Home / Hannerdmath

Browsing Tag: Hannerdmath

ಹಕ್ಕಿಯಾಗೈ ಚುಕ್ಕಿಯಾಗೈ ಹಾರು ಮುಗಿಲಿನ ತೋಟಕೆ || ಜೇನುತುಪ್ಪಾ ಜಾರಿ ಸುರಿದಿದೆ ಚಾಚು ತಮ್ಮಾ ನಾಲಿಗೆ ವಾಣಿ ವೃಕ್ಷದಿ ಗಾನ ಸುರಿದಿದೆ ಬಿಚ್ಚು ತಮ್ಮಾ ಹಾಲಿಗೆ ಹರನೆ ಬಂದನು ಬಂದೆನೆಂದನು ಪಕ್ಷಿ ಕಂಠದಿ ನಕ್ಕನು ರಾಜಯೋಗಿಯ ತೇಜಪುಂಜದ ಮಿಂಚು ಗೊಂ...

ವಿಶ್ವಾತ್ಮನ ಮಠ ಪೀಠಾರೋಹಿಣೆ ಠೀವಿಯ ಠಾವಿನ ಶಾಂಭವಿಯೆ ಶಕ್ತಾತ್ಮಳೆ ದಿಟ ಭಟರಾರಾಧನೆ ಠಿಂ ಠಿಂ ಠೀವಿಯ ವೈಭವಿಯೆ ಜಗದಂಬಾಂಬೆ ಮಾಯಾಂಗಾರಳೆ ಉಡಿಯಲಿ ತುಂಬೌ ಮಕ್ಕಳನು ಚಿದ್ಘನ ತೂರ್ಯೆ ಋಙ್ಞನ ಧಾರ್ಯೆ ಅಪ್ಪೌ ಮುದ್ದಿನ ಸಿಸುಗಳನು ನಿನ್ನಯ ಪದತಲ ಋಷಿ...

ಹೊಡೆ ಹೊಡೆ ಮುಗಿಲಿನ ಡಿಂಡಿಂ ಡಂಗುರ ಕಡಲಿನ ಡಮರುಗ ಡಂಡಂಡೈ ರಾವಣ ರುಂಡಾ ಬುಡುಬುಡು ಬಿತ್ತೈ ಕಾಮಾ ಸತ್ತೈ ಥಥೈಥೈ ಓಹೋ ಶಕ್ತಿ ಕೋಹೋ ಮುಕ್ತಿ ಸೋಹಂ ಸೋಹಂ ಹಂಸೋ ಸೈ ಪಾವನ ವಿಶ್ವಾ ಪರಿಮಳ ವಿಶ್ವಾ ಪಂಪಂ ಪವನನ ಸಂಪಂಪೈ ಜಾತಿಕೋತಿ ಪುರ್ರಂ ಪಾತಿ ಹರಿ...

ನನ್ನ ಕೂಸು ಗಿಣಿಯ ಕೂಸು ಹಸಿದು ಅಬ್ಬಾ ಎನುವದು ಸಂತಿ ಪ್ಯಾಟಿಗೆ ಹೊಂಟ ನನ್ನೆಡೆ ಅಂಬೆಗಾಲಿಲೆ ಬರುವದು ಅಂಗಿ ಟೊಪ್ಪಿಗಿ ಮುತ್ತು ಗೊಂಬಿ ಕೊಂಡು ಕೂಸನೆ ಮರೆತೆನು ಊರ ಮನೆಯಾ ಕೂಸು ಕಾಣುತ ನನ್ನ ಕೂಸೆ ಎಂದೆನು ಮನೆಯ ಕೂಸು ಮನೆಯಲುಳಿಯಿತು ಓಣಿ ಓಣಿಯ...

ಒಡಕು ಮಸರಿನ ಸಿಡಿದ ಎಸರಿನ ಶಬ್ಬ ಡಂಗುರ ನಿಲ್ಲಲಿ|| ಉಲಿಯ ನುಲಿಯಲಿ ಬಲಿಯ ನೂಲದೆ ಶಬ್ದ ಗಂಟೆಯ ಮೀರುವೆ ತಮಟೆ ಜಾಗಟೆ ಕಾಳಿಭೇರಿಯ ಶಂಖವಾದ್ಯವ ದಾಟುವೆ ಮಾತು ಸುಣ್ಣಾ ಮೌನ ಮಲ್ಲಿಗೆ ಹೂವಿನೆದೆಯಲಿ ಮಲಗುವೆ ಜಾತ್ರಿ ಬೇಡ ತೇರು ಬೇಡ ಕಳಸ ಗೋಪುರ ತೊರ...

