Month: February 2020

#ಕವಿತೆ

ಮಳೆ

0
ಸವಿತಾ ನಾಗಭೂಷಣ
Latest posts by ಸವಿತಾ ನಾಗಭೂಷಣ (see all)

ಮಳೆ ಎಂದರೆ ಮೋಡ ಮಿಂಚು ಗುಡುಗು ಸಿಡಿಲು. ಮಳೆ ಎಂದರೆ ಹಳ್ಳ ಕೊಳ್ಳ ನದಿ ಹೊಳೆ. ಮಳೆ ಎಂದರೆ ಚಹಾ ಚುರುಮುರಿ ಕಂಬಳಿ ಕೊಡೆ. ಮಳೆ ಎಂದರೆ ಸೋರುವ ಸೂರು ಮುರಿದ ಚಾವಣಿ. ಮಳೆ ಎಂದರೆ ಬುಡ ಕಡಿದ ಮರ ಉದುರಿದ ಹೂವು ಎಲೆ. ಮಳೆ ಎಂದರೆ ಬೆಳೆ ಮಳೆ ಎಂದರೆ ಹೊಳೆ ಮಳೆ ಎಂದರೆ […]

#ಕವಿತೆ

ಮೂರ್ಛೆ ಬಂದಿತ್ತು

0
Latest posts by ಹೊಯಿಸಳ (see all)

ಮೂರ್ಛೆ ಬಂದಿತ್ತು! ಮೂರ್ಛೆ ಬಂದಿತ್ತು! ಕಾಂಪೋಂಡು ಬಂಗ್ಲಿ ಕಂಕಮ್ಮಂಗೆ ಮೂರ್ಛೆ ಬಂದಿತ್ತು ಮದಿವೊ ಏನೋ ಆಗುತಿತ್ತಂತೆ ಚಪ್ಪರ ಕಂಬ ವರಗಿದ್ದರಂತೆ ಮದವಣಗನ್ನೇ ನೋಡುತಿದ್ದರಂತೆ ಯಾಕೋ ಏನೋ ಬಂದವರಂತೆ ಯಾರೋ ಏನೋ ಉಸಿರಿದರಂತೆ ಕೂತಿದ್ದ ಹಾಗೇ ಕನಕಂನೋರು ಇದ್ದಿದ್ದ ಹಾಗೇ ನಿಟ್ಟುಸಿರಿಟ್ಟು ಕಂಬ ಬಿಟ್ಟು ಜಾರಿದರಂತೆ ಕಂಕಂಮ್ಮ ಕಾಂಪೋಂಡು ಬಂಗ್ಲಿ ಕಂಕಂಮ್ಮ ಏಕಾ ಏಕೀ ಉಸಿರೇ ನಿಂತು […]

#ಕವಿತೆ

ಉದ್ಯೋಗ ಖಾತ್ರಿ

0
ಆಂಗ್ಲಭಾಷಾ ಉಪನ್ಯಾಸಕಿ
ಪ್ರಕಟಿತ ಕೃತಿಗಳು: ಏಣಿ ಮತ್ತು ಪದಗಳೊಂದಿಗೆ ನಾನು[ ಕವನ ಸಂಕಲನಗಳು,] ಪಾಶ್ಚಿಮಾತ್ಯ ಸಾಹಿತ್ಯ ಲೋಕ [ಅಂಕಣಬರಹ ಕೃತಿ]
ಪ್ರಶಸ್ತಿಗಳು:ಏಣಿ ಕವನ ಸಂಕಲನಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀಮತಿ ಶಾರದಾ ರಾಮಲಿಂಗಪ್ಪ ದತ್ತಿ ಪ್ರಶಸ್ತಿ,
ಸಂಕ್ರಮಣ ಕಾವ್ಯ ಪ್ರಶಸ್ತಿ ೨೦೧೬, ರವಿಕಿರಣ ಸಾಹಿತ್ಯ ಪ್ರತಿಷ್ಠಾನ ಬೆಂಗಳೂರು ಪ್ರಥಮಕಥಾ ಬಹುಮಾನ ೨೦೧೮ , ತುಷಾರ ಮಾಸ ಪತ್ರಿಕೆಯ ಕ್ಯಾಲಿಫೋನರ್ಿಯಾ ಕಾವ್ಯಾಂಜಲಿ ತೃತೀಯ ಕಥಾ ಬಹುಮಾನ ೨೦೧೮ ಇತ್ಯಾದಿ ಬಹುಮಾನ ಬಂದಿದೆ.ಮೊಗವೀರ ಮಾಸಪತ್ರಿಕೆ ಮುಂಬಯಿ ೨೦೧೭ರ ಸಮಾಧಾನಕರ ಕಥಾ ಬಹುಮಾನ, ಕರಾವಳಿ ಮುಂಜಾವು ದಿನಪತ್ರಿಕೆಯದೀಪಾವಳಿ ಕಥಾ ಸ್ಪಧರ್ೆಗಳಲ್ಲಿ ಬಹುಮಾನ ಇತ್ಯಾದಿ ಬಂದಿರುತ್ತವೆ.
ನಾಗರೇಖಾ ಗಾಂವಕರ

