
ಮನಸಿನಾಗಿನ ಭಾವಗಳಂತೆ ಮರದ ಮೇಲಿನ ಚಿಗುರೆಲೆಯೆಲ್ಲ ತೂರಿಬಂದ ಗಾಳಿಯಲ್ಲಿ ಕುಣಿಯುತಿತ್ತು-ಬಳುಕಿ ಬಳುಕಿ-ಕುಣಿಯುತಿತ್ತು. ತುಟಿಯ ಮೇಲಿನ ಮುಗುಳಿನ ಹಾಗೆ ಸುತ್ತ ಹಾಸಿದ ಹಸುರಿನ ಮೇಲೆ ಹಾರಿಬಂದ ಚಿಟ್ಟೆ ದಂಡು ಜಿಗಿಯುತಿತ್ತು-ನಲಿದು ನಲಿದು-ಜಿಗಿಯು...
ಅಮ್ಮಾ ಅಮ್ಮಾ ಒಂದೇ ಒಂದು ಉಂಡೆ ಕೊಡ್ತೀಯಾ? ನೆಂಚ್ಕೊಳ್ಳೋಕೆ ಜೊತೆಗ್ ಒಂದೇ ಚಕ್ಲಿ ಇಡ್ತೀಯಾ? ಅಮ್ಮಾ ನಂಗೆ ಹಸಿವೆ ಇಲ್ಲ ಊಟ ಬೇಡಮ್ಮ ಅದಕ್ಕೆ ಬದಲು ಎರಡೇ ಎರಡು ದೋಸೆ ಮಾಡಮ್ಮ. ಕ್ಲಾಸಿಗೆಲ್ಲ ನಾನೇ ಫಸ್ಟು ಎಲ್ಲ ಆಟ್ದಲ್ಲಿ! ಇನ್ನೊಂದ್ ಸ್ವಲ್ಪ ಬ...
ಸಿರಿಗೆರೆಯ ನೀರಲ್ಲಿ ಬಿರಿದ ತಾವರೆಯಲ್ಲಿ ಕೆಂಪಾಗಿ ನಿನ್ನ ಹೆಸರು. ಗುಡಿಯ ಗೋಪುರದಲ್ಲಿ ಮೆರೆವ ದೀಪಗಳಲ್ಲಿ ಬೆಳಕಾಗಿ ನಿನ್ನ ಹೆಸರು. ಜೊಯಿಸರ ಹೊಲದೊಳಗೆ ಕುಣಿವ ಕೆಂಗರುವಿನ ಕಣ್ಣಲ್ಲಿ ನಿನ್ನ ಹೆಸರು. ತಾಯ ಮೊಲೆಯಲ್ಲಿ ಕರು ತುಟಿಯಿಟ್ಟು ಚೆಲ್ಲಿಸ...
ಏಳುಲೋಕದಲೇಳು ಕಡಲಲಿ ಏಳು ಪರ್ವತ ಬಾನಲಿ ಏಳು ಸಾವಿರ ದೇಶದಿ, ಸುತ್ತಿ ಹಾರ್ವುದು ನೋಡಿ ನೆಡೆವುದು ನಿಮಿಷ ನಿಮಿಷಕೆ ಕ್ಷಣದಲಿ ಕವಿಯ ಮನಸ್ಸದೊ ಹಾರ್ವುದು! ಚಂದ್ರಲೋಕದ ಸುತ್ತು ತಿರುಗುತ ಸೂರ್ಯಕಾಂತಿಯ ನೋಡಿತು! ವಿಶ್ವಗೋಳವ ತಿರುಗಿಸಿ- ಪಾತಾಳದಾಳಕ...
ಚುಮು ಚುಮು ನಸಕು ಸುಂಯ್‌ಗುಡುವ ಅಶೋಕ ವೃಕ್ಷಗಳು ರಾತ್ರಿಯಿಡೀ ಎಣ್ಣೆಯಲಿ ಮಿಂದೆದ್ದ ಗಿಡ ಗಂಟೆ, ಗದ್ದೆ ಮಲ್ಲಿಗೆ ಸಂಪಿಗೆ ಗುಲಾಬಿಗಳು ಕೊರಡು ಕೊನರುವಿಕೆಯೆ ಸಾಲುಗಳು…. ಚಳಿ ಚುಚ್ಚಿ ಮುದುರುವ ಕಂದಮ್ಮಗಳಿಗೆ ಕನಸು ಹೋದಿತೆನ್ನುವ ಬೇಸರ ತಿ...
