Home / Kannada Short Stories

Browsing Tag: Kannada Short Stories

ಮೊನ್ನೆ ನನ್ನ ಲಗ್ನ ಪತ್ರಿಕೆ ನೋಡಿ, ಏನೇನೋ ಲೆಕ್ಕ ಮಾಡಿ, ನಮ್ಮಪ್ಪ “ಲೋ! ನಿನಗೆ ಮದುವೆಯಾಗಿ ವರ್‍ಷೂವರೆ ಆಯಿತು” ಎಂದು ಏನೋ ಮಾತಿನ ಮೇಲೆ ಮಾತು ಬಂದು ಎಂದರು. ನಮ್ಮ ಮನೆ ಪುರೋಹಿತರು, ವೆಂಕಣ್ಣನವರು, ಬೆರಳು ಮಡಿಸಿ, ಬೆರಳು ಬಿಚ್...

ಈಶ್ವರ ಭಟ್ಟರ ಮಗ ಕೇಶವ ಮಾಣಿಯು ತನ್ನ ಕೊಳಕೆ ಗದ್ದೆಯ ಕಟ್ಟಪುಣಿಯಲ್ಲಿ ಕೂತು ಕೊನೆಯ ದಮ್ಮನ್ನು ಬಲವಾಗಿ ಎಳೆದು ಹೊಗೆಯನ್ನು ಚಕ್ರಾಕಾರವಾಗಿ ಬಿಡುತ್ತಾ ತುಂಡನ್ನು ಕೆಸರಿಗೆ ಎಸೆದ. ಅದು ಚೊಂಯ್‌ ಎಂದು ಸದ್ದು ಹೊರಡಿಸುತ್ತಾ ಕೊನೆಯುಸಿರನ್ನೆಳೆಯುವು...

ಅಲ್ಲೊಂದು ಪುಟ್ಟಶಾಲೆ. ಅದರ ಸುತ್ತಲೂ ಮಕ್ಕಳೇ ನಿರ್‍ಮಿಸಿದ ಸುಂದರ ಹೂದೋಟ. ಅದಕ್ಕೆ ಹೊಂದಿಕೊಂಡಂತೆ ವಿಸ್ತಾರವಾದ ಆಟದ ಮೈದಾನ. ಅದರ ಸುತ್ತಲೂ ನೆರಳಿಗಾಗಿ ಅನೇಕ ದೊಡ್ಡ ದೊಡ್ಡ ಮರ ಗಿಡಗಳಿವೆ. ಅದೊಂದು ಮಾದರಿ ಶಾಲೆಯಾಗಿತ್ತು. ಸಂಜೆ ನಾಲ್ಕರ ಸಮಯ,...

ತಟ್ಟಿಯಲ್ಲಿ ಕಟ್ಟಿದ ಸಣ್ಣ ಕರು ಒಂದೇ ಸಮನೇ ಅಂಬಾ.. ಕೂಗುತ್ತಲೇ ಇತ್ತು. ತಾಯಿಯನ್ನು ಮೇಯಲು ಬಿಟ್ಟು ಕರುವನ್ನು ಕಟ್ಟಿ ಹಾಕಲು ಮಗಳು ಸಣ್ಣುಗೆ ಹೇಳಿ ಕುಸಲಿ ಕೆಲಸಕ್ಕೆ ಹೋಗಿದ್ದಾಳೆ. ಉಗಾದಿ ಆಗಿಂದ ಏನಾದರೊಂದು ನೆವ ತೆಗೆದು ತಕರಾರು ಮಾಡುತ್ತಲೇ ...

ಕಾರಾಗೃಹದ ಮೂಲೆಯಲ್ಲಿ ಕುಳಿತಿದ್ದ ಶಂಕರ್ ಪಾಂಡೆಗೆ ಮನದಲ್ಲಿ ಕತ್ತಲೆ ಆವರಿಸಿತ್ತು. ನೊಂದು ಬೆಂದು ಅವನ ಹೃದಯ ಬೇಸತ್ತಿತ್ತು. ವಿದ್ಯಾರ್‍ಜನೆಯಲ್ಲಿ ತೊಡಗಿ ಸ್ನಾತಕೋತ್ತರ ಪದವಿ ಪಡೆದಿದ್ದ ಪಾಂಡೆ ಇಂದು ಕಾರಾಗೃಹದಲ್ಲಿ ಜೀವಾವಧಿ ಶಿಕ್ಷೆಯನ್ನು ಅನ...

