Home / Chintamani Kodlikere

Browsing Tag: Chintamani Kodlikere

ನಮ್ಮ ಕಿರಿದಾದ ಚಾವಡಿಗಳ ಹಿತವಾದ ಲೇವಡಿಗಳ ಹದದಲ್ಲಿ ಮುದಗೊಳ್ಳುತ್ತ ನೀನು ನಡೆದೆ ಆಜಾನುಬಾಹು ನಿದ್ದೆಯಲ್ಲೂ ನಮ್ಮ ಎಚ್ಚೆತ್ತ ಪ್ರಜ್ಞೆ ಶತಕೋಟಿ ನಕ್ಷತ್ರಗಳೆ ಸಾಕ್ಷಿಯಾದಂತೆ ರಸ್ತೆಯ ಮೇಲೆ ನಿನ್ನ ಧೀರೋತ್ತರ ಹೆಜ್ಜೆಗಳು ಮೌನ ಕಂಪಿಸುವಂತೆ ಶೀಟಿಗ...

ಬಸ್ಸಿಗೆ ಕಾದು ಸುಸ್ತಾದಾಗ ಸೀಟೂ ಸಿಕ್ಕದೆ ನಿಂತಿದ್ದಾಗ ಬ್ರಹ್ಮವೆ ಸತ್ಯ ಜಗತ್ತು ಮಿಥ್ಯ ಅನ್ನಿಸಿತೇ ನಿಮಗನ್ನಿಸಿತೇ ? ತಿಂಡಿಯ ಮೇಲೆ ತಿಂಡಿಯ ತಿಂದು ಹೊಟ್ಟೆ ತುಂಬದೆಯೂ ಬಿಲ್ಲನು ಕಂಡು ಬೆಚ್ಚಿ ಬಿದ್ದಿರಿ ಎದ್ದು ನಿಂತಿರಿ ಬ್ರಹ್ಮವೇ ಸತ್ಯ ಜಗತ...

ಇಂದು ಅಘನಾಶಿನಿಯ ಬಗೆಗೆ ಮಾತಾಡುವೆ ನನ್ನೊಲವಿನ ಅಘನಾಶಿನಿ ಆ ಊರು ನದಿ ಮತ್ತು ದಡ ಇಲ್ಲಿ ನಾನು ಅವತರಿಸಿದೆ ನಿನ್ನ ಪ್ರೀತಿಯ ಅಘನಾಶಿನಿಗೆ ಅದರ ಅಪಾರ ಜಲರಾಶಿಗೆ ನನಗೆ ಸ್ಪಷ್ಟ ಕೇಳಿಸುವ ಆ ಜೀವದ ಮೂಲ ಚೈತನ್ಯದ ನಾಡಿ ಮಿಡಿತಕ್ಕೆ ಇಲ್ಲಿ ಅಂಬಿಗರು ...

ಮತ್ತೆ ಮಳೆ ಹೊಯ್ಯುವದೆ ? ಬಾಯಾರಿ ಬಿದ್ದ ಬಾವಿಗಳು ತುಂಬುವವೆ ? ಬಾಡಿ ಬಸವಳಿದ ನನ್ನ ಹಿತ್ತಲ ಗಿಡದ ಎಲೆಗಳು ಚಿಗುರುವವೆ ? ಬರಲಿದೆಯೆ ಮೋಡಗಳ ಸಾಲು ? ಕಣ್ತುಂಬಲಿದೆಯೆ ಮಿಂಚುಗಳ ಆಟ ? ಮೊದಲ ಮಳೆ ಬಿದ್ದು ಮಣ್ಣು ಘಮ್ಮೆಂದ ಸಂಭ್ರಮ ? ಹರಕು ಕೊಡೆಗ...

ಮುಂದೆ ಬಂದರೆ ಹಾಯಬೇಡ ಹಿಂದೆ ಬಂದರೆ ಒದೆಯಬೇಡ ಎಂದು ಕಂಡ ಕಂಡವರಿಗೆಲ್ಲ ಕೈ ಮುಗಿದು ಕಂಬನಿಯ ಕೆಚ್ಚಲು ಕರೆಯಬೇಡ ಹುಟ್ಟಿಸಿದ ದೇವರು ಹುಲ್ಲನ್ನ ಮೇಯಿಸುವ ನನ್ನ ಭವಿಷ್ಯವ ನೀನೇ ಬರೆಯಬೇಡ ಹೋಗು ನಿನಗಾಗಿ ಹಾತೊರೆದ ಹುಲಿಯ ಎದುರೇ ನಿಲ್ಲು ಒಡ್ಡು ಗು...