(ಹುಡುಗಿಯರ ನಗು ಕೇಳಿ ಬರೆದುದು) ಮಲ್ಲಿಗೆಯ ಮೊಗ್ಗುಗಳ ರಾಸಿ ಅರಳಿರಲದರ ನಡುವೆ ಅರೆ ಎಚ್ಚರದಿ ಇರವನೇ ಅರೆಮರೆತು ಕಂಪಿನಿಂದಾತ್ಮವನು, ಹೃದಯವನು, ತುಂಬಿಸುತ ಬೇರೊಂದು ವಿಶ್ವವನೆ ಸೇರಿದಂತಾಗುವುದು ನಿಮ್ಮ ಕಿಲಕಿಲ ನಗುವು ದೂರದಿಂ ಗಾಳಿಯಲಿ ತುಂಬಿ ...
ಇಲೀ ಮರೀ ಇಲೀ ಮರೀ ಗಿಡ್ಡು ಪುಟಾಣಿ ಇಲೀ ಮರೀ ಆಟಕ್ ಬಂದ್ರೆ ಕೊಡ್ತೀನಿ ಬಿಸಿ ಬಿಸಿ ಕಡ್ಲೆ ಮಸಾಲ್ ಪುರಿ. ಪುರ್ ಪುರ್ ಓಡ್ತೀ ಯಾಕಪ್ಪ? ನಾನೇನ್ ಪೋಲೀಸ್ ಅಲ್ಲಪ್ಪ ಹತ್ತಿರ ಬಂದು ಆಡಿದರೆ ತಿಂಡೀ ತೋರಿಸ್ತೀನಪ್ಪ. ಚಕ್ಕುಲಿ ತುಂಬಿ ಡಬ್ಬಕ್ಕೆ ಅಮ್ಮ ...
ಪ್ರಸನ್ನ ಶರದಿಂದುಮಂಡಲದಂತೆ ‘ಶ್ರೀ’ ಗುರುವೆ ನೀವೆನ್ನ ಹೃದಯಪೀಠವನೇರಿದಂತೆನಗೆ ನಿಮ್ಮ ಸಂಸ್ಮರಣೆ. ನಿಮ್ಮಿಂದ ಪಂಪನ ಜೊತೆಗೆ ಬಂದರಾ ಪೇಕ್ಸ್‌ಪಿಯರ್ ಸಾಫೊಕ್ಲೀಸ್ ಭಾಸರೆ; ದೈವಹತ ಧನ್ಯಾತ್ಮನಾದನಶ್ವತ್ಥಾಮನ್. ಇತ್ತ ‘ಇಂಗ್ಲಿಷ್ ಗೀತೆ’ ಹೊಸತೊಂದು ...
ತಟಪಟ ತಟ್ಟುತ ಒಟ್ಟಿನಲಿ ಕೋಲಿಂ ಕೆಲವರು ಹೊಲದಲ್ಲಿ, ಕಿಣಿಕಿಣಿ ಮಣಿಯಿಂ ಕುಣಿಸುತಲಿ, ಗಲಗಲ ಬಾಲರ ಒಲಿಸುತಲಿ. ಡಂ ಢಂ ಡಾಂಬರ ಗಡಗಡಿಸಿ ಪೆಂಪಾಪೆಂಪೆಂದು ಪೇಳಿರಿಸಿ, ಲಲ್ಲಾಲ್ಲೆನ್ನುತ ಸೊಲ್ಲನೊಂದು ಬಾಯೊಳು ಸಾಯಲು ಹಾತೊರೆದು! ರತ್ನದ ಚಿನ್ನದ ಬಣ್...
ಆಕಾಶದ ರಾವುಗನ್ನಡಿಯೊಳಗೆ ನನ್ನ ನಾ ದಿನನಿತ್ಯ ನೋಡಿಕೊಳ್ಳುತ್ತೇನೆ ಪರೀಕ್ಷಿಸಿ ಉತ್ತರಿಸಿಕೊಳ್ಳುತ್ತೇನೆ ನಸುಕಿನ ಮುಗ್ಧ ನಿದ್ದೆಯಿಂದೆದ್ದಾಗ ನನ್ನೊಂದಿಗೆ ಮಂದಸ್ಮಿತ – ಉಷೆ ಬರುತ್ತಾಳೆ ಹೊಸ್ತಿಲಿಗೆ ನೀರು ಹಾಕಿ ನಮಸ್ಕರಿಸುವಾಗ ಬಾಳೆ ತೆ...














