ಜಗವೇ ಯೋಗಂ ಮಾಧುರ್ಯಂ

ವಿಶ್ವಾತ್ಮನ ಮಠ ಪೀಠಾರೋಹಿಣೆ ಠೀವಿಯ ಠಾವಿನ ಶಾಂಭವಿಯೆ ಶಕ್ತಾತ್ಮಳೆ ದಿಟ ಭಟರಾರಾಧನೆ ಠಿಂ ಠಿಂ ಠೀವಿಯ ವೈಭವಿಯೆ ಜಗದಂಬಾಂಬೆ ಮಾಯಾಂಗಾರಳೆ ಉಡಿಯಲಿ ತುಂಬೌ ಮಕ್ಕಳನು ಚಿದ್ಘನ ತೂರ್ಯೆ ಋಙ್ಞನ ಧಾರ್ಯೆ ಅಪ್ಪೌ ಮುದ್ದಿನ ಸಿಸುಗಳನು...

ಕೆ.ಎಸ್. ನರಸಿಂಹಸ್ವಾಮಿ

ಶಬ್ದಕೋಶವ ಎಸೆದು ಜನದ ನಾಲಿಗೆಯಿಂದ ಮಾತನೆತ್ತಿದ ಜಾಣ, ನೇರಗಿಡದಿಂದಲೇ ಹೂವ ಬಿಡಿಸುವ ಧ್ಯಾನ; ತೊಟ್ಟ ಮಾತೆಲ್ಲವೂ ಗುರಿಗೆ ತಪ್ಪದ ಬಾಣ. ಕವಿತೆ ಜೊತೆ ಮೊದಲೆಲ್ಲ ಮನ್ಮಥ ಮಹೋತ್ಸವ, ಪ್ರೀತಿಗೆ ರಥೋತ್ಸವ. ಮಲ್ಲಿಗೆಯ ಹೆದೆಯಲ್ಲಿ ಹೂಡಿ...