Home / Poem

Browsing Tag: Poem

ಆಗಲೇ ಇಟ್ಟ ನೂರಾರು ಹೆಜ್ಜೆಗಳ ಮೇಲೆ ನಾವೂ ಹೆಜ್ಜೆ ಇಟ್ಟು ಸಂತೆಯೊಳಗಿಳಿದಿದ್ದೇವೆ ಗೊಡ್ಡು ಸಂಪ್ರದಾಯಗಳ ಗಂಟು ಕಟ್ಟಿ ಅಜ್ಜನ ಪೆಟ್ಟಿಗೆಯಲ್ಲಿ ಒಗೆದು ಅಜ್ಜನ ಕಂಬಳಿ ಎಳೆದು ತುಳಿದು ಸಂತೆಯೊಳಗಿಳಿದಿದ್ದೇವೆ. ಹೆಜ್ಜೆಯ ಮೇಲೆ ಹೆಜ್ಜೆ ಇಡುತ್ತಲೇ ಬ...

ನಮ್ಮ ಹಿಂದಿನವರಿಗೆ ವಸ್ತುಗಳು ಬರೇ ಸಾಧನಗಳಾಗಿರಲಿಲ್ಲ ವಸ್ತುಗಳಾಗಿದ್ದವು. ಉದಾಹರಣೆಗೆ ಕನ್ನಡಿ ಬರೇ ಮುಖ ನೋಡುವುದಕ್ಕಾಗಿರಲಿಲ್ಲ ಅದಕ್ಕೊಂದು ದೊಡ್ಡ ಫ್ರೇಮು ಬೇಕಿತ್ತು.  ಫ್ರೇಮಿಗೆ ಹಲವು ಬಳ್ಳಿಗಳೂ, ಬಳ್ಳಿಗೆ ಹಲವು ಹೂವುಗಳು. ನಮಗೆ ಬರೇ ಕನ್...

ಡೊಳ್ಳು ಹೊಟ್ಟೆ ಗುಂಡ ತಿಂಡಿ ತಿನ್ನೋಕ್ ಬಂದ, ಹಸಿವು ಇಲ್ಲ ನಂಗೆ ಚೂರೇ ತಿಂತೀನ್ ಅಂದ. ಒಂದು ತಟ್ಟೆ ಉಪ್ಪಿಟ್ಟು ಎರಡೇ ನಿಮಿಷ, ಢಂ! ಮೂರೇ ದೋಸೆ. ನಾಕೇ ರೊಟ್ಟಿ ಐದೇ ಇಡ್ಲಿ ಢಂ! ಆರು ಒಡೆ ಢಂ ಏಳು ಉಂಡೆ ಢಂ, ಎಂಟೊ, ಒಂಬತ್ತೊ ಪೂರಿ ಅಷ್ಟೆ ಢಂ ಢ...

ಯಕ್ಷಿಯನ್ನು ತೊರೆದಂದು ಯಕ್ಷ ಕಳಿಸಿದ್ದ ಮೇಘ ದೂತ ಪತ್ರ ಒಯ್ಯಲಿಕೆ ದಾರಿಯಿಲ್ಲದಿತ್ತಾಗ ಭಾವ ದೂತ ಅಕ್ಷರಕ್ಷದ ಯಕ್ಷ ಲೋಕವನು ಪತ್ರ ತೋರದೇನು ರಕ್ತ ರಕ್ತ ಉಸಿರಿಸುವ ರಾಗ ಅನುರಕ್ತಿ ಹರಿಸದೇನು ದೇಹ ದೂರದಲಿ ಇದ್ದರೇನು ಈ ದಾಹಕೆಲ್ಲಿ ದೇಹ ಮನೋಲೋಕದ...

ಕಿವಿಗಳು ಬೇಕು ಸಾರ್‍ ಕಿವಿಗಳು! ಕತ್ತೆಯ ಕಿವಿಗಳು ಕುದರೆಯ ಕಿವಿಗಳು ಹಸುವಿನ ಕಿವಿಗಳು ಎತ್ತಿನ ಕಿವಿಗಳು ಕವಿಯ ಭಂಡಾರ ತುಂಬಲು ಆನೆಯ ಕಿವಿಗಳು ಸಮಯವಿದ್ದರೆ ಕಾವ್ಯಕ್ಕೆ ಮಾನವನ ಕಿವಿಗಳು! *****...

ಅಕ್ಕ! ಆಗಾಗ ನುಗ್ಗುತ್ತಲೇ ಇರುತ್ತವೆ ನಿನ್ನ ಸತ್ಯ ಶೋಧದ ಅಮೃತ ವಚನಗಳು ಗುಣ ಗುಣಿಸುತ್ತೇನೆ ಕನವರಿಸುತ್ತೇನೆ ಇಂದು ಬೆಳಿಗ್ಗೆ ಇದ್ದಕ್ಕಿದ್ದಂತೆ ಕದಳಿ ಬನದಿಂದೆದ್ದು ಬಂದು ನನ್ನ ಭುಜ ತಲುಕಾಡಿದೆ ಕ್ಷಮಿಸು! ಗುರುತು ಹಿಡಿಯಲೇ ಇಲ್ಲ ಮರುವೋ; ನಿದ...

ಅವನ ಅನೇಕ ಹೆಂಡಂದಿರಿದ್ದರಲ್ಲ ಅವರೇನಾದರು? ಅವರೆ?  ಕೆಲವರು ಅವರವರ ಹುಟ್ಟೂರಿಗೆ ಹೊರಟುಹೋದರು.  ಇನ್ನು ಯಾರನ್ನೋ ಆಶ್ರಯಿಸಿದರು.  ಕೆಲವರು ಚಾರ್‌ಮಿನಾರಿನ ಸಮೀಪ ಮಾಲೆಗಳನ್ನು ಕಟ್ಟಿ ಮಾರತೊಡಗಿದರು. ಹಳೆ ನಗರದ ಧೂಳು ಎಲ್ಲಾ ಹೂವುಗಳ ಮೇಲೂ ಕುಳಿ...

ಅಪ್ಪ ಹೊರಗಡೆ ಹೋದಾಗ ಕೋಟು ಬೂಟು ಹಾಕ್ಕೊಂಡು ಅಪ್ಪನ ಕಪ್ಪನೆ ಕನ್ನಡಕ ಕಣ್ಣಿಗೆ ಸರಿಯಾಗ್ ಇಟ್ಕೊಂಡು ನಾನೇ ಅಪ್ಪ ಆಗ್ತೀನಿ ದಪ್ಪನೆ ದನೀಲಿ ಕೂಗ್ತೀನಿ ಅಣ್ಣ ಅಕ್ಕ ಎಲ್ಲರಿಗೂ ಸಖತ್ತು ರೋಪು ಹಾಕ್ತೀನಿ! ಅಣ್ಣನ್ ಕರೆದು ಕೇಳ್ತೀನಿ: “ಯಾಕೋ ಸ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...