ಭವಸಯ್ಯಾಡಿದ್ದೇನೋ ಮೊಹರಮ್ಮಕೆ

ಭವಸಯ್ಯಾಡಿದ್ದೇನೋ ಮೊಹರಮ್ಮಕೆ
ಅಲಾವಿಯಾಡಿದ್ದೇನೋ || ಪ ||

ಭವ ಎಂಬ ಭವಸಯ್ಯ
ಅರುವಿನ ಅಲಾವಿ
ಮೂರು ಕೂಡಿದಲ್ಲೆ
ಮೊಹರಮ್ಮ ಮಾಡಿದ್ದೆ || ೧ ||

ದುಷ್ಟ ಯಜೀದನು
ಸುಖಸು ಜಾತಿ ಮುಸಲ್ಮಾನನು
ಝೇರೆಭಾರ ಘಟಪಟ ಕತ್ತಲ ರಾತ್ರಿ
ಝಟಪಟ ಘಟವೇರಿ ದರದಪವಾಯಿತು || ೨ ||

ತನು ಮಸೂತಿಯೊಳು
ಪಂಚತತ್ವ ಪಂಜಽಯ ಕೂಡಿಸಿದ್ದೇನೋ
ಈಡ ಪಿಂಗಳ ಹಸೇನಿ ಹುಸೇನಿ
ಜೀತಮೌಲಾಲಿಗೆ ತನುವನ್ನು ಒಪ್ಪಿಸಿ || ೩ ||

ನಡೆನುಡಿ ಲಾಡಿ ಮಾಡಿದ್ದೆ
ನಾ ಹರಕೆಯ ಬೇಡಿ ಕೊರಳೊಳಗೆ ಹಾಕಿಕೊಂಡಿದ್ದೆ
ಪಂಚಾಕ್ಷರಿ ಮಂತ್ರ ಪಾತೇಹ ಕೊಟ್ಟು
ಕಂದೂರಿ ಮಾಡಿ ಫಕ್ಕೀರಗೆ ಉಣಸಿದ್ದೆ || ೪ ||

ಸತ್ಯುಳ್ಳ ಶರಣರು ಪೈಗಂಬರರು
ಸತ್ಯವ ತೋರಿದರು
ಸತ್ತು ಸಾಯದ್ಹಾಂಗ ಇದ್ದು ಇಲ್ಲದ್ಹಾಂಗ
ಮಕ್ಕಾಮದೀನದೊಳು ಐಕ್ಯಾದ ಮಡಿವಾಳಗೆ || ೫ ||
*****

 

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಒಲವೇ… ಭಾಗ – ೧೦
Next post ಆಚೆ

ಸಣ್ಣ ಕತೆ