Home / Poem

Browsing Tag: Poem

ಏಕೆ ಹೀಗೆ ನಮ್ಮ ನಡುವೆ ಮಾತು ಬೆಳೆದಿದೆ? ಕುರುಡು ಹಮ್ಮು ಬೇಟೆಯಾಡಿ ಪ್ರೀತಿ ನರಳಿದೆ? ಭೂಮಿ ಬಾಯ ತರೆಯುತಿದೆ ಬಾನು ಬೆಂಕಿ ಸುರಿಯುತಿದೆ ಧಾರೆ ಒಣಗಿ ಚೀರುತಿದೆ ಚಿಲುಮೆ ಎದೆಯಲಿ ಮುಗಿಲ ಬರುವ ಕಾಯುತಿದೆ ಮಳೆಯ ಕನಸ ನೇಯುತಿದೆ ನಿನ್ನ ಬಯಸಿ ಬೇಯುತ...

ರುಕ್ಸಾನಾ, ಯಾಕಿಲ್ಲಿ ಅಳುತ್ತಿರುವಿ ಮರುಭೂಮಿಯ ಬೇಗೆಗೆ ನಿನ್ನ ಭಾವನೆಗಳೂ ಉದಯಿಸುತ್ತಿಲ್ಲ ಇದ್ದ ಬಿದ್ದ ಆಶಾಂಕುರಗಳೂ ಕಮರಿಸಿಕೊಳ್ಳುತ್ತಿರುವಿ. ಬಂಗಾರ ಪಂಜರವ ಮುದ್ದಿನ ಗಿಳಿಯೇ ಹೊರಗೊಂದಿಷ್ಟು ಬಾ… ನೋಡು, ಆಲಿಸು, ಹಾರಾಡು ಕುಣಿದಾಡು ಆ...

‘ಯಾರು ತುಂಬಿಟ್ಟರೋ ಈ ಬಿಳಿಬಿಳಿ ಅಕ್ಕಿಯೊಳಗೆ ನೊರಜುಗಲ್ಲು ಕರಿ ಮಣ್ಣೆಂಟೆ ಹುಲ್ಲು ಬೀಜ ಭತ್ತ, ಹೊಟ್ಟು?’ ಸದಾ ಇವರ ಗೊಣಗು ಮೊಗದಲ್ಲಿಲ್ಲ ನಗು ಎಲ್ಲ ಶುದ್ಧವಿರಬೇಕು ಬೇಕೆಂದಾಕ್ಷಣ ಬಳಸುವಂತಿರಬೇಕು ಇವರಿಗೆ ತಿಳಿದಿಲ್ಲ ತಪ್ಪು ಅಕ್ಕಿಯದಲ್ಲ ! ಇ...

ಏನೆಂದು ಹಾಡಲೀ ಏನನ್ನು ಹಾಡಲೀ ನಿಮ್ಮ ಮುಂದೆ ನಿಂತು ಒಡೆದ ಗಂಟಲಿಂದಾ ಬಿರಿದ ಒಣಾ ನಾಲಿಗಿಂದ ||ಪ|| ಕಣ್ಣು ಕಣ್ಣುಗಳ ಚಿಕ್ಕೆ ಕಾಂತಿಗಳು ನಂದಿ ನರಳುತಿರಲು ಬಾನ ಚಿಕ್ಕೆಗಳ ಬೆಣ್ಣೆ ಚಂದ್ರಮನ ತೋರಿ ಹಾಡಲೇನು ಮಣ್ಣ ಜೀವಗಳ ಬಳ್ಳಿ ಗಿಡಗಳಿಗೆ ಮುಳ್ಳ...

ಎಂದೂ ಇರದ ನೋವು ಇಂದೇಕೆ ಹೊಮ್ಮಿದೆ, ಹಿಂಡಿದೆ ನನ್ನ ಮನವನ್ನೆಲ್ಲ ಉಲ್ಲಾಸದ ಭಾವ ಇಷ್ಟೂ ಇಲ್ಲ! ಬಾನೊಳಗೆ ಮುಗಿಲೇ ಇಲ್ಲ ಬರೀ ಬೋಳು ಮೌನ, ಎಲೆಯೊಂದೂ ಅಲುಗುತ್ತಿಲ್ಲ ಸೃಷ್ಟಿ ಚಲನ ಹೀನ. ಏತಕೆ ಲೋಕ ಈ ರೀತಿ ಕಂಗಾಲಾಗಿದೆ, ಬರಿ ಭೀತಿ ಕಾಡಿದೆ ಸೃಷ್ಟ...

