
ನನ್ನ ಕವಿಯೆಂದೆನುವ ಮೆಚ್ಚುಮಾತೇಕೆ? ಪದದ ಸಮ್ಮಿಳನವೋ ಈ ನನ್ನ ಕವಿತೆ! ಎದೆಯ ಉಮ್ಮಳವಿದುವೆ, ಅದು ನಿನ್ನ ಕುರಿತೆ ಕೊರಗುತಿಹೆ ಕೊರಳಿದಕೆ ಹೊನ್ ಪದಕವೇಕೆ? ಇದು ಕವಿತೆಯಹುದೆನುವ ಮಾತು ಸರಿಯಲ್ಲ -ಕವಿಯು ನಾನಲ್ಲ- ಇದು ನಿನ್ನ ನೂರಾರು ಛಾಯೆಗಳ ಒರೆ...
ಹುಲ್ಲು ಹೇಗೆ ಹಾಲಾಗುತ್ತೆ ಹಸುವಿನ ಹೊಟ್ಟೇಲಿ? ಹಕ್ಕಿಗೆ ಉಸಿರು ಕಟ್ಟೋಲ್ವಾಂತ ಪುಟ್ಟನೆ ಮೊಟ್ಟೇಲಿ? ಮೋಡದ ತುಂಬ ನೀರಿದ್ರೂನೂ ಅದ್ಹೇಗೆ ತೇಲತ್ತೆ? ರಾತ್ರೋ ರಾತ್ರಿ ಸೀ ಹಾಲೇಕೆ ಹುಳಿ ಮೊಸರಾಗುತ್ತೆ? ದೇವ್ರೇ ಇದೆಲ್ಲ ಮಾಡ್ತಾನಂತೆ ಕಷ್ಟ ಇಲ್ದೇನ...
ಮಹಾಭಾರತದ ಮಹಾಮುನಿಗಳಲಿ ದೂರ್ವಾಸ ಅಪೂರ್ವ ನಿನ್ನ ಮಹಿಮೆ. ವ್ಯಾಸ, ಕುವರವ್ಯಾಸ ಕಾಲ ಶಿಲೆಯಲ್ಲಿ ಕಡೆದಿಹರು ನಿನ್ನ ಅಶಾಂತ ಗ್ರೀಷ್ಮ ಮಧ್ಯಾಹ್ನ ಮೂರ್ತಿಯನು. ಆರ್ಯಾವರ್ತ ಒಂದು ಕಾಲದಲಿ ಆಶ್ರಮ ನಿಯಮ ಹದಗೆಟ್ಟು ತ್ಯಾಗದ ಮುಖದ ಮೇಲೆ ಭೋಗದ ಬಂಗು ಬರ...
ಯಾರ ಕಂಡು ಹೆದರಿ ಓಡುವೆ? ಯಾರ ಹಿಡಿಯಲು ಸರ್‍ರ ಸಾಗುವೆ? ಒಂದೆ ದಾರಿಯೊಳೆಂದು ನಡೆಯುವೆ- ಎಲ್ಲಿ ನಿಲ್ಲುವಿ ಹೇಳೆಲೊ? ಬೆಟ್ಟು ಅಗಲದ ದಾರಿ ಮಧ್ಯದಿ ಕಡಿದ ಬಯಲಿನ ಹೊಂಡ ನಡುವಲಿ ಕಂಡ ಕಂಡ ತಗ್ಗು ತಳದಲಿ- ಎಲ್ಲಿ ಮುಂದಕೆ ಹರಿಯುವೇ? ಹನಿಯ ಜಿನುಗಿಸಿ...
