ಹಲವು ದಿನಗಳಿಂದ ವ್ಯಾಖ್ಯೆಯೊಂದನ್ನು
ಹುಡುಕುತ್ತಿದ್ದೇನೆ ಪ್ರೀತಿಗೆ
ಆದರೂ ಸಿಗುತ್ತಿಲ್ಲ
ಯಾವಾಗ ಸಿಗಬಹುದೋ?!

ಪದಗಳಲ್ಲಿ ವರ್ಣಿಸೋಣವೆಂದರೆ
ಪದಪುಂಜವೇ ಸಾಲದು
ಸಂಕೇತಗಳಲ್ಲಿ ವಿವರಿಸಹೊರಟೆ
ಆದರೆ ಸಂಕೇತಗಳೇ ಸಿಗಲೊಲ್ಲದು

ಅಳತೆ ಮಾಡೋಣವೆಂದರೆ
ಒಬ್ಬೊಬ್ಬರದು ಒಂದೊಂದು ರೀತಿ
ತಿಳಿಸಹೊರಟೆ ಸನ್ನೆಯ ಮೂಲಕ
ಇಲ್ಲ; ಸಾಧ್ಯವಾಗಲೇ ಇಲ್ಲ.

ಕೆಲವರ ಅರ್ಥದಲ್ಲಿ ಪ್ರೇಮ
ಎಂದರೆ ಕೇವಲ ಕಾಮ
ಇನ್ನೊಬ್ಬರಿಗೆ ಸಮಯ ಕಳೆಯಲು
ಇರುವ ಸಾಧನ

ಕೊನೆಗೂ ತಿಳಿಯಲೇ ಇಲ್ಲ
ಪ್ರೀತಿಯ ನಿಜವಾದ ಅರ್ಥ
ಮುಂದೆ ಎಂದಾದರೂ ತಿಳಿಯಬಹುದು
ಅಂದುಕೊಂಡು ಸಮಾಧಾನಗೊಂಡೆ ನಾನು.
*****