ಕಂಡು ಅವ್ಯಕ್...
ಕರಣವಲಯದಿ ನಿಂತು ವಿಷಯವೈವಾಹಿಕದಿ ಪಡೆವ ಸೊಗಗಳನೊಲ್ಲದೆಯೆ ಮುಂದೆ ಸರಿದು ಮೈಜರೆದು ಮನಜರೆದು ಬುದ್ದಿ ತರ್ಕವ ಜರೆದು ಅದನೊಲ್ಲದಿದನೊಲ್ಲದಾವುದನೊ ತಿರಿದು ಊರಿಗೊಂದಿರುಳಂತೆ ನೆಲದಿ ನೆಲೆಯಿಲ್ಲದೆಯೆ ತಿರಿವ ತಿರುಕರ ಕಣಸೆ, ನಿನಗೆ ನೆಲೆ ಇಲ್ಲೆ? ಜಡ...














