
ಎಲ್ಲಿ ನೋಡಿದಲ್ಲೆಲ್ಲ ನೀರೇ ನೀರು! ತಾನೇ ತಾನಾಗಿ ಮೆರೆಯುವ ಮೊರೆಯುವ ನೀರು! ನನೆ ಕೊನೆಯಿಲ್ಲದ, ಚಿರಂಜೀವಿಯಾದ ನೀರು! ಮುಗಿಲನಣಕಿಸುವ ದಟ್ಟನೀಲಿಯಾದ ನೀರು! ಅಹಾ! ನೀರೆ! ನಿನ್ನ ಸೌಭಾಗ್ಯವೇ ಸೌಭಾಗ್ಯ! ನಿನ್ನ ಚಿರಜೀವಿಪಟ್ಟವೇ ಪಟ್ಟ! ತಬ್ಬುತಿರು...
ಮಧ್ಯರಾತ್ರಿಯಲ್ಲಿ, ಭೂಮಧ್ಯಸಮುದ್ರದ ಮಧ್ಯದಲ್ಲಿ ತೇಲುತಿಹ ಹಡಗದಲ್ಲಿ ನಿದ್ರಿಸುತ ಸವಿಗನಸು ಕಂಡು ಕಣ್ದೆರೆದು ನೋಡೆ,- ಆಹಾ! ಎನಿತು ನಿಚ್ಚಳವಿಹುದು! ನೆರೆದಿಹುದು ಮುಗಿಲಿನಲ್ಲಿ ತಾರೆಗಳ ನಿಬ್ಬಣವು. ಕೋಟಿ ನಕ್ಷತ್ರಗಳು ಕಣ್ಣುಬಿಡುತಿವೆ ನಭದಿ: ಬ...
ತೆರೆಗಳ ಕದನವೇಕಯ್ಯ,-ತೆರೆಗಳ ದೊರೆಯೆ! ಹೂಂಕರಿಸುವ ನೀಲಾಶ್ವಗಳಂತೆ, ಅರುಣನ ಕುದುರೆಗಳಂತೆ, ಕಾಲದಂತೆ,- ತಾಕಲಾಡುತಿಹವು ತೆರೆಗಳು. ಪೀಕಲಾಡುತಿಹವು ನೊರೆಗಳು. ಈ ತೆರೆಗಳಲ್ಲಿ ಯಾವುದನ್ನೇರಿದೆ ಹಯವದನ? ಏರಿ ಎಲ್ಲಿಗೆ ನಡೆದೆ? ತೆರೆಗಳ ತುಮುಲ ಯುದ್...














