ಜಾರುಗೆನ್ನೆಯ ಕಡೆಗೆ ಸುಳಿವಾಸೆ ದಿಟ್ಟಿಗಳ
ದಟ್ಟಿಸುತ ಓಲೆಮಣಿ ಮೊನೆವೆಳಗನೆಸೆಯೆ
ಕೈಮುಗಿವ ಪ್ರಮದೆಯರ ಕಂಕಣಗಳಲುಗುತ್ತ
ಕುಂಬಿಡುವ ಬಳುಕುಮೈಗೆಚ್ಚರಿಕೆಯುಲಿಯೆ,
ಅಂದಿನಿಂದಿ೦ದುವರೆಗೊಂದೆ ಏರಿಳಿತದೊಳು
ಶ್ರೋತ್ರಪಥಕಿಳಿದು ಬಹ ವೇದಬೃಂಹಿತಕೆ
ಮನದೆಲ್ಲ ಸದ್ದಡಗಿ ಮತ್ತೆಲ್ಲ ದೊರೆಯದಿಹ
ಗಾಂಭೀರ್ಯವಳವಡಲು ಸನ್ನಿಧಿಯ ಜನಕೆ
ಆ ಧೂಪವಾದೀಪವಾತಾಳಮೇಳಗಳ ಆ ಸರ್ವಸಂಘಾತದಿ
ಮೂಡಿಬಹ ದಿವ್ಯತೆಯೆ ದಿನದಿನವು ನಿಧಿಗೊಳುತ ಕಳಕಳಿ ಪುದೀ ಬಿಂಬದಿ.
*****


