ಉತ್ತರ ಧೃವಕ್ಕೆ ಹೊಂದಿಕೊಂಡಿರುವ ನೆದರ್‌ಲ್ಯಾಂಡಿನ ಒಳನಾಡಿನ ಹಳ್ಳಿಯೊಳಗೆ ಹೊಕ್ಕಾಗ – ಮನಸ್ಸು – ದೇಹ ಎಲ್ಲ ನನಗರಿಯದೇ slow motion pictureದಂತಾಗಿ ಹಗುರಾಗಿ ಹಕ್ಕಿಯಾಗಿ ಹಾರಾಡಿತು. ಧರಗಿಳಿದು ಬಂದ ಸ್ವರ್ಗದೊಳಗೆ ಅದೇ ಮಳೆಯಾಗ...
ಒಮ್ಮೊಮ್ಮೆ ಎನಿಸಿವುದು ಜೀವವಾರಿದಮೇಲೆ ಸುಖಸ್ವಪ್ನಗಳ ಬಿಂಬ ಮೂಡುವುದು ಎಂದು, ಕೊಳದ ನೀರಲೆಯಳಿದು ಮೌನದಲಿ ಮಲಗಿರಲು ಸೌಂದರ್ಯದಾಗಸವ ಬಿಂಬಿಸುವ ತೆರದಿ! ಆದರೆಂತೋ ಏನೊ! ಅಂತಾದರೆನಿತುಸುಖ, ಬಾಳದು ಸ್ವಪ್ನವನು ಮರೆಯಬಹುದಾಗ! ಜೀವದೊಳಗಿಲ್ಲದುದ ಸಾವ...
ಹಣ್ಣು ಮರಗಳ ಮುಡಿಯಲ್ಲಿ, ಬೇರು? ಅಡಿಯಲ್ಲಿ, ಬಂಗಲೆ ಬೆಚ್ಚನೆ ಬಿಸಿಲಲ್ಲಿ, ಪಾಯ? ತಳದಲ್ಲಿ. ಚಿನ್ನ ದೊಡ್ಡೋರ್ ಮೈಯಲ್ಲಿ, ಅದಿರು? ನೆಲದಲ್ಲಿ. ನದೀ ನೀರು ಬಯಲಲ್ಲಿ ಮರಳು? ತಳದಲ್ಲಿ ಬೇರು ಪಾಯ ಅದಿರು ಮರಳು ಯಾಕೆ ಕಾಣೋಲ್ಲ? ದುಡಿಯೋ ಹಿರಿಯರೆ ಹಾ...
ಶಿವರಾಮರಾಯರು ಹೆಸರಾಂತ ಲಾಯರು, ವ್ಯವಹಾರ ಭೂಮಿಯಲಿ ಕಾಮಧೇನು; ಬೆಟ್ಟಗಲ ಜರತಾರಿಯಂಚಿನ ರುಮಾಲೇನು, ರಟ್ಟೆಯಷ್ಟೇ ಇರುವ ಮೀಸೆಯೇನು! ಮೇಲ್ಮನೆಯೆ ಮೆಲ್ದನಿಯ ಶಿವರಾಮರಾಯರು. ಮೈಬಣ್ಣ ಕೆಂಪಿನ ಗುಲಾಬಿಯಂತೆ ; ಸತ್ಯವಂತರಿಗಿವರು ಸುಲಭದಲಿ ಲಾಯರು ಇವರಿ...
ಸ್ವಿಸ್ (Switzerland)ಗೇ ಬಿಗಿ ಬೆಂಗಾವಲಾಗಿರುವ ‘ಆಲ್ಪ್ಸ್’ ಪರ್ವತ ಶ್ರೇಣಿಗಳು ಆಕಾಶದ ಏಕಾಂತದೊಳಗೆ ತನ್ನ ಹಿಮದೊಡಲು ಹರವಿಕೊಂಡು ಪಿಸು ಮಾತಾಡುತ್ತ ಮುತ್ತಿಸುತ್ತಿದೆ. ಮುತ್ತಿನ ಜೇನು ರಸ ತುಂಬಿಕೊಳ್ಳುತ್ತಿರುವ ‘ಜಿನೇವಾ ಸರೋವರ’ ಬಿಸಿಲು ಕಣ್...