ಬೇಬಿ ವಸಂತನ ಸುದ್ದಿಯಲ್ಲದೆ ಇನ್ನಾರ ಸುದ್ದಿಯನ್ನೂ ಬರೆಯಬೇಡ ಎಂದು ಹೇಳಿದ್ದೀಯಾ. ಅವನ ವಿಷಯವನ್ನೇ ಬರೆಯುತ್ತೇನೆ. ಬೇಬಿ ನಿಲ್ಲುತ್ತಾನೆ; ಬೇಬಿ ಕೂತುಕೊಳ್ಳುತ್ತಾನೆ; ಬೇಬಿ ಮಲಗುತ್ತಾನೆ. ಬೇಬಿ ನಗುತ್ತಾನೆ; ಬೇಬಿ ಅಳುತ್ತಾನೆ ಬೇಬಿ ನಿದ್ರೆ ಮಾಡ...

ಸಂತ್ರಸ್ತರ ಆ ಶೆಡ್ಡಿಗೆ ನಾಗವ್ವನ ಕುಟುಂಬ ಸ್ಥಳಾಂತರವಾಗಿ ಆರು ತಿಂಗಳಾಗಿತ್ತು. ನಾಲ್ಕಂಕಣದ ದಂಧಕ್ಕಿ ಮನಿ ಸಾರಿಸಿ ಪಡಿ ಹಿಟ್ಟಿನ ರೊಟ್ಟಿತಟ್ಟಿ ತಣ್ಣಗ ಮುಂದಿನ ಬಂಕಕ್ಕೆ ಕುಬಸ ಬಿಚ್ಚಿ ಮಲಗಿದಳೆಂದರೆ ಹೇಳದ ಕೇಳದ ನಿದ್ದಿ ತೆಕ್ಕಿ ಬಡಿಯುತ್ತಿತ್...

“ಹಲೋ-ಸ್ವೀಟಿ-ಗುಡ್ ಮಾರ್‍ನಿಂಗ್-” ಡಾಕ್ಟರ್ ವಿಜಯಾ ಪ್ರೊಫೆಸರ್‍ಗೆ ವಿಶ್ ಮಾಡಿದಳು. ಆತ್ಮವಿಶ್ವಾಸದ, ಧೈರ್‍ಯ-ಆಸೆ ಭರವಸೆ ಹುಟ್ಟಿಸುವ ಪುಟ್ಟ ತೀಕ್ಷ್ಣವಾದ ಕಣ್ಣುಗಳ ಸ್ವಲ್ಪವೇ ಸ್ಥೂಲಕಾಯದ ಎತ್ತರದ ನಿಲುವಿನ ಮಧ್ಯ ವಯಸ್ಸು ದಾಟಿದ...

ಕಣ್ಣುಮಸುಕು ಇರುವಾಗಲೇ ಅವಳು ಊರ ಹೊರಗಿನ ಬಾವಿಗೆ ನೀರಿಗೆ ಹೋದಳು. ಹಾದಿಯಲ್ಲಿ ಒಂದು ಮನೆಯ ಕಟ್ಟೆಯ ಮೇಲೆ ಒಬ್ಬ ಸಣ್ಣ ಹುಡುಗಿಯು ತನ್ನ ಚಿಕ್ಕ ತಮ್ಮನನ್ನು ಚಂದಪ್ಪನ ಕಡೆಗೆ ಬೊಟ್ಟು ಮಾಡಿ ತೋರಿಸಿ ರಮಿಸುತ್ತಿದ್ದಳು. ಸಂಜೆಯಾದರೂ ತನ್ನ ಹುಡುಗ ಮನ...

ಲೀಲಾವತಿಯು ಒಬ್ಬ ಬಡ ಬ್ರಾಮ್ಹಣನ ಮಗಳು. ಅವಳ ತಂದೆಯು ಒಂದು ಅಂಗಡಿಯಲ್ಲಿ ಕಾರಕೂನನನಾಗಿದ್ದನು. ಆತನಿಗೆ ಪಿತ್ರಾರ್‍ಜಿತ ಆಸ್ತಿಯೆಂದರೆ ಒಂದೇ ಒಂದು ಸಣ್ಣ ಬಾಗಾಯತ್ತು. ಹಾಗೂ ಹೀಗೂ ಮನೆಯ ವೆಚ್ಚ ಸಾಗುತ್ತಿದ್ದಿತು. ಬೇರೆಯವರಂತೆ ಚಹಾಫಲಾಹಾರದ ರೂಢಿ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....