ವಿರಳವಾಗಿಹರು ಇಂದು ಒಪ್ಪತ್ತು ಕೆಲಸಕ್ಕೂ ಆಳು ಗದ್ದೆಯಲಿ ಕಳೆ ಬೆಳೆದು ಬೆಳೆಯಂತೂ ಹಾಳು. ದುಂಬಾಲು ಬಿದ್ದರೂ ದರಕಾರೇ ಇಲ್ಲ: ಉದ್ಯೋಗ ಖಾತರಿಯ ಯೋಜನೆಯೇ ಬೆಲ್ಲ. ಕೆಲಸ ಮಾಡದಿರೂ ಬರಿಯ ಹೆಸರ ದಾಖಲೆ ಫೈಲು ಶುಕ್ರ, ಸೋಮ ಜೊತೆಗೆ ಮಾದನಿಗೂ ಡೌಲು. ಜೇಬಿನಲಿ ಜಣಜಣ ದಿನಕ್ಕೆ ನೂರಿಪ್ಪತ್ತು ಹೆಂಡದಂಗಡಿ ಒಡೆಯ ಹಣ ಎಣಿಸಿ ಸುಸ್ತು. ಸರಕಾರಿ ಸವಲತ್ತು […]

#ಕವಿತೆ

‘ಕೀಚಕ’: ಕೈಲಾಸಂ ಸ್ಮರಣೆ

0
ಕಾಸರಗೋಡಿನ ಕಾರಡ್ಕ ಎಂಬಲ್ಲಿ ೧೯೪೦ ರಲ್ಲಿ ಜನನ. ಕಾಸರಗೋಡು, ತಿರುವನಂತಪುರ, ಹೈದರಾಬಾದುಗಳಲ್ಲಿ ವಿದ್ಯಾಭ್ಯಾಸ. ಇಂಗ್ಲೀಷ್ ಸಾಹಿತ್ಯದಲ್ಲಿ ಎಂ. ಎ.; ಭಾಷಾಶಾಸ್ತ್ರದಲ್ಲಿ ಪಿಎಚ್.ಡಿ. ಕೇರಳದ ಹಲವೆಡೆ ಇಂಗ್ಲೀಷ್ ಅಧ್ಯಾಪಕರಾಗಿ ವೃತ್ತಿಜೀವನ ಆರಂಭ; ಆನಂತರ ಹೈದರಾಬಾದಿನ ಉನ್ನತ ಶಿಕ್ಷಣ ಸಂಸ್ಥೆ ಸೆಂಟ್ರಲ್ ಇನ್ಸ್‌ಟಿಟ್ಯೂಟ್ ಆಫ್ ಇಂಗ್ಲಿಷ್ ಎಂಡ್ ಫಾರಿನ್ ಲಾಂಗ್ವೇಜಸ್‌ನಲ್ಲಿ ಪ್ರಾಧ್ಯಾಪಕ.೨೦೦೨ರಲ್ಲಿ ನಿವೃತ್ತಿ.ಅಮೇಲೆ ಅಮೆರಿಕ, ಯೆಮೆನ್ ದೇಶಗಳಲ್ಲಿ ಅಧ್ಯಾಪನ. ಸದ್ಯ ಹೈದರಾಬಾದಿನಲ್ಲಿ ವಾಸ್ತವ್ಯ. ‘ಮುಖಾಮುಖಿ’ ಕವನಸಂಕಲನಕ್ಕೆ ಕೇರಳದ ಕುಮಾರನ್ ಆಶಾನ್ ಅವಾರ್ಡ್ ಮತ್ತು ಕಾಂತಾವರದ ವರ್ಧಮಾನ ಪ್ರಶಸ್ತಿ; ‘ಅವಧ’ ಕವನ ಸಂಕಲನಕ್ಕೆ ಮತ್ತು ‘ಸಮ್ಮುಖ’ ಲೇಖನ ಸಂಕಲನಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಮತ್ತು ‘ಅಕ್ಷಯ ಕಾವ್ಯ’ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ ೨೦೧೫ರ ಸಾಲಿನ ಪ್ರಶಸ್ತಿ ಲಭಿಸಿದೆ. ಅಲ್ಲದೆ, ಪುತ್ತೂರು ಕರ್ನಾಟಕ ಸಂಘದ ನಿರಂಜನ ಪ್ರಶಸ್ತಿ, ಮತ್ತು ಶಿವಮೊಗ್ಗ ಕರ್ನಾಟಕ ಸಂಘದ ಹಾ.ಮಾ.ನಾ. ಪ್ರಶಸ್ತಿಗಳೂ ದೊರಕಿವೆ.ಕರ್ನಾಟಕ ಸಹಿತ್ಯ ಅಕಾಡೆಮಿಯ ಗೌರವ ಸಾಹಿತ್ಯ ಪ್ರಶಸ್ತಿಗೂ ಇವರು ಪಾತ್ರರಾಗಿದ್ದಾರೆ. ತಿರುಮಲೇಶ್ ಇಂಗ್ಲೀಷ್‌ನಲ್ಲೂ ಹಲವಾರು ಲೇಖನಗಳನ್ನು ಮತ್ತು ಪುಸ್ತಕಗಳನ್ನು ಬರೆದಿದ್ದಾರೆ.
*****
ತಿರುಮಲೇಶ್ ಕೆ ವಿ
Latest posts by ತಿರುಮಲೇಶ್ ಕೆ ವಿ (see all)

ವ್ಯಾಸರ ಪರಂಪರಾಗತ ಕಾಮುಕನಲ್ಲ ಈ ಕೈಲಾಸಂ ವಿರಚಿತ ಕೀಚಕ ನಾಟ್ಯ ಕೋವಿದನೀತ ಪ್ರೇಮವೆಂಬ ವಿದ್ಯು- ದ್ದೀಪದಲಿ ಹೊಳೆವನು ಚಕಚಕ ಯಾವ ಸ್ತ್ರೀ ರತ್ನವನು ಪ್ರೀತಿಸಿದನೋ ಅವಳಿಂದಲೇ ಆಗಲವಮಾನ ತನ್ನ ಸಾವನು ತಾನೇ ಬಯಸಿದವನು ಹಳಿವನೇನು ಬಲಭೀಮನ? ತೊಡಲು ಬೇಕಾದಷ್ಟು ಸಮಯ ಬೇಡ ಕಳಚಿಕೊಳ್ಳುವುದಕ್ಕೆ ವೇಷ ಕಳಚಿದರೆ ಕೀಚಕನಿಲ್ಲ ವಿರಾಟನಗರಿಯಿಲ್ಲ ಎಲ್ಲವೂ ನಾಮಾವಶೇಷ ಎಲ್ಲಿ ಸೈರಂಧ್ರಿ? ಎಲ್ಲಿ […]

