ಜೋಡಿ ಹಕ್ಕಿ ಗೂಡು ಕಟ್ಟಿ ಮರಿಗಳಾದುವೋ
ಮರಿಗಳೆಲ್ಲಮ್ಮ
ಮರಿಗಳೆಲ್ಲ ಹಾರಿ ಹೋಗಿ ಗೂಡು ಬರಿದಾಯಿತೋ
ಗೂಡು ಎಲ್ಲಮ್ಮ
ಮಳೆ ಬಂದು ಹಳ್ಳ ತುಂಬಿ ಹಸಿರಾಯಿತೋ
ಹಸಿರು ಎಲ್ಲಮ್ಮ
ಮಳೆ ನಿಂತು ಹಳ್ಳ ಬತ್ತಿ ಭಣಗುಟ್ಟಿತೋ
ಹಳ್ಳ ಎಲ್ಲಮ್ಮ
ಹೂವರಳಿ ಗಂಧ ಬೀರಿ ಬನವಾಯಿತೋ
ಹೂವು ಎಲ್ಲಮ್ಮ
ಹೂ ಬಾಡಿ ಉದುರಿ ಬಿದ್ದು ಒಣಗಾಯಿತೋ
ಬನ ಎಲ್ಲಮ್ಮ
ಜಾತ್ರೆ ಸೇರಿ ಜನ ಕೂಡಿ ಕಲ್ಯಾಣವಾಯಿತೋ
ಜಾತ್ರಿ ಎಲ್ಲಮ್ಮ
ಜಾತ್ರಿ ಕಳೆದು ಜನ ಹೋಗಿ ಶೂನ್ಯವಾಯಿತೋ
ಜನ ಎಲ್ಲಮ್ಮ
*****