
ರಾಮ ನಾಮ ಸುಖವೋ ಸೀತಾರಾಮ ನಾಮ ಸುಖವೋ ಭರತನ ಭಕುತಿ ಸುಖವೋ ಲಕ್ಷ್ಮಣನ ಸೇವೆ ಸುಖವೋ ಹನುಮನ ಭಕ್ತಿ ಸುಖವೋ ಸೀತೆಯ ಮನ ಸುಖವೋ ದಂಡಕಾರಣ್ಯ ಸುಖವೋ ಪಂಪಾರಣ್ಯ ಸುಖವೋ ವಾಲಿ ಸುಗ್ರೀವರ ಕಥೆ ಸುಖವೋ ಲಂಕಾದಹನ ಸುಖವೋ ಶ್ರೀರಾಮ ಪಟ್ಟಾಭಿಷೇಕ ಸುಖವೋ ಸೀತಾ...
ನಾನು ಯಾವ ನೆಲದಲ್ಲಾದರೂ ನಡೆದಾಡಲಿ ನನ್ನ ಮಾತೃಭೂಮಿಯ ಮಣ್ಣವಾಸನೆಯೇ ಸೂಸಿಬರಲಿ ನಾನು ಕಾಶ್ಮೀರ ಕಣಿವೆಯ ಸುವಾಸನೆ ಮೂಸಿರುವೆನು. ದ್ವೇಷದ ವಿಷಗಾಳಿ ವರ್ಜವಾಗಿದೆ ನನಗೆ ಸ್ಫೋಟಕ ಮದ್ದಿನ ಘಮಟು ವಾಸನೆ ಒಗ್ಗಲಾರದು ನನಗೆ ಹಿಮಚ್ಛಾದಿತ ಹಿಮಾಲಯವೇ ಅಚ...
ಓಡಿ ಓಡಿ ಸುಸ್ತಾದೆ ಕ್ಯಾಲೆಂಡರ್ ಹಿಂದೆ ಓಡಿ ಕಡೆಗೆ ಮುಗ್ಗುರ್ಸ್ ಬಿದ್ದೆ ಗಡಿಯಾರದ ಹಿಂದೆ ಓಡಿ ಓಡಿ ದುಡ್ಡು ಕಂಡೆ ಇನ್ನೂ ಬೇಕು ಸಿಕ್ಕರೆ ಜೊತೆಗೆ ಎಲ್ಲೊ ಬೋನಸ್ ಉಂಡೆ ಬಾಡಿ ತುಂಬ ಸಕ್ಕರೆ ಓಡಿ ಓಡಿ ಶಿಖರವ ಕಂಡೆ ನಾನೆ ಮೊದಲಿಗನೆಂದೆ ಅಲ್ಲಿ ಮ...
ನಿನ್ ಕೈ ಕೆಳಗ್ನೋನ್ ನಾನ್ ಅಂದಾಕ್ಸ್ನೆ ‘ಲೋ’ ಅಂತ್ ಏಳ್ ಅನ್ಬೇಕ? ‘ಅಪ್ಪ ಅಣ್ಣ’ ಅನ್ನೋದ್ ಬುಟ್ಟಿ ದೊಡ್ಗಿಡ್ತನ ಮೂಲೇಗ್ ಇಟ್ಟಿ ತಿಳದೋನೇನೆ ಯಿಂಗಂತ್ ಅಂದ್ರೆ ಮೆಚ್ಕಂತೈತ ಲೋಕ? ೧ ಮೂರ್ನೆಯೋನ್ಗೆ ಚಿಕ್ಕೋನ್ ಮಾಡಿ ದೊಡ್ಮನಸಾದೇಂತ್ ತಿಳದಿ ಮ...
ಮೋರೆ ಮರೆಯಾಯ್ತಿನ್ನು ಮೇಲೆ, ಕಣ್ಣುಗಳೆಂತು ಯಾರಿಗೂ ಮೋಹನವ ಮಾಡಲಾಪವು! ಕಂದ ಕಾರಿಬಾರಿಗಳಂತೆ ಸರಿಮಾಡಿದ ಸುಖವು ಎಲ್ಲಡಗಿತೀಗ ಎಲ್ಲ? ನಾರಾಯಣಾ ! ಅಹಹ ! ಎಂಥ ಕೋಮಲ ಜೀವ! ವಾರಿಜದವೋಲ್ ಮಂಜಿನಿಂದ ಮರಣವು ಬಂತೆ ! ಪಾರಿಜಾತದ ಹೂವಿನಂತೆ ಮುಟ್ಟಿದ ಒ...
ನೀನೀತರ ನೋಡುವಿಯೇ ಇದರರ್ಥವ ಹೇಳುವಿಯೇ ನೀ ನಿನ್ನಷ್ಟಕಿದ್ದಾಗ ನಾ ನನ್ನಷ್ಟಕಿದ್ದಾಗ ಒಲುಮೆಯೆಂಬುದಿದು ಎಲ್ಲಿತ್ತೋ ಹಾಡಿಯಲದು ಬಿದ್ದಿತ್ತೋ ಕೇದಿಗೆ ಬನದಲಿ ಅಡಗಿತ್ತೋ ನದೀ ದಂಡೆಯಲಿ ಆಡುತಿತ್ತೋ ಯಾರಿಗು ಕೇಳದೆ ಹಾಡುತಿತ್ತೋ ಮಧುರ ಕಾನನವ ಕಾಡುತ...
ಈ ಗುಬ್ಬಿಯೂ ಹಾಗೇ ನನ್ನ ಮಗಳಂತೆಯೇ ಎಷ್ಟೊಂದು ಹೋಲುತ್ತದೆ? ಟೊಂಗೆಗಳ ಕಂಡರೆ ಸಾಕು ಜೋಕಾಲಿ ಹಾಕುತ್ತಾಳೆ ಈ ಗುಬ್ಬಿಯೂ ಹಾಗೇ ನನ್ನ ಮಗಳಂತೆಯೇ ಎಷ್ಟೊಂದು ಹೋಲುತ್ತದೆ. ಜಿಟಿ ಜಿಟಿ ಮಳೆಯಲ್ಲಿ ಕುಣಿದು ಕುಪ್ಪಳಿಸಿ, ಪುಕ್ಕಗಳ ನೀರು ಕೊಡವಿ ಬಿಂಕದ ಕ...
ಎದ್ದೇಳಿ ಎದ್ದೇಳಿ ಎದ್ದೇಳಿ ಎಲ್ಲ ಕನ್ನಡದ ತನವಿರುವ ಕನ್ನಡಿಗರೆಲ್ಲ ಬೆಳಗಾವಿ ನಮ್ಮಿಂದ ಸರಿಯುವ ಮುನ್ನ ಬೆಂಗ್ಳೂರು ದೆಹಲಿಯ ವಶವಾಗೊ ಮುನ್ನ ಕನ್ನಡವೆ ಮರೆಯಾಗಿ ಹೋಗುವ ಮುನ್ನ ಎದ್ದೇಳಿ ಕನ್ನಡಿಗರೇ ತೆರೆದು ಕಣ್ಣ ಕಾವೇರಿ ಕರುನಾಡ ತೊರೆಯುವ ಮುನ್...













