ನಲವು ಮುಟ್ಟುತ ಸುಟ್ಟ ಕುರುಹಿಂದ ಕಪ್ಪಿಡಿದ
ನನ್ನ ಮನಕೆಂದು ಬಹುದಾ ಚೆಲುವು ಹೊಳವು?
ವಿಷಯಂಗಳೊಲ್ಲವಿದ ಆತ್ಮವೂ ಒಲ್ಲದಿದ
ರೂಪುಗೆಟ್ಟಿರುವಿದಕೆ ಆವೊಲವು ತೆರವು?
ಮುಗಿದೆತ್ತುಗೈಯಿದನು ಕೊಂಡೆತ್ತಿ ಸೆಳೆವರಾರ್
ಸುಮನಸ್ಕರಾಲಯಕೆ ನಿಷ್ಕಳಮಿದಾಗೆ
ಸಂದೆಗಂಗಳ ವರಿಸಿ ತಿಳಿನೆನಿತು ಸರಿದರೂ
ಅರಕೆಗೊಳದರಿವಿನೊಳು ನಿಶ್ಚಿಂತವಾಗೆ?
ನನ್ನಿರಿವಿನಾನಂದನಿಧಿಯಂ ಸುತ್ತಿರುವಹಂಪಣಿಫಣಾಪಾತ
ಪುನಃ ಪುನಃ ಪ್ರಣಿಪಾತದಿಂದಹುದೆ ಸಂಮೋದ ಸನ್ನಿ ಪಾತ?
*****


