ಮುಗಿಲು ನೋಡು ಮಹವ ನೋಡು ಜಡದ ಮೇಲಿದೆ ಜಂಗಮಾ ಒಳಗು ನೋಡು ಬೆಳಗು ನೋಡು ವಿಶ್ವ ಕೂಡಲ ಸಂಗಮಾ ಕಲ್ಲು ಗುಡ್ಡಾ ಮುಳ್ಳುಗಾಡು ಮೇಲೆ ಮೌನದ ನೀಲಿಮಾ ವಿರಸ ಮಾಲೆ ರಸವೆ ಮೇಲೆ ಶಾಂತ ಸುಂದರ ಪೌರ್ಣಿಮಾ ಬೇಡ ಜಾಢ್ಯಾ ಬೇಡ ಮೌಢ್ಯಾ ಆಗು ಸಿಡಿಲಿನ ಜಂಗಮಾ ನೋಡ...

ವಿಶ್ವಶಾಂತಿಗೆ ಸತ್ಯಯಜ್ಞಕೆ ಅಜ್ಞ ತನುವಿದೊ ಅರ್ಪಣೆ || ಸೇವೆಗಾಗಿ ಸವೆದು ಹೋಗುವೆ ನಾನು ತನವನು ಒಡೆಯುವೆ ವಿಶ್ವ ಸೇವೆಗೆ ಶಾಂತಿ ಸೇವೆಗೆ ನನ್ನ ಬಲಿಯನು ನೀಡುವೆ ನನ್ನ ಕೀರ್ತಿಗೆ ನನ್ನ ವಾರ್ತೆಗೆ ಸೇವೆಗೈವುದೆ ವಿಷತನಾ ಜಗದ ಹಿತದಲಿ ಸತ್ಯ ತಪದಲಿ...

ಓ ನೋಡು ಕೋ ನೋಡು ಹೋ ನೋಡು ಹೈ ನೋಡು ಅಬ್ಬಯ್ಯನಾ ಬೆಟ್ಟದಪ್ಪಯ್ಯನಾ ಅಪ್ಪಯ್ಯ ಬಂದಾನ ಅಬ್ಬಯ್ಯ ಮರುವಶಕ ಅಕ್ಕಯ್ಯ ಅಣ್ಣಯ್ಯ ತಾರಯ್ಯ ತಾ ಲಕಲಕ್ಕ ಲಕ್ಕಯ್ಯ ಲಕ್ಕೀಯ ಈ ಕೊಳ್ಳ ಹಕ್ಯಾಗಿ ಹಾರೇನೊ ಬುರ್ರನೆಂದೊ ಓ ನೋಡು ಶಿವಶಿವಾ ಝಲ್ಲೆಂತೊ ನರನರಾ ವಿಶ...

ಬಾರೊ ಬಾರೊ ಮುಗಿಲಿನ ಗೆಳೆಯಾ ಮಿಠಾಯಿ ಕೊಡುವೆನು ಮಳೆಯಣ್ಣಾ || ಅಗಲದ ಮುಗಿಲಲಿ ಹಗಲಿನ ಹೆಗಲಲಿ ಹಲಿಗೆಯ ಬಾರಿಸಿ ಬಾರಣ್ಣಾ ಸುಣ್ಣಾ ಬಣ್ಣಾ ಹಣ್ಣಾ ಕೊಡುವೆನು ಕಳ್ಳೇ ಮಳ್ಳೇ ಕುಣಿಯಣ್ಣಾ ನೆಲ ನೆಲ ಕಾಯಿತು ಕುಲಿಮೆಯು ಸಿಡಿಯಿತು ಬೆಂಕಿ ಬಿತ್ತೋ ಮಳೆ...

ಆಗು ಯೋಗಿ ಸಹಜ ಯೋಗಿ ಕರ್ಮ ನಿರ್ಮಲ ರಸ‌ಋಷಿ|| ಆಗು ಅಚಲಾ ವಿಚಲದಾಚೆಗೆ ಚಿತೆಯ ಚಂಚಲ ಚಲ್ಲು ನೀ ಮನವೆ ರೋಗಾ ಮನವೆ ರಾಗಾ ಸಗ್ಗ ನರಕದ ಸರಿಗಮಾ ಮದ್ಯಪಾನಾ ವಧ್ಯ ಗಮನಾ ಧಮ್ರ ಧೂಮದ ದರ್ಪಣಾ ಹಾಲುಜೇನಿನ ಹೊಟ್ಟೆ ಕೊಳಗಕೆ ಕೊಳೆತ ವಿಷಗಳ ತರ್ಪಣಾ ನನಗೆ ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...