ಜ್ವರ ನೂರಾನಾಲ್ಕು ಡಿಗ್ರಿಗೆ ಏರಿ ಎದೆ ಹಾರಿ ಹೋದಾಗಲೂ ಈ ಡಿಗ್ರಿಗಳ ಕೋಟೆಗಳ ಮೀರಿ ಪ್ರಾಣಪಕ್ಷಿ ಎನ್ನುತ್ತಾರಲ್ಲ ಅದು ರೆಕ್ಕೆ ಬಿಚ್ಚಿ ಪುರ್ರಂತ ದಿಗಂತ ಸೇರಿ ಅಂಥದೇ ಪಕ್ಷಗಳ ಪ್ರಭಾತಫೇರಿ ಕೂಡಿಕೊಳ್ಳಲಿ ಈ ಜೀವ ಗರಂ ಇದ್ದುದು ನರಂ ಆಗಲಿ ಅನ್ನಲಿ...

ನಿನ್ನ ಕಣ್ಣ ಹೂದೋಟದಲ್ಲಿ ನಾ ದುಂಬಿಯಾಗಿ ಬರುವೆ ನಿನ್ನ ಹಗಲ ಹಾಡುಗಳ ಹೂವುಗಳ ನಗುವ ನೋಡಲಿರುವೆ ನಿನ್ನ ತೋಟದಾಚೆ ನನಗು ತೋರದಾಚೆ ಸುಗ್ಗಿಯಾಟದಲಿ ಹಿಗ್ಗಿ ನಲಿವ ಕಿನ್ನರರ ಕೂಡಲೆಂದು ಒಲವಿನಾಟದಲಿ ನಲಿವಿನಾಟದಲಿ ನೋವು ತೀರಲೆಂದು ನಿನ್ನ ಬೇಡಿಕೆದಾ...

ನನ್ನ ಕೈಗಡಿಯಾರದ ಹಸಿರು ಹೂತೋಟದಲ್ಲಿ ದಿವಸಗಳ ಮೊಗ್ಗುಗಳು ಅರಳುತ್ತವೆ ಸೆಕೆಂಡು ನಿಮಿಷ ಗಂಟೆಗಳ ದುಂಬಿಗಳು ಸುತ್ತು ಮುತ್ತು ಮಧುರ ಆಘಾತಕ್ಕೆ ಪದವಾಗಿ ಹಿತವಾಗಿ ಲೆಕ್ಕಕ್ಕೆ ಸಿಕ್ಕದ ನಾನಾ ಬಣ್ಣದ ಹಕ್ಕಿಗಳು ಬಂದು ಹೂವುಗಳ ಅಡಿಗೆ ತಲೆಮರೆಸಿ ಹಾಡಲ...

ಗೋಪಾಲನ ಗೆಜ್ಜೆಯ ಗಲ ಗಲ ತುಂಬುತ್ತಿದೆ ಕಿವಿಯ ಯಶೋದೆಯ ಜೋಗುಳದ ಹಾಡು ತಟ್ಟಿ ಮಲಗಿಸಿದೆ ಇವನ ಜಗದೋದ್ಧಾರನ ಈ ರಾತ್ರಿ ಯಾಕೆ ತಣ್ಣಗಿದೆ? ಬೇಸಿಗೆಯ ಉರಿ ಸೆಕೆಯು ಜೀವ ಹಿಂಡಿ ಬೆವರು ಬಸಿಯಿಸಬೇಕು ಅದರ ಬದಲು ತಣ್ಣನೆಯ ಗಾಳಿ ಕಚಗುಳಿ ಇಟ್ಟು ಜೀವ ನಲಿ...

ಕಂಬನಿಯ ಕಪ್ಪು ಸಮುದ್ರದ ಆಚೆ ಅಗೋ ಉಪ್ಪು ಹರಳುಗಟ್ಟಲಾರಂಭಿಸಿದೆ ಪ್ರಾಣಾಯಾಮಕ್ಕೆ ಬಿಗಿ ಹಿಡಿದ ಉಸಿರು ಈಚೆ ಕಡೆಯಿಂದ ಹೊರ ಜಿಗಿದಿದೆ ಸ್ಥಿತಪ್ರಜ್ಞೆ ಕಲ್ಲುಬಂಡೆಯ ಕೊರಕು ಹೂ ಬಿಡಲು ಎದ್ದಿರುವ ಜೀವಕ್ಕೆ ತಾಯಾಗಿದೆ ಅವಕಾಶದ ಅವಗೃಹೀತ ಖಾಲಿ ಜಾಗಕ್...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...