#ಇತರೆ

ಬಸ್ಸು ಪ್ರಯಾಣದ ಸುಖದುಃಖಗಳು

0
Latest posts by ವೀರೇಂದ್ರ ಸಿಂಪಿ (see all)

ಮನಸ್ಸು ಬಂದತ್ತ ಸ್ವೇಚ್ಛಾಚಾರಿಯಾಗಿ ಅಲೆಯುವಷ್ಟು ಸ್ಥಿತಿವಂತನೂ ನಾನಲ್ಲ. ‘ಪ್ರಯಾಣಕ್ಕಾಗಿ ಪ್ರಯಾಣ’ ಎನ್ನುವ ಷೋಕಿಲಾಲನೂ ನಾನಲ್ಲ. ಇಲ್ಲಿಯವರೆಗೆ ನಾನು ಸಂದರ್ಶಿಸಿದ ಸ್ಥಳಗಳಾಗಲಿ, ಸುತ್ತುವರಿದು ಅಲೆದಾಡಿದ ನಾಡುಗಳಾಗಲಿ ಕಡಿಮೆಯೆಂದೇ ಹೇಳಬೇಕು. ಪ್ರಸಿದ್ಧ ಪಟ್ಟಣಗಳೆಂದು ನಾಡಿನವರ ಬಾಯಲ್ಲೆಲ್ಲ ನಲಿಯುತ್ತಿರುವ ಸ್ಥಳಗಳು ನನ್ನ ಮಟ್ಟಿಗೆ ನಕಾಶದೊಳಗಿನ ಹೆಸರುಗಳು ಮಾತ್ರ. ಪ್ರವಾಸ ಕಥನಗಳನ್ನು ಅಷ್ಟಿಷ್ಟು ಓದಿದ ನಾನು ಆಯಾ ಊರುಗಳನ್ನು ಪ್ರತ್ಯಕ್ಷ ಕಂಡವರಿಗಿಂತ […]

#ಕವಿತೆ

ಹಾಸಿಗೆಯ ಮೇಲಿನ ಮೆತ್ತನೆ ದಿಂಬಿನ ಹಾಗೆ

0
ನಾಗಭೂಷಣಸ್ವಾಮಿ ಓ ಎಲ್
Latest posts by ನಾಗಭೂಷಣಸ್ವಾಮಿ ಓ ಎಲ್ (see all)

ಹಾಸಿಗೆಯ ಮೇಲಿನ ಮೆತ್ತನೆ ದಿಂಬಿನ ಹಾಗೆ, ಗರ್ಭಿಣಿ ತಾಯಿಯ ಹೊಟ್ಟೆಯ ಹಾಗೆ, ನೆಲ ಅಲ್ಲಿ ಉಬ್ಬಿ ಕೊಂಡಿತ್ತು. ಅಷ್ಟು ಇಲ್ಲಷ್ಟು, ಮನೆಯಲ್ಲಿ ಮತ್ತು ಮಲಗುವ ಮನೆಯಲ್ಲಿ ಅಲಂಕಾರಕ್ಕೆ ಇಡುವ ಹಾಗೆ, ಯಾರೂ ಕೀಳದ ಕೆಂಪು ಕೆಂಪು, ಬಣ್ಣ ಬಣ್ಣ ಹೂವಿನ ಗಿಡ ಇತ್ತು. ಕತ್ತಲಾಗುತ್ತಿರುವ ಸೂರ್ಯನು ಆಗತಾನೇ ಹುಟ್ಟಿದ ಚಂದ್ರನಷ್ಟು ಕೆಂಪಗೆ ಇದ್ದ. ನಮ್ಮಿಬ್ಬರ ಕೈಗಳು […]

