ನಾವು ಮಕ್ಕಳು ಶಿವನ ಶಿಶುಗಳು
ನಾವು ಕಮಲದ ಹೂಗಳು
ನಾವು ಆತ್ಮರು ಬಿಂದು ರೂಪರು
ನಾವು ನಂದಾದೀಪರು

ಜ್ಞಾನ ಸ್ನಾನಾ ಗೈದ ಮೇಲೆ
ಮಾಯ ಸ್ನಾನಾ ಏತಕೆ
ಮೌನ ಗಾನಾ ಕೇಳ್ದ ಮೇಲೆ
ಸಂತೆ ಶಬುದಾ ಯಾತಕೆ

ಧೂಮಪಾನಾ ಮದ್ಯಪಾನಾ
ಅಣ್ಣಾ ನಿನಗೊ ಬೇಡವೊ
ನೀನು ತಂದಿಯ ಮಧುರ ಮಗನೊ
ಚರ್ಮ ಚಟಗಳು ಯಾತಕೊ

ಸುಟ್ಟು ಬಿಡು ನೀ ಪಾಪ ಜೀವನ
ಹಾಕು ಜ್ಞಾನದ ಹೋಮದಿ
ಚೆಲ್ಲಿ ಬಿಡುಬಿಡು ಚರ್ಮ ಚಟಗಳ
ಹಾಕು ಆಗ್ನಿಯ ಕುಂಡದಿ

ದೊಡ್ಡ ತೇರು ಎಳೆದ ಮೇಲೆ
ಗಿಡ ತೇರು ಏತಕೆ
ಆತ್ಮ ದೇವರ ಕಂಡ ಮೇಲೆ
ಗಿಂಡಿ ದೇವರು ಏತಕೆ
*****