ಬುದ್ಧ ಹೇಳುತ್ತಿದ್ದ
“ಆಶೆಯೇ ದುಃಖದ ಮೂಲ”
ಹೊರಗಿನಿಂದ ಬಂದ ವ್ಯಾಪಾರಿ
ಮಾಯಾಜಾಲ ಡಾಲರ್ ಲೆಕ್ಕಾಚಾರ
ಇಂದ್ರ ಸಭೆಯಲ್ಲಿ ಸ್ವರ್‍ಗಸುಖ
ದೇವಲೋಕವೆಲ್ಲ ಖಾಲಿಖಾಲಿ
ಮೋಕ್ಷ ಮರೀಚಿಕೆ
ಕಂಪನಿಗಳದೇ ಕಾರುಭಾರು
ಇಂದ್ರ ಸಭೆಯ ರಿಮೋಟು
ಕುಬೇರರಾಗುವ ಬಯಕೆ
ಬಹುಮುಖದ ಅಡ್ಜೆಸ್ಟ್‌ಮೆಂಟ್
ಸಾವಿನ ಭಯ, ಮೋಕ್ಷದ ಸುಖ
ಎರಡೂ ಕಾಡಲಿಲ್ಲ ಡಾಲರ್‌ಗೆ
ಹುಚ್ಚು ಕುದುರೆಯ ಬೆನ್ನೇರಿ
ತಿರುಗುತ್ತಿದೆ ಹೀಗೆಯೇ
ಅಹಂಕಾರದ ಅಮಲೇರಿದವನೆ
ಪರಿಸರ, ಬುದ್ಧಿ ಸಂಪತ್ತು
ಸಂಸ್ಕೃತಿಗಳ ಸಹಿತ
ಬುದ್ಧ ಸಂದೇಶಗಳ ಒತ್ತೆಯಿಟ್ಟು
ಮಾಯಾ ಜಾಲದಲಿ ಸಿಲುಕಿ
ಒಪ್ಪಂದಗಳಿಗೆ ಮುದ್ರೆ ಹಾಕಿ
ಹಪಹಪಿಸಿ ಆಸೆಪಟ್ಟು
ಎಲ್ಲವನೂ ಕಳೆದುಕೊಂಡಳ್ಳುವ
ನಮಗಿನ್ನೂ ಅರ್‍ಥವಾಗಿಲ್ಲ
ದುಃಖದ ಮೂಲ ಆಸೆಯೆಂಬ
ಬುದ್ಧನ ಸಂದೇಶ.
*****