#ಕವಿತೆ

ಹಾರು ಮುಗಿಲಿನ ತೋಟಕೆ

0

ಹಕ್ಕಿಯಾಗೈ ಚುಕ್ಕಿಯಾಗೈ ಹಾರು ಮುಗಿಲಿನ ತೋಟಕೆ || ಜೇನುತುಪ್ಪಾ ಜಾರಿ ಸುರಿದಿದೆ ಚಾಚು ತಮ್ಮಾ ನಾಲಿಗೆ ವಾಣಿ ವೃಕ್ಷದಿ ಗಾನ ಸುರಿದಿದೆ ಬಿಚ್ಚು ತಮ್ಮಾ ಹಾಲಿಗೆ ಹರನೆ ಬಂದನು ಬಂದೆನೆಂದನು ಪಕ್ಷಿ ಕಂಠದಿ ನಕ್ಕನು ರಾಜಯೋಗಿಯ ತೇಜಪುಂಜದ ಮಿಂಚು ಗೊಂಚಲ ಕೊಟ್ಟನು ಜ್ಞಾನ ಯೋಗಿಯ ಕರ್ಮ ಯೋಗಿಯೆ ಅಪ್ಪು ಮನುಕುಲ ಮಲ್ಲಿಗೆ ಮಧುರ ಮಧುವನ ರುಚಿರ […]

#ಕವಿತೆ

ಹಾಮಾ ನಾಯಕ

0
ಲಕ್ಷ್ಮೀನಾರಾಯಣ ಭಟ್ಟ ಎನ್ ಎಸ್
Latest posts by ಲಕ್ಷ್ಮೀನಾರಾಯಣ ಭಟ್ಟ ಎನ್ ಎಸ್ (see all)

ಹೆತ್ತವರು ಗೊತ್ತಿದ್ದೆ ಹೆಸರಿಟ್ಟರೆಂಬ ಥರ ಅಚ್ಚರಿಗೊಳಿಸುವಂತೆ ಬೆಳೆದ ಹಿರಿವ್ಯಕ್ತಿತ್ವ ಕನ್ನಡದ ಕೋಟೆ ಕೊತ್ತಳ ಫೌಜು ನೆಲಜಲವ ಹೋರಾಡಿ ಕಾಯ್ದುಕೊಳ್ಳುವ ಧೀರ ದೃಢಸತ್ವ ನಾಯಕರು ನಿಜವಾಗಿ ನಾಯಕರೆ ; ಗುರಿ, ನಿಟ್ಟು ವ್ಯೂಹರಚನೆಯ ಗುಟ್ಟು ಪರಿಪೂರ್ಣ ಎಲ್ಲ ಸಲ; ತೊಡೆತಟ್ಟಿ ಎದುರಾದ ಜಟ್ಟಿಯ ಕ್ಷಣಾರ್ಧದಲ್ಲಿ ಚಿತ್ತು ಮಾಡುವ ಚತುರ ; ಒಂದೆ ಗುರಿ, ಒಂದೆ ಶರ. ಜಾತಿಕೋತಿಗಳ […]

#ಕವಿತೆ

ಸುಗ್ಗಿ ಕಾಲ ಬಂದೈತೆ

0

ಸುಗ್ಗಿ ಕಾಲ ಬಂದೈತೆ ಹಿಗ್ಗನ್ನು ತಂದು ಕೊಟ್ಟೈತೆ ಸಂಕ್ರಾಂತಿ ಮೇಳ ಹಿಂಗೊಂದು ತಾಳ ಹೆಜ್ಜೆಯ ಗೆಜ್ಜೆಗೆ ಕಟ್ಟೈತೆ || ತಂದಾನಿ ತಾನೊ ತಾನಿ ತಂದಾನೋಽಽಽಽ ಮಲ್ಲಯ್ಯನ ನೆನೆದು ಸೋನೆ ಮುತ್ತಲ್ಲಿ ಮುತೈದೆ ಕುಂತು ರಾಶಿ ರಾಶಿ ರಾಗೀಯ ಬೀಸೈತೆ ರಾಗ ತಂದು ಕೊಟ್ಟೈತೆ || ತಂದಾನಿ ತಾನೊ ತಾನಿ ತಂದಾನೋಽಽಽಽ ಭತ್ತದ ಕೊಯ್ಲು ತೂಗಿ ಕಬ್ಬಿನ […]