ನಿನ್ನ ಕಣ್ಣ ಹೂದೋಟದಲ್ಲಿ ನಾ ದುಂಬಿಯಾಗಿ ಬರುವೆ
ನಿನ್ನ ಹಗಲ ಹಾಡುಗಳ ಹೂವುಗಳ ನಗುವ ನೋಡಲಿರುವೆ
ನಿನ್ನ ತೋಟದಾಚೆ
ನನಗು ತೋರದಾಚೆ
ಸುಗ್ಗಿಯಾಟದಲಿ ಹಿಗ್ಗಿ ನಲಿವ ಕಿನ್ನರರ ಕೂಡಲೆಂದು
ಒಲವಿನಾಟದಲಿ ನಲಿವಿನಾಟದಲಿ ನೋವು ತೀರಲೆಂದು
ನಿನ್ನ ಬೇಡಿಕೆದಾಳುವ
ನನ್ನೆ ತೇಲಿಬಿಡುವೆ
ಮೇರೆ ಮೀರಿ ಉರಿದುಕ್ಕುತಿರುವ ಉಮ್ಮಳದ ಉಪ್ಪ ನುಂಗಿ
ನಂಜನುಂಡ ನಂಜುಂಡನವತಾರ ಎಂಬ ದಿವ್ಯ ಭಂಗಿ
ನಾನು ಕೋರುವಾಚೆ
ಏನು ಸೇರುವಾಚೆ-
*****