ವಿಶ್ವಾತ್ಮನ ಮಠ ಪೀಠಾರೋಹಿಣೆ
ಠೀವಿಯ ಠಾವಿನ ಶಾಂಭವಿಯೆ
ಶಕ್ತಾತ್ಮಳೆ ದಿಟ ಭಟರಾರಾಧನೆ
ಠಿಂ ಠಿಂ ಠೀವಿಯ ವೈಭವಿಯೆ

ಜಗದಂಬಾಂಬೆ ಮಾಯಾಂಗಾರಳೆ
ಉಡಿಯಲಿ ತುಂಬೌ ಮಕ್ಕಳನು
ಚಿದ್ಘನ ತೂರ್ಯೆ ಋಙ್ಞನ ಧಾರ್ಯೆ
ಅಪ್ಪೌ ಮುದ್ದಿನ ಸಿಸುಗಳನು

ನಿನ್ನಯ ಪದತಲ ಋಷಿತಲ ಶಿವನೆಲ
ಬಿತ್ತೌ ಬೆಳಸೌ ಚಿರಸೌಖ್ಯ
ಶಕ್ತಿಯ ಯುಕ್ತಿಯ ಚಿತ್ತಿನ ಚಂದ್ರಳೆ
ಜೀಕಿಸು ಚುಂಬಿಸು ಮಧುಸಖ್ಯ

ಏಕೌ ಹಡೆದಿಹೆ ಏಕೌ ಪಡೆದಿಹೆ
ಏಕೌ ಮರೆದಿಹೆ ಮಕ್ಕಳನು
ಸಾಕೌ ಕಾಡಿಕೆ ಬೇಕೌ ನೀಡಿಕೆ
ತಾರೌ ಸವಿಮೊಲೆ ಚಂದ್ರವನು

ನೀನೌ ಶಿವತನ ಸುಂದರ ಖುಷಿವನ
ಸತ್ಯಂ ನಿತ್ಯಂ ಸೌಂದರ್ಯ೦
ಶಿವಗುಣ ಗಾನಂ ನಿಜಗುಣ ತಾಣಂ
ಜಗವೇ ಯೋಗಂ ಮಾಧುರ್ಯಂ
*****