
ಬನ್ನಿ ಮಕ್ಕಳೆ ಚಂದ ಮಕ್ಕಳೆ ಚಂದ ತೋಟವ ಬೆಳೆಯುವಾ || ನಾವು ಸೈಸೈ ನಾವು ಹೈಹೈ ನಾವು ಪೈಪೈ ಪುಟ್ಟರು ನಾವು ಪಾವನ ನಾವು ಈವನ ನಾವು ದೇವನ ಹಣ್ಗಳು ಹಸಿರು ನಾವು ಹೂವು ನಾವು ನಾವು ಹಣ್ಣಿನ ಗೊಂಚಲು ಹಕ್ಕಿ ನಾವು ಹಾಡು ನಾವು ನಾವು ಸಿಡಿಲಿನ ಗೊಂಚಲು ...
ಎಲೆಲೆ ರಾಣಿ ಸುರತ ಜಾಣಿ ಸಾಕು ನಿನ್ನಯ ನೂಪುರಂ, ಕೂಳು ಮರೆತೆನು ಕಾವು ಮರೆತೆನು ನೀನೆ ಚಲುವಿನ ರೂಪುರಂ ಹೂವು ಅರಳಿವೆ ಬಳ್ಳಿ ಚಿಗುರಿವೆ ನಿನ್ನ ಕಣ್ಣಿನ ತೋಟದಿ ಹಕ್ಕಿ ಹಾಡಿವೆ ಮೋಡ ತೇಲಿವೆ ನಿನ್ನ ಕಂಠದ ಗಾನದಿ ನಾನೆ ಮಲ್ಲಿಗೆ ಮಧುರ ಸಂಪಿಗೆ ಇನ...
ನಾವು ಮಕ್ಕಳು ಶಿವನ ಶಿಶುಗಳು ನಾವು ಕಮಲದ ಹೂಗಳು ನಾವು ಆತ್ಮರು ಬಿಂದು ರೂಪರು ನಾವು ನಂದಾದೀಪರು ಜ್ಞಾನ ಸ್ನಾನಾ ಗೈದ ಮೇಲೆ ಮಾಯ ಸ್ನಾನಾ ಏತಕೆ ಮೌನ ಗಾನಾ ಕೇಳ್ದ ಮೇಲೆ ಸಂತೆ ಶಬುದಾ ಯಾತಕೆ ಧೂಮಪಾನಾ ಮದ್ಯಪಾನಾ ಅಣ್ಣಾ ನಿನಗೊ ಬೇಡವೊ ನೀನು ತಂದಿಯ...
ಬನ್ನಿ ಪಡೆಯಿರಿ ನನ್ನಿ ಮುಡಿಯಿರಿ ಚಿನ್ನ ಚಲುವಿನ ಚಂದಕೆ || ಪಕ್ಷಿ ಕಂಠದ ಗಾನ ತೋಟದಿ ಮುಗಿಲ ನೀಲಿಮೆ ನಕ್ಕಳು ವೃಕ್ಷ ತೊಂಗಲ ಹಸಿರ ಮಂಚದಿ ಯಕ್ಷಿ ಹೂರಮೆ ಹೂಕ್ಕಳು ಕೇಳು ಕೂಜನ ಶಿವನ ಭಾಜನ ಉಣ್ಣು ವಾಣಿಯ ಭೋಜನ ಎದ್ದು ನಿಲ್ಲೈ ಜಿದ್ದು ಹೇಳೈ ಭವ್...
ಏ ಯವ್ವ ಬುಡ್ಡವ್ವ ಗಿಡ್ಡವ್ವ ಮುದುಕವ್ವ ಉಪ್ಪವ್ವ ಉಪ್ಪೂ ತಾರೆಯವ್ವ ಪಿಚ್ಚೀನ ಗೊರಕೆವ್ವ ತೂಕಡಿಕಿ ತಕಡೆವ್ವ ಉಪ್ಪವ್ವ ಉಪ್ಪೂ ನೀಡೆಯವ್ವ ನೀನೊಂದು ಗುಳ್ಳವ್ವ ಗುಳಕವ್ವ ಉಳಕವ್ವ ಚಿಬ್ಲುಪ್ಪು ಚಳ್ಳಣ್ಣು ತಾರೇಯವ್ವ ಗೊಂಗ್ಡ್ಯಾಗ ಗೋಣ್ಹಾಕಿ ಮುಂಗ್ಲ...
ಹಕ್ಕಿಯಾಗೈ ಚುಕ್ಕಿಯಾಗೈ ಹಾರು ಮುಗಿಲಿನ ತೋಟಕೆ || ಜೇನುತುಪ್ಪಾ ಜಾರಿ ಸುರಿದಿದೆ ಚಾಚು ತಮ್ಮಾ ನಾಲಿಗೆ ವಾಣಿ ವೃಕ್ಷದಿ ಗಾನ ಸುರಿದಿದೆ ಬಿಚ್ಚು ತಮ್ಮಾ ಹಾಲಿಗೆ ಹರನೆ ಬಂದನು ಬಂದೆನೆಂದನು ಪಕ್ಷಿ ಕಂಠದಿ ನಕ್ಕನು ರಾಜಯೋಗಿಯ ತೇಜಪುಂಜದ ಮಿಂಚು ಗೊಂ...
ವಿಶ್ವಾತ್ಮನ ಮಠ ಪೀಠಾರೋಹಿಣೆ ಠೀವಿಯ ಠಾವಿನ ಶಾಂಭವಿಯೆ ಶಕ್ತಾತ್ಮಳೆ ದಿಟ ಭಟರಾರಾಧನೆ ಠಿಂ ಠಿಂ ಠೀವಿಯ ವೈಭವಿಯೆ ಜಗದಂಬಾಂಬೆ ಮಾಯಾಂಗಾರಳೆ ಉಡಿಯಲಿ ತುಂಬೌ ಮಕ್ಕಳನು ಚಿದ್ಘನ ತೂರ್ಯೆ ಋಙ್ಞನ ಧಾರ್ಯೆ ಅಪ್ಪೌ ಮುದ್ದಿನ ಸಿಸುಗಳನು ನಿನ್ನಯ ಪದತಲ ಋಷಿ...
ನನ್ನ ಕೂಸು ಗಿಣಿಯ ಕೂಸು ಹಸಿದು ಅಬ್ಬಾ ಎನುವದು ಸಂತಿ ಪ್ಯಾಟಿಗೆ ಹೊಂಟ ನನ್ನೆಡೆ ಅಂಬೆಗಾಲಿಲೆ ಬರುವದು ಅಂಗಿ ಟೊಪ್ಪಿಗಿ ಮುತ್ತು ಗೊಂಬಿ ಕೊಂಡು ಕೂಸನೆ ಮರೆತೆನು ಊರ ಮನೆಯಾ ಕೂಸು ಕಾಣುತ ನನ್ನ ಕೂಸೆ ಎಂದೆನು ಮನೆಯ ಕೂಸು ಮನೆಯಲುಳಿಯಿತು ಓಣಿ ಓಣಿಯ...













