
ಮಕ್ಕಳಿಲ್ಲದಿದ್ದರೆ ಒಂದು ಚಿಂತೆಯಂತೆ, ಇದ್ದರೆ ನೂರೊಂದು ಚಿಂತೆಯಂತೆ; ಅನ್ನುವವರೇನು ಬಲ್ಲರು? ನನ್ನ ಚಿಂತಾಪಹಾರಕ ಚಿಂತಾಮಣಿ! ಚಿಂತೆಯ ಪಂಚಾಗ್ನಿಯಲ್ಲಿ ತಪಮಾಡಿಸಿ ತಪಸ್ವಿನಿಯ ಮಾಡಿಸಿದೆ; ಮಕ್ಕಳೆಂದರೆ ನೊಣದ ಪಾಯಸವೆಂತೆ, ಕೊರಳಿಗುರುಲೆಂತೆ; ಅನ...
ಬಗೆಬಗೆಯ ಬಗೆಗಳ ಹಗೆಯಲ್ಲಿ ಬಗೆಹರಿಯದಾಗಲು ನಿನ್ನ ನಗೆಮೊಗದ ಮುಖಾಂತರ ನಿನ್ನೆದೆಯ ಗೂಡುಸೇರುವುದು ನನ್ನ ಆಶೆ. ಎಂತೆಂತಹ ಚಿಂತೆಗಳ ಸಂತೆಯಲ್ಲಿ ಹಾದಿ ದೊರೆಯದಾಗಲು ನಿನ್ನ ಭವ್ಯ ಮುಖದ ಮುಖಾಂತರ ನಿನ್ನ ಭವಿಷ್ಯದ ಮುಗಿಲಲ್ಲಿ ಹಾರುವುದು ನನ್ನ ನಿರಾಶ...
“ಪುಷ್ಪವಿದ್ದಂತೆ ಮೊಗ್ಗೆಯನರ್‍ಪಿಸಿಕೊಂಡ ಶಿವನು! ಪಕ್ವವಾದ ಫಳವಿದ್ದಂತೆ ಕಸುಗಾಯ ಕೊಯ್ಯನು ಶಿವನು! -(ಬಾಲ ಸಂಗಯ್ಯನ ಮರಣ ಕಾಲಕ್ಕೆ ಬಸವದೇವನ ವಿಲಾಪ) ಕೊಳಲಾಗಬಹುದಾಗಿತ್ತು, ಕಳಿಲಿದ್ದಾಗಲೇ ಕಡಿದ ಕಾಳ! ದೇವ! ಮಗುವೆಂದು ತಿಳಿದಿದ್ದೆ ಆದಾ...
ಉದಯಾಸ್ತಗಳ ಜನ್ಮ ಮರಣ ಚಕ್ರದ ಬಾಧೆ ಇದಕಿಲ್ಲ; ಕುಂದಮೀರಿದೆ; ಗ್ರಹಣ ಹತ್ತದಿದ- ಕೆಂದಿಗೂ; ಬೇರೆ ಫಲದಾಸೆಯಿದನೊಣಗಿಸದು; ಅಜ್ಞಾನ ಮುಗ್ಧ ಮಾಧುರ್‍ಯ ಮಧುವಲ್ಲ; ಹೊಸ ಹರೆಯ ಹುಮ್ಮಸದ ಹುಸಿಬಿಸಿಲುಗುದುರೆಯ ಬಾಯ ಬುರುಗು ಬೆಳಕಲ್ಲ; ಇದು ಹೊಳೆಯ ದಾಟಿದ...
ವಿಜಯ ವಿದ್ಯಾರಣ್ಯ ನೀನೆ ಧನ್ಯ || ಮೈಯೆಲ್ಲ ಕಣ್ಣುಳ್ಳ ಮುಂದಾಳು ಬೇಕು| ಕುರುಡುಬಳ್ಳಿಯ ಮೆಳ್ಳ ನಾಯಕರು ಸಾಕು || ಈಸಗುಂಬಳ ಜೊತೆಯು ಬೇಕು, ಈಸುವರೆ, ! ಪಾತಾಳಕೊಯ್ಯುವಾ ಕಲ್ಲನರಸುವರೇ ? || ಯೋಗಿ, ನಿನ್ನೊಲು ನೀನು ! ದೊರೆಯನನ್ಯ | ವಿಜಯ ವಿದ್ಯ...
೧ ಜೀವಕ್ಕೆ ಕಳೆ ಕಡಮೆ ಇರುವದುಂಟು ಭಾವಕ್ಕು ಹುಸಿಬಣ್ಣ ಬರುವದುಂಟು. ಜೀವಭಾವಕ್ಕೊಂದು ಸಾಂಗತ್ಯವಿಲ್ಲದಿರೆ ಅಪಸರದ ಮಾಲೆಯನು ತರುವದುಂಟು. ಹೀಗಿಹುದ ನೋಡಿಹೆನು-ಎಂದಮೇಲೆ, “ಹಾಳಿಗೂ ಬಾಳುಂಟೇ?” ಉಂಟು, ಉಂಟು! ೨ ನಾಲಗೆಗೆ ನಿಲುಕದಾ ನ...
ಗೀತದೊಳಗಿಹ ಬಲವು ಯಾತರೊಳಗೂ ಇಲ್ಲ! ಭೂತಜಾತಂಗಳಿಗೆ ಈ ಜಗದ ದುಃಖಗಳ ಆತಂಕಗಳ ಮರೆವುಮಾಡಿ, ಮನದೊಳಗಾವ ಪಾತಕಿಯು ಪಾಪಗಳ ಹಗಲಿರುಳು ನೆನೆನೆನೆದು “ತ್ರಾತನಿಲ್ಲವೆ ? ಸತ್ತೆ! ಅಯ್ಯೊ !” ಎಂದೋರಲುತಿರೆ, ಮಾತೆಯಂತವನನ್ನು ಹಾಡಿ ಮಲಗಿಸಿ;...














