
ಮುಂದೇನು? ಮುಂದೇನು? ಓ! ಹಸುಳ ಜೀವವೇ ! ನಿನ್ನ ಹಾರಿಕೆಯಲ್ಲಿ? ಕತ್ತಲೆಯು ಕವಿದಿರಲು ಮುಳ್ಳುಗಾಡನು ಸೇರಿ ಕಾಲೆಲ್ಲ ನವೆದಿರಲು ನಿನ್ನ ನಂಬಿಕೆಯೆಲ್ಲಿ? ಆಧಾರ? ಭಾವವೇ ನಿನ್ನನ್ನು ತಿನ್ನುತಿದೆ. ನಿನಗಾಗದಾದವೇ ನಿನ್ನ ರಕ್ತವನುಂಡು ಬೆಳೆದ ತತ್ತ್ವ...
ತಿರುಗಿ ಬಾ! ಹೃದಯವೇ! ಹುಲ್ಲುಮಾನವರೊಡನೆ ದಂದುಗವು ಸರಿಬರದು. ನಿನ್ನ ಪಲ್ಲವನೇತ್ರ ಬೆಳಗುಜಾವವಿದೆಂದು ಮೋಹಗೊಂಡಿತು ಮಾತ್ರ. ಅಲ್ಲಿಹುದು ಕತ್ತಲೆಯ ಮೊನೆ, ಹೇಯವಿಹ ನಟನೆ! ತಿರುಗಿ ಬಾ: ತ್ಯಜಿಸಿಬಿಡು ರಜನಿಯನು, ಆ ಮೃಡನೆ ಮುಟ್ಟದಿಹ ಬೂದಿಯನು. ಇನ...
ನನ್ನ ಮಾತುಗಳು ಉತ್ತರಾರ್ಧ ೧ ಇಲ್ಲಿಯ ಕವಿತೆಗಳನ್ನು ನಾನು ನೀಳ್ಗವಿತೆಗಳೆಂದು ಕರೆದಿದ್ದೇನೆ. ಅದಕ್ಕೆ ಕಾರಣವಾದರೂ ಇದೆ. ಪ್ರತಿಯೊಂದು ಕವಿತೆಯೂ ಒಂದು ಸ್ವತಂತ್ರವಾದ ಭಾವನೆಯ ಸುತ್ತು ಬೆಳೆದ ಬಂದ ದೇಹನವೆನ್ನಬಹುದು. ಯಥಾವತ್ತಾಗಿ ಈ ಭಾವನೆಯನ್ನು ...
ಸುವ್ವಿಗೆಯ್ಯುವೆ ನಿನ್ನ ಬಾ! ಬಾ! ಪರಂಜ್ಯೋತಿ ಇಂತು ಹವ್ವಗೆ ಬಂದೆ ತಮಸಿನೆದೆಯೊಳಗಿಂದ. ನಿನ್ನ ಮೋರೆಯಲಿಹುದು ಚಕ್ರಪಾಣಿಯ ಚಂದ ಅಲ್ಲದಲೆ ನಿನ್ನದಿದೆ ಲೋಕೈಕ ವಿಖ್ಯಾತಿ! ನಿನ್ನೊಳೊಗುಮಿಗುತಿರುವ ತೇಜದೊಂದು ದಿಧೀತಿ ತರಿದು ಪರಿಪರಿಯಾಗಿ ಮಾಡುವದು ...
ಸೃಷ್ಟಿ ನಿರ್‍ಮಾಣದೊಳಗಿರುವ ದೇವನ ಗುಟ್ಟು ಹೊಳೆಯಬಹುದೆಂದೆಣಿಸಿದಾ ಕನ್ನೆ ಮಿಡುಕಿದಳು ಅದರ ಸುಳಿವಿಲ್ಲೆಂದು. ಸಂಭ್ರಮಿಸಿ ಹುಡುಕಿದಳು ಮುಕುಲನಿಕರನ, ಪುಷ್ಪಮಂಜರಿಯ ಮುತ್ತಿಟ್ಟು. ಪ್ರಕೃತಿಯಾಚೆಗೆ ಪುರುಷ; ನೋಡಿದಳು ಮನವಿಟ್ಟು : ಚೆಲುವ ಚೈತನ್ಯವ...