ಮರುಭೂಮಿಗೆ ಬಾಯಾರಿಕೆ ಇಲ್ಲ ಮೋಡ ಮಳೆಗೆ ವಸಂತವಾದೀತೆಂದುಕೊಂಡಿದ್ದೆ- ಉಗ್ರ ಸೂರ್ಯನ ಹಪಹಪಿಗೆ ಮಳೆ ಇಳಿದು ಹಳ್ಳ ಹೊಳೆಯಾಗಿ ಹರಿದು ತೃಷೆ ಹಿಂಗಿಸಬಹುದೆಂದುಕೊಂಡಿದ್ದೆ- ಕೆರೆ ಹಳ್ಳ ಪಳ್ಳ ಕೊಳ್ಳಗಳಲ್ಲಿ ಒಂಟೆಗಳು ಖುಷಿಯಾಗಿ ರಾಡಿಯಲಿ ಮಿಜಿ ಮಿಜಿ ...

ಶತ ಶತಮಾನಗಳಿಂದ ಅದೇ ದಡ ಅದೇ ಕಡಲು ಕಡಲ ಸಿಟ್ಟಿಗೆ ಮತ್ತೆ ಮತ್ತೆ ಹಲ್ಲೆಗೊಳಗಾಗುವ ದಡದ ಒಡಲು. ಕಬಂಧ ಬಾಹುಗಳ ಚಾಚಿ ದಡವನೇ ಬಾಚಿ ನುಂಗುವ ಹುನ್ನಾರ ಕಡಲಿನದು ದೈತ್ಯ ಕಡಲಲೆ ಎಷ್ಟಾದರೂ ತಟ್ಟಲಿ ಹೇಗಾದರೂ ಮುಟ್ಟಲಿ ಮತ್ತೆ ಮತ್ತೆ ಬೆನ್ನಟ್ಟಲಿ ಒಂದ...

ನಲ್ಲೆ ನಮ್ಮ ಪ್ರೀತಿಗೇಕೆ ಇಂಥ ಪಾಡು ಈ ನೆಲೆ? ಆಯಿತೇಕೆ ಬಾಳು ಹೀಗೆ ಗಾಳಿಗೆದ್ದ ತರಗೆಲೆ? ನೀ ಉತ್ತರ ನಾ ದಕ್ಷಿಣ ಸೇರಲಾರದಂತರ, ತಾಳಿ ಹೇಗೆ ಬಾಳಿಯೇವು ವಿರಹವನು ನಿರಂತರ? ಇಲ್ಲಿ ಒಲುಮೆಗೆಲ್ಲಿ ಬೆಲೆ ಕಲೆಯಗೊಡದ ಜಗವಿದು, ಕನಸೊಂದೇ ದಾರಿ ನಮಗೆ ಮ...

ಕೆಂಪು ಸಮುದ್ರದ ಕನ್ಯೆ ಸೂರ್ಯನಿಗೆ ಪ್ರಾರ್ಥಿಸಿಕೊಂಡಾಗ ಕನಸಿನ ಮುತ್ತುಗಳು ಮಾಲೆಯಾಗಿ ಜೇನು ಹೊಳೆಯಾಗಿ ಕಾಮನ ಬಿಲ್ಲಾಗಿ ಬೆಳದಿಂಗಳಾಗಿ ಬಿಸಿಯುಸಿರಿನಲಿ ಕೆನ್ನೆ ಕಚ್ಚಿದ ಕೆಂಪು ಕೆನ್ನೆ ಅರಳಿಕೊಂಡು ಮತ್ತೇರಿದಾಗ ಕನ್ಯೆಯ ಒಡಲಾಳದಲ್ಲಿ ಮುಂಜಾವಿನ...

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...